ಚೆಟ್ಟಳ್ಳಿ, ಜ. ೩: ಚೆಟ್ಟಳ್ಳಿ ಗ್ರಾಮ ಪಂಚಾಯಿತಿಯ ಬಹು ವರ್ಷಗಳ ಕನಸಿನ ಕಸ ವಿಲೇವಾರಿ ಘಟಕ ಸ್ಥಾಪನೆಯಾಗಿ ಮೂರು ತಿಂಗಳುಗಳೇ ಕಳೆದರೂ ಉದ್ಘಾಟನೆಗೊಳ್ಳದೆ ಮೀನಾಮೇಷ ಎಣಿಸುತ್ತಿದೆ.

ಚೇರಳ - ಶ್ರೀಮಂಗಲ ಗ್ರಾಮದ ೪೯/೧೩ ರಲ್ಲಿ ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದ ಜಾಗದಲ್ಲಿ ಒತ್ತುವರಿಯಾಗಿದ್ದ ಸರಕಾರಿ ಜಾಗವನ್ನು ಸರ್ವೆ ನಡೆಸಿ ಹಲವು ಗೊಂದಲಗಳ ನಡುವೆ ೦.೫೦ ಎಕರೆ ಜಾಗ ಚೆಟ್ಟಳ್ಳಿ ಗ್ರಾಮ ಪಂಚಾಯಿತಿಯ ಕಸ ವಿಲೇವಾರಿ ಘಟಕ ಸ್ಥಾಪನೆಗೆ ಮಂಜೂರು ಮಾಡಲಾಗಿತ್ತು. ಕಳೆದ ಸಾಲಿನ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಚೆಟ್ಟಳ್ಳಿ ಗ್ರಾಮ ಪಂಚಾಯಿತಿಗೆ ಘನ ತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪನೆಗೆ ರೂ. ೧೦ ಲಕ್ಷಗಳು ಮಂಜೂರು ಮಾಡಲಾಯಿತು. ಕೆಲವು ತಿಂಗಳಲ್ಲಿ ಕಟ್ಟಡ ನಿಮಾರ್ಣ ಕಾರ್ಯ ಪೂರ್ಣಗೊಂಡಿತು.

ನವೆAಬರ್ ೧೧ ರಂದು ಪಂಚಾಯತ್ ರಾಜ್ ಇಂಜಿನಿಯರಿAಗ್ ಇಲಾಖೆ ಘನ ತ್ಯಾಜ್ಯ ನಿರ್ವಹಣಾ ಘಟಕದ ಮುಂದಿನ ನಿರ್ವಹಣೆಗಾಗಿ ಚೆಟ್ಟಳ್ಳಿ ಗ್ರಾಮ ಪಂಚಾಯಿತಿಯ ಸುಪರ್ದಿಗೆ ವಹಿಸಲಾಯಿತು.

ಉದ್ಘಾಟನೆಗೆ ಗೊಂದಲ

ಪೂರ್ಣಗೊAಡ ಘನ ತ್ಯಾಜ್ಯ ವಿಲೇವಾರಿ ಘಟಕದ ಉದ್ಘಾಟನೆಯನ್ನು ಶಾಸಕ ಅಪ್ಪಚ್ಚು ರಂಜನ್ ಅವರೇ ಉದ್ಘಾಟನೆ ಮಾಡಬೇಕು ಎಂಬುದು ನಿಶ್ಚಯವಾಗಿದೆ. ಆದರೆ ಕಟ್ಟಡದ ಉದ್ಘಾಟನಾ ಜವಾಬ್ದಾರಿಯನ್ನು ಜಿಲ್ಲಾ ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ವಹಿಸಬೇಕೆ? ಅಥವಾ ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ವಹಿಸಬೇಕೆನ್ನುವ ಗೊಂದಲದಿAದಲೇ ಕಳೆದ ಮೂರು ತಿಂಗಳಿAದ ಘನ ತ್ಯಾಜ್ಯ ವಿಲೇವಾರಿ ಘಟಕ ಉದ್ಘಾಟನೆಗೊಳ್ಳದೆ ಉಳಿದಿದೆ.

ಕಟ್ಟಡ ನಿರ್ವಹಣೆಯ ಜವಾಬ್ದಾರಿ ವಹಿಸಿಕೊಂಡ ನಂತರ ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಸದಸ್ಯರ ಸಭೆ ಕರೆದು ಕಸ ವಿಲೇವಾರಿ ಘಟಕದಲ್ಲಿ ನಾಮಫಲಕ ಅಳವಡಿಸುವುದು, ಉದ್ಘಾಟನಾ ದಿನವನ್ನು ನಿಗದಿಪಡಿಸಬೇಕಿತ್ತು ಆದರೆ ಈವರೆಗೂ ಕಾರ್ಯಕೈಗೊಳ್ಳದಿರುವುದೇ ವಿಪರ್ಯಾಸ.

ಪಂಚಾಯಿತಿ ಬದಿಯಲ್ಲೇ ಕೊಳೆಯುತ್ತಿದೆ ಕಸದರಾಶಿ

ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಕಚೇರಿ, ಮಾಂಸ ಹಾಗೂ ತರಕಾರಿ ಮಾರುಕಟ್ಟೆ ಬದಿಯಲ್ಲೇ ಕೊಳೆತ ತರಕಾರಿ, ವಿವಿಧ ತ್ಯಾಜ್ಯ, ಪ್ಲಾಸ್ಟಿಕ್, ಗಾಜಿನ ಸಾಮಗ್ರಿಗಳೆಲ್ಲ ರಾಶಿಯಾಗುತ್ತಿದೆ.

ಬೀದಿನಾಯಿ, ಹೆಗ್ಗಣಗಳೆಲ್ಲ ಕಸವನ್ನು ಛಿದ್ರಗೊಳಿಸುತ್ತಿವೆ. ಆದರೆ ಘನ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಯಾದರೂ ಕಸ ವಿಲೇವಾರಿ ಕಾರ್ಯ ನಡೆಯುವುದು ಯಾವಾಗ ಎಂಬ ಸಾರ್ವಜನಿಕರ ಪ್ರಶ್ನೆಗೆ ಪಂಚಾಯಿಯಲ್ಲಿ ಉತ್ತರವಿಲ್ಲ.

ಸ್ವಚ್ಛವಾಹಿನಿ ಎಂಬ ಚೆಟ್ಟಳ್ಳಿ ಗ್ರಾಮ ಪಂಚಾತಿಯ ಕಸ ವಿಲೇವಾರಿ ವಾಹನ ಕಸ ವಿಲೇವಾರಿ ಕಾಯಕವಿಲ್ಲದೆ ರಸ್ತೆ ಬದಿಯಲ್ಲಿ ಬಿಸಿಲಲ್ಲಿ ನಿಂತಿದೆ. ಘಟಕ ಉದ್ಘಾಟನೆಯಾದ ನಂತರ ಕಸ ವಿಲೇವಾರಿ ವಾಹನಕ್ಕೆ ಚಾಲಕರು ಯಾರು? ಈಗಿರುವ ಪಂಚಾಯಿತಿ ತಾತ್ಕಾಲಿಕ ಸಿಬ್ಬಂದಿಯೇ ಕಾರ್ಯನಿರ್ವಹಿಸುವರೇ? ವಾಹನ ಚಾಲಕ ನೇಮಕ ಮಾಡುವುದಾದರೆ ವೇತನ ನೀಡುವುದು ಯಾವ ಹಣದಿಂದ? ಎಂಬ ಪ್ರಶ್ನೆ ಪಂಚಾಯಿತಿಯ ಮುಂದಿದೆ.

ಕಸವನ್ನು ಸಂಗ್ರಹ ಮಾಡಿದರೆ ಪ್ರತೀ ತಿಂಗಳಿಗೆ ಪ್ರತೀ ಅಂಗಡಿಯಿAದ ರೂ. ೩೦, ಹೊಟೇಲುಗಳಿಂದ ರೂ. ೬೦ ಹಣ ಪಡೆದು ಆ ಹಣದಿಂದ ವಾಹನ ನಿರ್ವಹಣೆ ಹಾಗೂ ಚಾಲಕನ ವೇತನ ನೀಡುವ ಉದ್ದೇಶವಿದ್ದರೂ ಪಂಚಾಯಿತಿ ಪ್ರತಿನಿಧಿಗಳಲ್ಲೇ ಗೊಂದಲವಿದೆ.

- ಪುತ್ತರಿರ ಕರುಣ್ ಕಾಳಯ್ಯ