ಮಡಿಕೇರಿ, ಜ. ೩: ಅಗಸ್ತö್ಯ ಮುನಿಗಳಿಂದ ಶಾಪಕ್ಕೆ ಒಳಗಾಗಿರುವ ಕೊಡವ ಮತ್ತು ಅಮ್ಮಕೊಡವರ ಶಾಪ ವಿಮೋಚನೆಗಾಗಿ ಶ್ರೀ ಕಾವೇರಮ್ಮೆ ಕೊಡವ ಮತ್ತು ಅಮ್ಮಕೊಡವ ಹಿತರಕ್ಷಣಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯದ ಮುಂಭಾಗದಲ್ಲಿರುವ ಟ್ರಸ್ಟ್ನ ಜಾಗದಲ್ಲಿ ತಾ. ೧೫ ರಂದು ಚಂಡಿಕಾ ಹೋಮ ಏರ್ಪಡಿಸಲಾಗಿದೆ.

ಪತ್ರಿಕಾಭವನದಲ್ಲಿ ಆಯೋಜಿ ಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟ್ರಸ್ಟ್ನ ಅಧ್ಯಕ್ಷ ಮುದ್ದಂಡ ಬಿ. ದೇವಯ್ಯ, ಎರಡು ಜನಾಂಗದವರಿಗಿರುವ ಶಾಪ ವಿಮೋಚನೆ ಹಾಗೂ ಲೋಕ ಕಲ್ಯಾಣಕ್ಕಾಗಿ ಕಳೆದ ೧೦ ವರ್ಷಗಳಿಂದ ಕಾವೇರಿ ಕ್ಷೇತ್ರದ ಭಾಗಮಂಡಲದಲ್ಲಿ ಶ್ರೀ ಗಣಪತಿ ಹೋಮ, ಸತ್ಯನಾರಾಯಣ ಸ್ವಾಮಿ ಪೂಜೆ, ಶತರುದ್ರಾಭಿಷೇಕ ಪಠಣ ಹಾಗೂ ಚಂಡಿಕಾ ಹೋಮ ನಡೆಸಿಕೊಂಡು ಬರಲಾಗುತ್ತಿದೆ. ಈ ಬಾರಿಯೂ ತಾ. ೧೫ ರಂದು ನಡೆಸಲು ತೀರ್ಮಾನಿ ಸಲಾಗಿದ್ದು, ಬೆಳಿಗ್ಗೆ ೭ ಗಂಟೆಯಿAದ ಪೂಜೆ ಆರಂಭವಾಗಲಿದೆ. ಸುಬ್ರಹ್ಮಣ್ಯದ ತಂತ್ರಿ ಕೆಮ್ಮಿಂಜೆ ಬೆಳ್ಳುಕರಾಯ ಪೂಜಾ ಕಾರ್ಯ ನೆರವೇರಿಸುವರೆಂದು ತಿಳಿಸಿದರು.

ಈ ಹಿಂದೆ ಅಷ್ಟಮಂಗಲ ಪ್ರಶ್ನೆಯಲ್ಲಿ ಪುರಾಣ ಕಾಲದಲ್ಲಿ ಅಗಸ್ತö್ಯ ಮುನಿಗಳು ಎರಡು ಜನಾಂಗಗಳಿಗೆ ಶಾಪ ನೀಡಿರುವ ಬಗ್ಗೆ ತಿಳಿದು ಬಂದಿದ್ದು, ಯಾಗ ಮಾಡಿದರೆ ಮಾತ್ರ ವಿಮೋಚನೆ ಸಾಧ್ಯ ಎಂದು ಕಂಡು ಬಂದ ಹಿನ್ನೆಲೆಯಲ್ಲಿ ಕಳೆದ ಒಂಭತ್ತು ವರ್ಷಗಳಿಂದ ಯಾಗ ನಡೆಸಿಕೊಂಡು ಬರಲಾಗುತ್ತಿದೆ. ಇದು ಹತ್ತನೇ ವರ್ಷದ್ದಾಗಿದೆ. ಕಾವೇರಿ ಕ್ಷೇತ್ರದಲ್ಲಿ ಕೆಲವೊಂದು ಘಟನೆಗಳು ನಡೆದಿದ್ದು, ಇದು ಲೋಕಕ್ಕೆ ಕಂಟಕವಾಗಲಿದೆ ಎಂದು ತಿಳಿದು ಬಂದಾಗ ಈ ಯಾಗವನ್ನು ಮುಂದುವರಿಸಿಕೊAಡು ಬರುತ್ತಿದ್ದೇವೆ. ಯಾಗದಿಂದಾಗಿ ಶೇ. ೫೦ ರಷ್ಟು ಪ್ರತಿಫಲ ಸಿಕ್ಕಿದೆ. ಒಂದಿಷ್ಟು ಒಳಿತಾಗಿದ್ದು, ಸ್ವಲ್ಪ ಮಟ್ಟಿಗೆ ಸಮಸ್ಯೆ ಕಡಿಮೆಯಾಗಿದೆ ಎಂದು ದೇವಯ್ಯ ಹೇಳಿದರು. ಒಂದು ತಲೆಮಾರಿಗೆ ಎಲ್ಲವೂ ಸರಿಯಾಗಲಿದೆ ಎಂದು ಹೇಳಲಾಗದು. ಇನ್ನೊಂದು ತಲೆಮಾರು ಬೇಕಾಗಬಹುದು, ಯುವಕರು ಆಸಕ್ತಿ ವಹಿಸಿ ಮುಂದು ವರಿಸಿಕೊಂಡು ಹೋಗಬೇಕೆಂದು ಇದೇ ಸಂದರ್ಭದಲ್ಲಿ ನುಡಿದರು.

ಭವನ ನಿರ್ಮಾಣ: ಟ್ರಸ್ಟ್ನ ಹೆಸರಿಗೆ ಕ್ಷೇತ್ರದಲ್ಲಿ ೪೬ ಸೆಂಟ್ ಜಾಗ ಸಿಕ್ಕಿದ್ದು, ಹಿಂದುಳಿದ ವರ್ಗಗಳ ಇಲಾಖಾ ಅನುದಾನದಲ್ಲಿ ರೂ. ೧ ಕೋಟಿ ನೀಡುವದಾಗಿ ಸಚಿವರು ಭರವಸೆ ನೀಡಿದ್ದಾರೆ. ಇದು ಪೂಜಾ ಕಾರ್ಯದ ಪ್ರತಿಫಲವಾಗಿದ್ದು, ಈ ಅನುದಾನದಲ್ಲಿ ಭವನ ನಿರ್ಮಿಸಲಿದ್ದು, ಮಹಿಳೆಯರಿಗೆ ಉಡುಪು ಬದಲಾಯಿಸಲು, ಅಗತ್ಯವುಳ್ಳವರಿಗೆ ತಂಗಲು ಅವಕಾಶ ಮಾಡಿಕೊಡಲಾಗು ವದು. ನಮ್ಮಲ್ಲಿ ಆಸ್ತಿಕರು ಹಾಗೂ ನಾಸ್ತಿಕರೂ ಇದ್ದಾರೆ. ಆದರೂ ದೇವರ ಮೊರೆ ಹೋಗುವದು ತಪ್ಪಲ್ಲ ಎಂದು ಅವರು ಪ್ರತಿಪಾದಿಸಿದರು.

ಉಪಾಧ್ಯಕ್ಷ ಚೆಪ್ಪುಡಿರ ಪೊನ್ನಪ್ಪ ಮಾತನಾಡಿ, ಆರಂಭದಲ್ಲಿ ೪೮ ದಿವಸಗಳ ಕಾಲ ವ್ರತಾಚರಣೆಯಲ್ಲಿದ್ದು, ೮ ದಿವಸಕ್ಕೂ ಮುನ್ನ ಭಾಗಮಂಡಲಕ್ಕೆ ತೆರಳಿ ಅಲ್ಲಿಯೇ ತಂಗಿ ಪ್ರತಿನಿತ್ಯ ಪೂಜಾ ಕಾರ್ಯಗಳನ್ನು ನೆರವೇರಿಸಿ ನಂತರ ಯಾಗ ಆರಂಭಿಸಲಾಗಿತ್ತು. ಈ ಬಾರಿ ತಾ. ೧೪ ರಂದು ಭಾಗಮಂಡಲಕ್ಕೆ ತೆರಳಿ ತಂಗಿ ಮರುದಿನ ಯಾಗ ಆರಂಭಿಸಲಾಗುವದೆAದು ತಿಳಿಸಿದರು.