ಸುAಟಿಕೊಪ್ಪ, ಜ. ೨: ಆಳುವ ಸರಕಾರ ಜನವಿರೋಧಿ ಕ್ರಮಗಳನ್ನು ಅನುಸರಿಸುವ ಮೂಲಕ ಜನಸಾಮಾನ್ಯರನ್ನು ತುಳಿಯಲು ಪ್ರಯತ್ನಿಸುತ್ತಿದೆ ಎಂದು ಸಿಐಟಿಯು ರಾಜ್ಯ ಉಪಾಧ್ಯಕ್ಷ ಪಿ.ಆರ್. ಭರತ್ ಹೇಳಿದರು.

ಸುಂಟಿಕೊಪ್ಪ ಅಂಬೇಡ್ಕರ್ ಭವನದಲ್ಲಿ ನಡೆದ ಬೆಂಗಳೂರಿನಲ್ಲಿ ನಡೆಯಲಿರುವ ಸಿಐಟಿಯು ಸಂಘಟನೆಯ ೧೭ನೇ ರಾಷ್ಟಿçÃಯ ಸಮ್ಮೇಳನದ ಭಿತ್ತಿ ಪತ್ರ ಅನಾವರಣ ಹಾಗೂ ಸ್ವಾಗತ ಸಮಿತಿಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಪಿ.ಆರ್. ಭರತ್, ಸರಕಾರದ ಜನ ವಿರೋಧಿ ನೀತಿಗಳನ್ನು ಜಾರಿಗೆ ತಂದಿದ್ದು, ಬೆಲೆ ಏರಿಕೆಯ ಹಿನೆÀ್ನಲೆಯಲ್ಲಿ ಜನಸಾಮಾನ್ಯರು ಮಧ್ಯಮ ವರ್ಗದವರು ಕೂಲಿ ಕಾರ್ಮಿಕರು, ದಿನಗೂಲಿ ಆಧಾರದಲ್ಲಿ ಜೀವನ ನಡೆಸುವವರಿಗೆ ಅತ್ಯಂತ ಕಷ್ಟದ ದಿನಗಳು ಎದುರಾಗಿವೆ. ಅಂಗನವಾಡಿ, ಪೌರಕಾರ್ಮಿಕರು, ಅಕ್ಷರದಾಸೋಹದ ಬಿಸಿಯೂಟ ಕೆಲಸಗಾರರ ಕನಿಷ್ಟ ವೇತನವನ್ನು ಲೆಕ್ಕ ಹಾಕಿ ವಾರ್ಷಿಕವಾಗಿ ರೂ ೧.೧೦ ಲಕ್ಷ ದಾಟಿದರೆ ಅಂತಹವರ ಬಿಪಿಎಲ್ ಕಾರ್ಡ್ನ್ನು ರದ್ದುಗೊಳಿಸುವ ಕೆಲಸಕ್ಕೆ ಕೈ ಹಾಕಿದೆ ಎಂದು ಆರೋಪಿಸಿದರು.

ವೇದಿಕೆಯಲ್ಲಿ ಸೋಮವಾರಪೇಟೆ ಸಿಐಟಿಯು ತಾಲೂಕು ಅಧ್ಯಕ್ಷೆ ಎಸ್.ಎನ್. ಸಾವಿತ್ರಿ, ಹಿರಿಯ ಅಂಗನವಾಡಿ ಕಾರ್ಯಕರ್ತೆ ಜೆಸ್ಸಿ ಡಿಸೋಜ, ಅಕ್ಷರದಾಸೋಹ ಬಿಸಿಯೂಟ ತಯಾರಿಕ ಸಂಘದ ತಾಲೂಕು ಅಧ್ಯಕ್ಷೆ ಚಾಮುಂಡಿ, ಅಕ್ಷರದಾಸೋಹ ಬಿಸಿಯೂಟ ತಯಾರಿಕ ಸಂಘದ ತಾಲೂಕು ಖಜಾಂಜಿ ಯಶೋಧ ಬಸವರಾಜ್ ಅಂಗನವಾಡಿ ಕಾರ್ಯಕರ್ತೆಯರು, ಅಕ್ಷರದಾಸೋಹ ಬಿಸಿಯೂಟ ಕಾರ್ಯಕರ್ತೆಯರು ಅಂಗನವಾಡಿ ಸಹಾಯಕಿಯರು, ಪಂಚಾಯಿತಿ ಪೌರಕಾರ್ಮಿಕರು ಇದ್ದರು.