ಮಡಿಕೇರಿ, ಜ. ೩: ಕರ್ನಾಟಕ ಭೂ ಕಂದಾಯ ಅಧಿನಿಯಮ ೧೯೬೪ ಕಲಂ ೮೦ಕ್ಕೆ ತಿದ್ದುಪಡಿಯಾದಂತೆ ಕೊಡಗು ಜಿಲ್ಲೆಯಲ್ಲಿನ ಬಾಣೆ ಜಮೀನುಗಳಿಗೆ ಕಂದಾಯ ನಿಗದಿ ವಿಚಾರಕ್ಕೆ ಸಂಬAಧಿಸಿದAತೆ ಸಾರ್ವಜನಿಕರ ಸಮಸ್ಯೆ ಮತ್ತೂ ಮುಂದುವರಿದಿದೆ. ಕಂದಾಯ ನಿಗದಿ ಕೋರಿ ಬರುವ ಅರ್ಜಿಗಳ ಸಮರ್ಪಕ ವಿಲೇವಾರಿಯಾಗುತ್ತಿಲ್ಲ ಹಾಗೂ ಅನಗತ್ಯ ವಿಳಂಬವಾಗುತ್ತಿದೆ ಎಂಬುದಾಗಿ ಸಾರ್ವಜನಿಕರು, ಸಂಘ-ಸAಸ್ಥೆಗಳ ಮೂಲಕ ಈ ಹಿಂದೆ ಆಕ್ಷೇಪ ವ್ಯಕ್ತಗೊಂಡಿತ್ತು. ಈ ಹಿನ್ನೆಲೆಯಲ್ಲಿ ಕಳೆದ ೨೫.೧೦.೨೦೨೨ರಲ್ಲಿ ಕೊಡಗು ಸೇವಾ ಕೇಂದ್ರದ ಪ್ರಮುಖರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಸೇವಾ ಕೇಂದ್ರದ ಪ್ರಮುಖರೊಂದಿಗೆ ಕೊಡಗು ಬೆಳೆಗಾರರ ಸಂಘದ ಪ್ರಮುಖರು ಈ ವಿಚಾರದಲ್ಲಿ ಸಾಕಷ್ಟು ಪ್ರಯತ್ನಿಸಿದ್ದರು. ಇತ್ತೀಚೆಗೆ ಸದನದಲ್ಲಿ ಶಾಸಕ ಕೆ.ಜಿ. ಬೋಪಯ್ಯ ಅವರು ಈ ಬಗ್ಗೆ ಪ್ರಸ್ತಾಪಿಸಿದ್ದು, ಇದಕ್ಕೆ ಕಂದಾಯ ಸಚಿವ ಆರ್. ಅಶೋಕ್ ಅವರು ಸೂಕ್ತ ಕ್ರಮ ವಹಿಸಲು ಸೂಚಿಸಿರುವುದಾಗಿ ಉತ್ತರಿಸಿದ್ದನ್ನು ಉಲ್ಲೇಖಿಸಬಹುದು.

ಆದರೂ ಕಂದಾಯ ನಿಗದಿ ಪ್ರಕ್ರಿಯೆ ವಿಳಂಬವಾಗುತ್ತಿದ್ದು, ಸೂಕ್ತವಾಗಿ ಅರ್ಜಿ ವಿಲೇವಾರಿ ಯಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಇದನ್ನು ಸಕಾಲದ ವ್ಯಾಪ್ತಿಗೆ ತರಬೇಕು. ಇದರಿಂದ ವಿಳಂಬದ ಜಿಲ್ಲಾಧಿಕಾರಿಗಳು ಸುತ್ತೋಲೆ ಯೊಂದನ್ನು ಹೊರಡಿಸಿ ಕಂದಾಯ ನಿಗದಿ ಕಡತಗಳ ವಿಲೇವಾರಿಗೆ ನಿರ್ದಿಷ್ಟ ಕಾಲಾವಧಿಯನ್ನು ನಿಗದಿಪಡಿಸಿ ಆದೇಶ ಹೊರಡಿಸಿದ್ದರು. ಈ ಕುರಿತು ಕಾರ್ಯವಿಧಾನಕ್ಕೆ ಸೂಕ್ತ ಮಾರ್ಗಸೂಚಿಯನ್ನು ಜಿಲ್ಲಾಧಿಕಾರಿಗಳು ನೀಡಿದ್ದರು.

ಕಡತ ವಿಲೇವಾರಿಗೆ ಸಂಬAಧಿಸಿದAತೆ ಅಧಿಕಾರಿ, ಸಿಬ್ಬಂದಿಗಳು ಗಮನಹರಿಸಿ ತಮಗೆ ನೀಡಲಾದ ನಿರ್ದಿಷ್ಟ ಕಾಲಾವಧಿಯೊಳಗೆ ಕಂದಾಯ ನಿಗದಿಗೊಳಿಸಿ ಪಹಣಿಯಲ್ಲಿ ದಾಖಲಿಸಿ ಸೂಕ್ತ ವಿಲೇವಾರಿಗೆ ಕ್ರಮ ವಹಿಸಲು ಸೂಚಿಸಲಾಗಿತ್ತು.

ಆದರೆ ಈ ಆದೇಶ ಇನ್ನೂ ಸೂಕ್ತವಾಗಿ ಪಾಲನೆಯಾಗುತ್ತಿಲ್ಲ ಎಂಬ ಆಕ್ಷೇಪ ಇದೀಗ ಮತ್ತೆ ವ್ಯಕ್ತಗೊಂಡಿದೆ. ಈ ಬಗ್ಗೆ ಹಾಗೂ ಅರ್ಜಿಯ ಕುರಿತಾಗಿ ಸಾರ್ವಜನಿಕರಿಗೆ ಸಮರ್ಪಕ ಮಾಹಿತಿ ಈ ಮೂಲಕ ದೊರೆ ತಂತಾಗಲಿದೆ ಎಂದು ಒತ್ತಾಯಿಸಿರುವ ಸೇವಾ ಕೇಂದ್ರದ ಪ್ರಮುಖರು ಜಿಲ್ಲಾಧಿಕಾರಿಗಳು ಹಾಗೂ ಕಂದಾಯ ಇಲಾಖೆಯ ಉನ್ನತಾಧಿಕಾರಿಗಳು ತ್ವರಿತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.೧. ಆಯಾ ತಾಲೂಕಿನ ತಹಶೀಲ್ದಾರರ ಕಚೇರಿಯಲ್ಲಿ ದ್ವಿಪ್ರತಿಯಲ್ಲಿ ಪೂರಕ ದಾಖಲೆಗಳೊಂದಿಗೆ ಅರ್ಜಿ ಸ್ವೀಕರಿಸುವುದು ಹಾಗೂ ಸ್ವೀಕರಿಸಿದ ಅರ್ಜಿಗಳನ್ನು ಪ್ರತ್ಯೇಕ ವಹಿಯಲ್ಲಿ ನಿರ್ವಹಿಸಿ ಸಂಬAಧಿಸಿದ ಕಂದಾಯ ಪರಿವೀಕ್ಷಕರು ಹಾಗೂ ಆಯಾ ತಾಲೂಕಿನ ಸರ್ವೆ ಶಾಖೆಗೆ ಕಳುಹಿಸುವುದು.

೨. ಕಂದಾಯ ಪರಿವೀಕ್ಷಕರು ಸಂಬAಧಿಸಿದ ಭೂಮಾಪಕ ರೊಂದಿಗೆ ಸ್ಥಳ ಪರಿಶೀಲಿಸಿ ಹೇಳಿಕೆ ಮಹಜರು, ಸ್ಪಷ್ಟ ವರದಿಯೊಂದಿಗೆ ತಹಶೀಲ್ದಾರ್ ಕಚೇರಿಗೆ ವರದಿ ಸಲ್ಲಿಸುವುದು ಹಾಗೂ ಭೂಮಾಪಕರು ಸರ್ವೆ ಮಾಡಿ, ನೆಲ ಪ್ರತಿ, ಪಿಟಿ ಶೀಟ್, ಕಂದಾಯ ತಃಖ್ತೆಯೊಂದಿಗೆ ಪರ್ಯಾವೀಕ್ಷಕರ ಸಹಿ ಹಾಗೂ ಸಹಾಯಕ ನಿರ್ದೇಶಕರು, ಭೂದಾಖಲೆಗಳ ಇಲಾಖೆ ಇವರ ಸಹಿಯೊಂದಿಗೆ ತಹಶೀಲ್ದಾರರ ಕಚೇರಿಗೆ ಸಲ್ಲಿಸುವುದು.

೩. ತಹಶೀಲ್ದಾರರು ಉಪವಿಭಾಗಾಧಿಕಾರಿಗಳಿಗೆ ಕಂದಾಯ ದರ ಅನುಮೋದನೆಗೆ ಕಡತ ಸಲ್ಲಿಸುವುದು.

೪. ಉಪವಿಭಾಗಾಧಿಕಾರಿಗಳು ಕಂದಾಯ ದರ ಅನುಮೋದಿಸುವ ಬಗ್ಗೆ ಕ್ರಮವಹಿಸಿ, ಸರ್ವೆ ಶಾಖೆಗೆ ದುರಸ್ತಿ ಕಾರ್ಯಕ್ಕೆ ಕಡತ ಕಳುಹಿಸುವುದು ಹಾಗೂ ಪ್ರತ್ಯೇಕ ವಹಿಯಲ್ಲಿ ವಿಲೇವಾರಿ ವಿವರಗಳನ್ನು ದಾಖಲಿಸುವುದು.

೫. ಸರ್ವೆ ಶಾಖೆಯಲ್ಲಿ ದುರಸ್ತಿ ಕ್ರಮಕೈಗೊಂಡು ಭೂದಾಖಲೆಗಳ ಉಪನಿರ್ದೇಶಕರ ಮೇಲು ರುಜುವಿನೊಂದಿಗೆ ಆಕಾರ್‌ಬಂದ್ ಪ್ರತಿಯೊಂದಿಗೆ ತಾಲೂಕು ಕಚೇರಿಗೆ ಕಳುಹಿಸುವುದು.

೬. ತಾಲೂಕು ಕಚೇರಿ ಭೂಮಿ ಶಾಖೆಯಲ್ಲಿ ಹಿಂದಳ ಬಾಕಿ ವಸೂಲಿಸಿ ಪಹಣಿಯಲ್ಲಿ ಕಂದಾಯ ದಾಖಲಿಸಲು ಕ್ರವಹಿಸುವುದು.