ಸೋಮವಾರಪೇಟೆ, ಜ. ೨: ಕಿಬ್ಬೆಟ್ಟ ಗ್ರಾಮದ ಅಯ್ಯಪ್ಪ ಕಾಲೋನಿಯಲ್ಲಿನ ಶ್ರೀ ಗಣಪತಿ, ಭಗವತಿ ಹಾಗೂ ಧರ್ಮಶಾಸ್ತ ಅಯ್ಯಪ್ಪಸ್ವಾಮಿ ದೇವಸ್ಥಾನದ ಪ್ರಥಮ ವರ್ಷದ ವಾರ್ಷಿಕ ಮಹಾಪೂಜೆ ತಾ. ೭ ಮತ್ತು ೮ ರಂದು ನಡೆಯಲಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಪಿ. ಜಗನ್ನಾಥ್ ತಿಳಿಸಿದ್ದಾರೆ.

ತಾ. ೭ ರಂದು ಬೆಳಿಗ್ಗೆ ೧೦ ಗಂಟೆಯಿAದ ಗ್ರಾಮದಲ್ಲಿ ಚಂಡೆ ವಾದ್ಯದೊಂದಿಗೆ ಉತ್ಸವ ಮೂರ್ತಿಯ ಮೆರವಣಿಗೆ, ಸಂಜೆ ೬ ಗಂಟೆಯಿAದ ೧.೩೦ರ ವರೆಗೆ ಮಹಾ ಭಗವತಿ ಸೇವೆ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆಯಲಿವೆ.

ತಾ. ೮ ರಂದು ಬೆಳಿಗ್ಗೆ ೬ ಗಂಟೆಯಿAದ ಸಂಜೆಯವರೆಗೆ ವಿವಿಧ ಪೂಜೆಗಳು, ಸಂಜೆ ೪ ಗಂಟೆಗೆ ಅಯ್ಯಪ್ಪ ಆನಂದ ನೃತ್ಯ ನಡೆಯಲಿದೆ. ಕೇರಳದ ತಂತ್ರಿವರ್ಯರಾದ ಬ್ರಹ್ಮಶ್ರೀ ಹರಿಕೃಷ್ಣನ್ ನಂಬೂದರಿ ಅವರ ನೇತೃತ್ವದಲ್ಲಿ ವಾರ್ಷಿಕ ಪೂಜೋತ್ಸವ ನಡೆಯಲಿದೆ ಎಂದು ಮಾಹಿತಿಯಿತ್ತಿದ್ದಾರೆ.