ಮಡಿಕೇರಿ, ಜ. ೩: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಜ್ಯ ಸರಕಾರಿ ನೌಕರರ ಸಂಘ ಕೊಡಗು ಜಿಲ್ಲಾ ಘಟಕ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಕೊಡಗು ಜಿಲ್ಲಾ ಮಟ್ಟದ ರಾಜ್ಯ ಸರಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಮಂಡೇಪAಡ ಪಿ. ಅಪ್ಪಚ್ಚು ರಂಜನ್ ಧ್ವಜಾರೋಹಣ ನೆರವೇರಿಸುವ ಮೂಲಕ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಹಳೇ ಪಿಂಚಣಿ ನೀತಿಯನ್ನು ರದ್ದುಗೊಳಿಸುವ ಕ್ರಮವನ್ನು ಸರಕಾರಿ ನೌಕರರು ವಿರೋಧಿಸಿದ್ದು, ಈ ನಿಟ್ಟಿನಲ್ಲಿ ಹೊಸ ನೀತಿ ಕೈಬಿಟ್ಟು ಹಳೆಯ ಪಿಂಚಣಿ ನೀತಿ ಮುಂದುವರೆಸಲು ಸರಕಾರ ಬದ್ಧವಾಗಿದೆ. ಸಂಘಟನೆ ಮೂಲಕ ಮತ್ತೊಮ್ಮೆ ಮುಖ್ಯಮಂತ್ರಿ ಬಳಿ ನಿಯೋಗ ತೆರಳಿ ಈ ಕುರಿತು ಪ್ರಸ್ತಾಪಿಸಿ ಗೊಂದಲ ಪರಿಹಾರಕ್ಕೆ ಮುಂದಾಗಲು ಸಲಹೆ ನೀಡಿದ ಅವರು, ಆರೋಗ್ಯವೇ ಭಾಗ್ಯವಾಗಿದ್ದು, ಉತ್ತಮ ಆರೋಗ್ಯವಿದ್ದರೆ ಏನು ಬೇಕಾದರು ಸಾಧಿಸಬಹುದು. ಇದಕ್ಕೆ ಕ್ರೀಡೆ ಸಹಕಾರಿಯಾಗುತ್ತದೆ. ನಿತ್ಯ ಕೆಲಕಾಲ ಕ್ರೀಡಾ ಚಟುವಟಿಕೆಗೆ ಸಮಯ ಮೀಸಲಿಡಬೇಕು. ಈ ರೀತಿಯ ಕಾರ್ಯಕ್ರಮದಿಂದ ಪ್ರತಿಭಾ ಅನಾವರಣಕ್ಕೆ ವೇದಿಕೆ ದೊರೆತಂತಾಗುತ್ತದೆ ಎಂದರು.

ಕ್ರೀಡಾ ಜ್ಯೋತಿ ಬೆಳಗಿಸಿ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ವೆಂಕಟೇಶ್, ಒತ್ತಡದಲ್ಲಿರುವ ಸರಕಾರಿ ನೌಕರರು

(ಮೊದಲ ಪುಟದಿಂದ) ಮನೋಲ್ಲಾಸ ಪಡೆಯಲು ಕ್ರೀಡಾಕೂಟಗಳು ಸಹಕಾರಿ. ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಕ್ರೀಡೆ ಪೂರಕವಾಗಿದೆ. ಸೋಲು-ಗೆಲುವು ಸಹಜ. ಸ್ಪರ್ಧಿಸುವುದು ಮುಖ್ಯ ಎಂದು ಹೇಳಿದರು.

ಮಡಿಕೇರಿ ನಗರಸಭಾ ಪೌರಾಯುಕ್ತ ವಿಜಯ ಮಾತನಾಡಿ, ಲವಲವಿಕೆಯಿಂದ ಇರಲು ಕ್ರೀಡೆ ಸಹಕಾರಿಯಾಗುತ್ತದೆ. ಒಗ್ಗೂಡುವಿಕೆಯಿಂದ ಉತ್ಸಾಹ ಹೆಚ್ಚಾಗುತ್ತದೆ. ಸಾರ್ವಜನಿಕ ಸೇವೆಯಿಂದ ವೃತ್ತಿಗೆ ಗೌರವ ದೊರಕುತ್ತದೆ. ಸರಕಾರಿ ನೌಕರ ಸಂಘದ ಕಚೇರಿ ನಿರ್ಮಾಣಕ್ಕೆ ಮಂಜೂರಾಗಿರುವ ಜಾಗದಲ್ಲಿ ಕಟ್ಟಡ ನಿರ್ಮಾಣಕ್ಕೆ ನಗರಸಭೆಯಿಂದ ಪೂರಕ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ಕುಟುಂಬ ಕಲ್ಯಾಣಾಧಿಕಾರಿ ಡಾ. ಆನಂದ್ ಮಾತನಾಡಿ, ಕ್ರೀಡಾ ಜಿಲ್ಲೆಯಾಗಿರುವ ಕೊಡಗಿನ ಹಲವಷ್ಟು ಪ್ರತಿಭಾನ್ವಿತ ಕ್ರೀಡಾಪಟುಗಳಿದ್ದಾರೆ. ಅವರನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕು ಎಂದು ತಿಳಿಸಿದರು.

ಸರಕಾರಿ ನೌಕರರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಸಂಘದ ಸದಸ್ಯರುಗಳಾದ ಲೋಕಪ್ರಭು, ಯು.ಕೆ. ರಮೇಶ್, ನಾಗೇಶ್, ಚಿನ್ನಯ್ಯ, ವಿಜಯ್ ರಾಜ್ಯ, ರಾಷ್ಟçಮಟ್ಟದಲ್ಲಿ ಕ್ರೀಡಾಕೂಟದಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ವಿ.ಟಿ. ವಿಸ್ಮಯ, ನೌಕರರ ಸಂಘದ ಜಿಲ್ಲಾ ಸಮಿತಿ ಗೌರವಾಧ್ಯಕ್ಷ ಎಸ್.ಟಿ. ಶಮ್ಮಿ, ಖಜಾಂಚಿ ಪಿ.ಡಿ. ರಾಜೇಶ್, ಉಪಾಧ್ಯಕ್ಷ ಪಿ.ಆರ್. ನವೀನ್, ಕ್ರೀಡಾ ಸಮಿತಿ ಕಾರ್ಯದರ್ಶಿ ಬಿ.ಎಲ್. ಸಂದೇಶ್ ವೀರಾಜಪೇಟೆ ತಾಲೂಕು ಅಧ್ಯಕ್ಷ ಗುರುರಾಜ್, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಪ್ರದೀಪ್, ದೈಹಿಕ ಶಿಕ್ಷಣಾಧಿಕಾರಿ ಪಲ್ಲೇದ್, ಪದವಿ ಪೂರ್ವ ಉಪನ್ಯಾಸಕ ಸಂಘದ ಅಧ್ಯಕ್ಷ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ್ ಸೇರಿದಂತೆ ಇನ್ನಿತರರು ಹಾಜರಿದ್ದರು.

ಚಿತ್ರಾವತಿ ತಂಡ ಪ್ರಾರ್ಥಿಸಿ, ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಪೊನ್ನಚ್ಚನ ಶ್ರೀನಿವಾಸ್ ಸ್ವಾಗತಿಸಿ, ನಿರ್ಮಲ ಪ್ರತಿಜ್ಞಾ ವಿಧಿ ಬೋಧಿಸಿದರು, ಚೋಕೀರ ಅನಿತಾ ನಿರೂಪಿಸಿ, ವಂದಿಸಿದರು.

ಕ್ರೀಡಾ ಕಲರವ: ಕ್ರೀಡಾಕೂಟ ಗಳಲ್ಲಿ ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ ಸಂಘದ ಸದಸ್ಯರು ಪಾಲ್ಗೊಂಡು ಸಂಭ್ರಮಿಸಿದರು. ಅಂತರರಾಷ್ಟಿçÃಯ ಶಾಟ್‌ಪೂಟ್ ಆಟಗಾರ್ತಿ ಜಾಜಿ ನೇತೃತ್ವದ ತಂಡ ಕ್ರೀಡಾಜ್ಯೋತಿಯನ್ನು ತಂದಿತು. ಅಥ್ಲೆಟಿಕ್, ಫುಟ್‌ಬಾಲ್, ಹಾಕಿ, ಬಾಸ್ಕೆಟ್‌ಬಾಲ್, ಕಬಡ್ಡಿ, ಬಾಲ್ ಬ್ಯಾಡ್ಮಿಂಟನ್, ಟೆನ್ನಿ ಕ್ವಾಯಿಟ್, ಥ್ರೋಬಾಲ್, ವಾಲಿಬಾಲ್ ಆಟಗಳನ್ನು ಆಡಿದರು.

ತಾ. ೪ ರಂದು (ಇಂದು) ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್, ಈಜು, ಕೇರಂ, ಚೆಸ್, ಕ್ರಿಕೆಟ್, ಪಂದ್ಯಾಟ ನಡೆದು ಬಳಿಕ ವಿವಿಧ ರೀತಿಯ ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಲಿವೆ.