ಮಡಿಕೇರಿ, ಜ. ೩: ರಸ್ತೆ ಹದಗೆಟ್ಟು ಗುಂಡಿ ಬಿದ್ದು ಅಪಾಯ ಸಂಭವಿಸುತ್ತಿದ್ದ ಹಿನ್ನೆಲೆ ಸ್ಥಳೀಯರು ಪೊಲೀಸರ ಸಹಕಾರದೊಂದಿಗೆ ಗುಂಡಿ ಮುಚ್ಚಿದರು.

ನಗರಸಭೆ ಎದುರಿನಲ್ಲಿ ಸೃಷ್ಟಿಯಾಗಿದ್ದ ಭಾರಿ ಪ್ರಮಾಣದ ಗುಂಡಿಯಿAದ ಈಗಾಗಲೇ ಅಪಘಾತಗಳು ಸಂಭವಿಸಿದ ಕಾರಣ ಅದನ್ನು ತಪ್ಪಿಸಲು ಸ್ಥಳೀಯರಾದ ಉಣ್ಣಿಕೃಷ್ಣ ಹಾಗೂ ಉತ್ತಮ್ಮನ್ ಸಂಚಾರಿ ಠಾಣೆಯ ಸಹಾಯಕ ನಿರೀಕ್ಷಕ ಐ.ಪಿ. ನಂದಾ ಅವರೊಂದಿಗೆ ಸೇರಿ ಕಾಂಕ್ರಿಟ್ ಹಾಕಿ ಗುಂಡಿಯನ್ನು ಮುಚ್ಚಿಸಿದರು.