ಸಂಪಾಜೆ, ಜ. ೨ : ರಬ್ಬರ್ ಹಾಳೆ ಒಣಗಿಸುವ ಹೊಗೆಮನೆಯಲ್ಲಿ ಆಕಸ್ಮಿಕವಾಗಿ ಬೆಂಕಿ ಅವಘಡ ಸಂಭವಿಸಿ ಲಕ್ಷಾಂತರ ರೂ. ಮೌಲ್ಯದ ರಬ್ಬರ್ ಹಾಳೆಗಳು ನಾಶವಾದ ಘಟನೆ ಸಮೀಪದ ಚೆಂಬುವಿನಲ್ಲಿ ನಡೆದಿದೆ. ಅಲ್ಲಿನ ನಿವಾಸಿ ಸೂರಜ್ ಹೊಸೂರು ಎಂಬವರ ರಬ್ಬರ್ ಹಾಳೆ ಒಣಗಿಸುವ ಹೊಗೆಮನೆಯಲ್ಲಿ ಘಟನೆ ಸಂಭವಿಸಿದ್ದು, ಬೆಂಕಿ ಕಾಣಿಸಿಕೊಂಡ ಸಂದರ್ಭ ಗ್ರಾಮಸ್ಥರು, ಕಾರ್ಮಿಕರು, ಬೆಂಕಿ ನಂದಿಸಲು ಪ್ರಯತ್ನಿಸಿದರಾದರೂ ಪ್ರಯೋಜನವಾಗದೆ ಯಂತ್ರೋಪಕರಣಗಳು, ರಬ್ಬರ್ ಹಾಳೆಗಳು ಅಗ್ನಿಗೆ ಆಹುತಿ ಆಗಿದೆ. ಘಟನೆ ಸಂಬAಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.