ವೀರಾಜಪೇಟೆ, ಜ. ೩: ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ತಾ. ೨೧ ರಂದು ನಡೆಯಲಿರುವ ವೀರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಕೊಡಗಿನ ಪಕ್ಷಿತಜ್ಞ, ಪರಿಸರ ಬರಹಗಾರ ಡಾ. ಎಸ್.ವಿ ನರಸಿಂಹನ್ ಆಯ್ಕೆಯಾಗಿದ್ದಾರೆ.

ವೀರಾಜಪೇಟೆ ತಾಲೂಕು ಆರ್ಜಿ ಗ್ರಾಮದಲ್ಲಿ ಈ ಬಾರಿಯ ತಾಲೂಕು ಸಮ್ಮೇಳನ ನಡೆಯಲಿದೆ.

ಇಂದು ವೀರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ವೀರಾಜಪೇಟೆಯ ಪುರಭವನದಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ, ವೀರಾಜಪೇಟೆ ತಾಲೂಕು ಕ.ಸಾ.ಪ. ಅಧ್ಯಕ್ಷ ರಾಜೇಶ್ ಪದ್ಮನಾಭ ಅಧ್ಯಕ್ಷತೆಯಲ್ಲಿ, ಜಿಲ್ಲಾಧ್ಯಕ್ಷ ಕೇಶವ ಕಾಮತ್ ಉಪಸ್ಥಿತಿಯಲ್ಲಿ ಸರ್ವಾನುಮತದಿಂದ ಈ ಆಯ್ಕೆ ಮಾಡಲಾಯಿತು.

(ಮೊದಲ ಪುಟದಿಂದ) ಸಭೆಯಲ್ಲಿ ವೀರಾಜಪೇಟೆ ತಾಲೂಕು ಕ.ಸಾ.ಪ. ಮಾಜಿ ಅಧ್ಯಕ್ಷ ಮಧೋಶ್ ಪೂವಯ್ಯ, ಕ.ಸಾ.ಪ.ದ ಸದಸ್ಯರುಗಳಾದ ಮಾಜಿ ಜಿ.ಪಂ ಸದಸ್ಯ ಶಶಿ ಸುಬ್ರಮಣಿ, ವಕೀಲ ಕೆ.ವಿ. ಸುನೀಲ್, ವಿಶ್ವನಾಥ್ ಪಿ.ವಿ, ಪುಷ್ಪಲತಾ ಶಿವಪ್ಪ, ವಿಮಲಾ ದಶರಥ್, ರಂಜಿತಾ ಕಾರ್ಯಪ್ಪ, ಹರ್ಷ ಟಿ. ಆರ್, ಪ್ರೀತಮ್, ಯುವರಾಜ್ ಕೃಷ್ಣ ಹಾಜರಿದ್ದರು.

ಸಮ್ಮೇಳನಾಧ್ಯಕ್ಷರನ್ನು ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಿದ ಬಳಿಕ ವೀರಾಜಪೇಟೆಯ ದೇವಾಂಗ ಬೀದಿಯಲ್ಲಿರುವ ಅವರ ಸ್ವಗೃಹಕ್ಕೆ ತೆರಳಿ ವೀರಾಜಪೇಟೆ ಕ.ಸಾ.ಪ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೇಶವ ಕಾಮತ್, ತಾಲೂಕು ಕ.ಸಾ.ಪ. ಅಧ್ಯಕ್ಷ ರಾಜೇಶ ಪದ್ಮನಾಭ, ಕ.ಸಾ.ಪ.ದ ಪ್ರಧಾನ ಕಾರ್ಯದರ್ಶಿ ಟೋಮಿ ಥಾಮಸ್, ಪ್ರಧಾನ ಕಾರ್ಯದರ್ಶಿ ಸಾವಿತ್ರಿ ಹೆಚ್.ಜಿ ,ಕೋಶಾಧಿಕಾರಿ ಶಬರೀಶ್ ಶೆಟ್ಟಿ, ಅಮ್ಮತ್ತಿ ಹೋಬಳಿ ಅಧ್ಯಕ್ಷ ಮಂಜುನಾಥ್, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಗೋಪಾಲಕೃಷ್ಣಗೌಡ, ಮಂಜುನಾಥ್ ಪಿ.ಎ ಅವರುಗಳು ಡಾ.ನರಸಿಂಹನ್ ಅವರನ್ನು ಅಧಿಕೃತವಾಗಿ ವೀರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಹ್ವಾನಿಸಿದರು.