ಮಡಿಕೇರಿ, ಜ. ೩: ಇತಿಹಾಸ ಪ್ರಸಿದ್ಧ., ಪುರಾತನ ಆಕರ್ಷಕ ಶೈಲಿಯಲ್ಲಿರುವ., ಮಹತ್ವ ಶಕ್ತಿಯುಳ್ಳ., ನಗರದ ಹೃದಯ ಭಾಗದಲ್ಲಿರುವ ಶ್ರೀ ಓಂಕಾರೇಶ್ವರ ದೇವಾಲಯದ ಹೆಸರು ಕೇಳದವರಿಲ್ಲ., ದೇವಸ್ಥಾನಕ್ಕೆ ಹೋಗದವರಿಲ್ಲ., ಜಿಲ್ಲೆಗೆ ಭೇಟಿ ನೀಡುವ ಭಕ್ತರು, ಪ್ರವಾಸಿಗರೂ ಕೂಡ ಒಮ್ಮೆಯಾದರೂ ಭೇಟಿ ನೀಡುತ್ತಾರೆ. ಇಲ್ಲಿ ನೆರವೇರಿಸುವ ಸೇವಾ ಕಾರ್ಯಗಳಿಂದ ಪುಣ್ಯ ಪ್ರಾಪ್ತಿಯಾಗಲಿದೆ ಎಂಬ ನಂಬಿಕೆಯೂ ಭಕ್ತರಲ್ಲಿದೆ. ಹಾಗಾಗಿ ಇಲ್ಲಿ ಪ್ರತಿನಿತ್ಯ ವಿವಿಧ ಸೇವಾಧಿ ಕಾರ್ಯಗಳು ನೆರವೇರುತ್ತವೆ. ಸೇವೆಗಳಿಗೆ ಇಂತಿಷ್ಟು ಶುಲ್ಕಗಳನ್ನೂ ನಿಗದಿಪಡಿಸಲಾಗಿದೆ. ಆದರೂ ಇಲ್ಲಿನ ಅರ್ಚಕರು

(ಮೊದಲ ಪುಟದಿಂದ) ಹಾಗೂ ಸಿಬ್ಬಂದಿಗಳಿಗೆ ಹುಂಡಿಯಿAದ ಬರುವ ಹಣದಿಂದ ಸಂಬಳ ನೀಡುವ ದುಸ್ಥಿತಿಯಿರುವದು ಮಾತ್ರ ವಿಪರ್ಯಾಸವೇ ಸರಿ..!

ಸರಕಾರ ಧಾರ್ಮಿಕ ದತ್ತಿ ಇಲಾಖಾ ಅಧೀನದಲ್ಲಿರುವ ಈ ದೇಗುಲದ ನಿರ್ವಹಣೆ ಇಲಾಖೆಯದ್ದಾಗಿದೆ. ದೇವಾಲಯಕ್ಕೆ ಬರುವ ವರಮಾನ ಸರಕಾರಕ್ಕೆ ಹೋಗುತ್ತದೆ. ಆದರೆ, ನಂತರದಲ್ಲಿ ನಿರ್ವಹಣೆ ಹಾಗೂ ವೇತನ, ಇತ್ಯಾದಿಗಳಿಗೆ ಹಣ ಬಾರದೇ ಇರುವದರಿಂದ ಪ್ರತಿ ತಿಂಗಳು ಹುಂಡಿಯ ಹಣ ಎಣಿಸಿ ಸಂಬಳ ನೀಡುವ ಪರಿಸ್ಥಿತಿ ಎದುರಾಗಿದೆ. ಸರಕಾರದ ಅಧೀನದಲ್ಲಿರುವ ಈ ದೇವಾಲಯದ ವ್ಯವಸ್ಥಾಪನಾ ಸಮಿತಿ ಇಲ್ಲದೆ ಇರುವದರಿಂದ ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಲಾಖಾ ವ್ಯಾಪ್ತಿಗೆ ಶ್ರೀ ಕೋಟೆ ಮಹಾಗಣಪತಿ ದೇವಾಲಯ ಕೂಡ ಒಳಪಡಲಿದ್ದು, ಅಲ್ಲಿಗೂ ಪ್ರತಿನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಅಲ್ಲಿಯೂ ಆದಾಯವಿದೆ., ಆದರೂ ಸಂಬಳ ನೀಡಲು ಮಾತ್ರ ಹಣವಿಲ್ಲ..!

ಹುಂಡಿಯಲ್ಲೂ ಕಡಿಮೆ..!: ದೇವಾಲಯಕ್ಕೆ ಪ್ರತಿನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಸೇವಾ ಕಾರ್ಯಗಳನ್ನು ನೆರವೇರಿಸುತ್ತಾರೆ. ವಿಶೇಷ ದಿನಗಳಲ್ಲಂತೂ ಕಿಕ್ಕಿರಿದು ಭಕ್ತರು ನೆರೆದಿರುತ್ತಾರೆ. ಆದರೆ., ತಿಂಗಳು ಕಳೆದು ಲೆಕ್ಕ ಹಾಕುವಾಗ ಹುಂಡಿಯಲ್ಲಿ ನಿರೀಕ್ಷೆಗಿಂತ ಹಣ ಕಡಿಮೆ ಇರುತ್ತದೆ ಎಂದು ಹೇಳಲಾಗುತ್ತಿದೆ.

ಯುವಕರ ಮೇಲೆ ಕ್ರಮ ಆಗಿಲ್ಲ..?: ಧಾರ್ಮಿಕ ದತ್ತಿ ಇಲಾಖಾ ಅಧೀನದಲ್ಲಿರುವ, ಐತಿಹಾಸಿಕ ದೇವಾಲಯದ ಆವರಣ ಗೋq ೆ(ಮೂರನೇ ಪೌಳಿ)ಯನ್ನು ಕೆಡವಿ, ವಿರೂಪಗೊಳಿಸಿ, ದೇವಾಲಯದ ಆವರಣದೊಳಗಡೆ ಕಾರು ನುಗ್ಗಿಸಿದ್ದ, ದೇವಾಲಯದ ಸಿಬ್ಬಂದಿಗಳ ಮೇಲೆ ಜಿಲ್ಲಾಡಳಿತ ಇನ್ನೂ ಕೂಡ ಯಾವುದೇ ಕ್ರಮ ಕೈಗೊಂಡಿಲ್ಲದಿರುವದು ಸಂಶಯಕ್ಕೆ ಎಡೆ ಮಾಡಿದೆ. ಘಟನೆ ಬಗ್ಗೆ ಪ್ರಬಾರ ಕಾರ್ಯನಿರ್ವಹಣಾಧಿಕಾರಿಗಳು ವರದಿಯನ್ನು ಅಪರ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿ ೧೫ ದಿನಗಳು ಕಳೆದಿವೆ. ಆದರೂ ಇನ್ನೂ ಯಾವದೇ ಕ್ರಮ ಆಗಿಲ್ಲ.

ಕ್ಯಾಮರಾ ಸರಿ ಇಲ್ಲ..!: ದೇವಾಲಯದ ಒಳ ಹಾಗೂ ಹೊರ ಆವರಣದಲ್ಲಾಗುವ ಘಟನಾವಳಿಗಳ ಬಗ್ಗೆ ಕಣ್ಗಾವಲಿರಿಸುವ ಸಲುವಾಗಿ ಸುತ್ತಲೂ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು. ಆದರೆ, ದೇವಾಲಯ ಸಮಿತಿ ವಿಸರ್ಜನೆಗೊಂಡ ಬಳಿಕ, ಕಾರ್ಯನಿರ್ವಹಣಾಧಿಕಾರಿಗಳ ವರ್ಗಾವಣೆ ಬಳಿಕ ಇವುಗಳ ನಿರ್ವಹಣೆಯಿಲ್ಲದೆ, ಹಾಳಾಗಿವೆ. ಸರಿಯಾಗಿ ಮಾನಿಟರ್ ಮಾಡದ ಕಾರಣ ಅಲ್ಲಿ ಏನೇನು ನಡೆದಿದೆಯೋ ಎಂಬುವುದನ್ನು ತಿಳಿಯಲಾಗುತ್ತಿಲ್ಲ. ಹಾಗಾಗಿ ಗೋಡೆ ಒಡೆದ ಸಿಬ್ಬಂದಿಗಳು ಇನ್ನೇನು ಮಾಡಿದ್ದಾರೋ ಎಂಬುದರ ಬಗ್ಗೆ ಮಾಹಿತಿ ಸಿಗುತ್ತಿಲ್ಲ. ಅಲ್ಲಿ ಸಿಬ್ಬಂದಿಗಳದ್ದೇ ಕಾರು-ಬಾರಾಗಿತ್ತು..! ? ಸಂತೋಷ್