ಸುಂಟಿಕೊಪ್ಪ, ಜ. ೩: ಇಲ್ಲಿಗೆ ಸಮೀಪದ ಕಾನ್ ಬೈಲು ಬೈಚನ ಹಳ್ಳಿ ನಿವಾಸಿ ಬಿ.ಕೆ. ವಿಶ್ವನಾಥ ರೈ ಅವರ ಮನೆಯ ಅಂಗಳದಲ್ಲಿ ಕಾಣಿಸಿಕೊಂಡ ಕೊಳಕು ಮಂಡಲ ಹಾವನ್ನು ಉರಗ ತಜ್ಞರಾದ ಬಾಲಚಂದ್ರ ಹಾಗೂ ಪ್ರವೀಣ್ ಹಿಡಿದು ಆನೆಕಾಡು ಅರಣ್ಯಕ್ಕೆ ಸಾಗಿಸಿದರು.
೭ನೇ ಹೊಸಕೋಟೆಯ ಪ್ರವೀಣ್ ಹಾಗೂ ಸುಂಟಿಕೊಪ್ಪದ ಬಾಲಚಂದ್ರ ಅವರು ಈಗಾಗಲೇ ಕೊಡಗು ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ೪೦೦೦ಕ್ಕೂ ಅಧಿಕ ಹಾವುಗಳನ್ನು ಸೆರೆ ಹಿಡಿದಿದ್ದಾರೆ.