ಮಡಿಕೇರಿ, ಜ. ೨: ನಂದಿಗುAದ (ಗೊಂದಳ್ಳಿ) ಗ್ರಾಮದ ಸರ್ವೆ ನಂ.೪೨/೩ರ ೦.೨೫ ಸೆಂಟ್ ಜಾಗದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣ ಮಾಡಲು ಜಾಗವನ್ನು ಕಾಯ್ದಿರಿಸಿ ಸಮಾಜ ಕಲ್ಯಾಣ ಇಲಾಖೆಯ ಹೆಸರಿಗೆ ಹಸ್ತಾಂತರಿಸುವAತೆ ನಂದಿಗುAದ, ಗೊಂದಳ್ಳಿ ಹಾಗೂ ಶಾಂತವೇರಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರಿಗೆ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಎಲ್.ದಿವಾಕರ್ ಅವರ ನೇತೃತ್ವದಲ್ಲಿ ಮನವಿ ಸಲ್ಲಿಸಿದ ಗ್ರಾಮಸ್ಥರು, ಡಾ.ಬಿ.ಆರ್.ಅಂಬೇಡ್ಕರ್ ಭವನದ ಅಗತ್ಯತೆಯ ಬಗ್ಗೆ ಗಮನ ಸೆಳೆದರು.

ಈ ಸಂದರ್ಭ ಮಾತನಾಡಿದ ನಂದಿಗುAದ ಗ್ರಾಮಸ್ಥರು ಹಾಗೂ ದಲಿತ ಸಂಘರ್ಷ ಸಮಿತಿಯ ಪ್ರಮುಖರು, ಅಪರ ಜಿಲ್ಲಾಧಿಕಾರಿಗಳು, ನಂದಿಗುAದ (ಗೊಂದಳ್ಳಿ) ಗ್ರಾಮದ ಸರ್ವೆ ನಂ.೪೨/೩ರ ೦.೨೫ ಸೆಂಟ್ ಜಾಗದಲ್ಲಿ ಜಮೀನು ಲಭ್ಯವಿರುವ ಬಗ್ಗೆ ಪರಿಶೀಲಿಸಿ ಭವನ ನಿರ್ಮಾಣ ಮಾಡಲು ಅಗತ್ಯ ವರದಿಯನ್ನು ಸಲ್ಲಿಸುವಂತೆ ಸೂಚಿಸಿದ್ದರು.

ಅದರಂತೆ, ಉಲ್ಲೇಖ (೨)ರ ಪತ್ರದಲ್ಲಿ ನಂದಿಗುAದ (ಗೊಂದಳ್ಳಿ) ಗ್ರಾಮದ ಸರ್ವೆ ನಂ.೪೨/೩ರ ೦.೨೫ ಸೆಂಟ್ ಜಾಗದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣ ಮಾಡುವ ಸಂಬAಧ ಗ್ರಾಮಕ್ಕೆ ಸೋಮವಾರಪೇಟೆ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ಖುದ್ದು ಭೇಟಿ ನೀಡಿದ್ದರು. ಪರಿಶಿಷ್ಟ ಜಾತಿ ಜನಾಂಗದವರು ಶೇ.೫೦ ಕ್ಕಿಂತ ಹೆಚ್ಚಾಗಿ ವಾಸಿಸುತ್ತಿರುವ ಬಗ್ಗೆ ಪರಿಶೀಲಿಸಿ ಹಾಗೂ ಗ್ರಾಮದಲ್ಲಿ ಬೇರೆ ಯಾವುದೇ ಭವನಗಳು ಇಲ್ಲದ ಕಾರಣ ಡಾ. ಬಿ.ಆರ್.ಅಂಬೇಡ್ಕರ್ ಭವನದ ಅವಶ್ಯಕತೆ ಇರುವುದಾಗಿ ವರದಿಯನ್ನು ಕಚೇರಿಗೆ ಸಲ್ಲಿಸಿದ್ದರು.

ಆದ್ದರಿಂದ ಭವನ ನಿರ್ಮಾಣ ಮಾಡಲು ಜಾಗವನ್ನು ಕಾಯ್ದಿರಿಸಿ ಸಮಾಜ ಕಲ್ಯಾಣ ಇಲಾಖೆಯ ಹೆಸರಿಗೆ ಹಸ್ತಾಂತರಿಸಬೇಕು ಎಂದು ಮನವಿ ಮಾಡಿದರು.

ಮನವಿ ಸಲ್ಲಿಸುವ ಸಂದರ್ಭ ದಲಿತ ಸಂಘರ್ಷ ಸಮಿತಿಯ ಮಡಿಕೇರಿ ತಾಲೂಕು ಸಂಚಾಲಕ ದೀಪಕ್ ಪೊನ್ನಪ್ಪ, ನಂದಿಗುAದ ಗ್ರಾಮಸ್ಥರಾದ ಕೆ.ಪಿ.ರಂಜಿತ್ ಮತ್ತಿತರರು ಹಾಜರಿದ್ದರು.