ಮಡಿಕೇರಿ, ಜ. ೧: ನೇಕಾರರ ಪ್ಯಾಕೇಜ್ ಯೋಜನೆ - ವಿಶೇಷ ಘಟಕ/ ಗಿರಿಜನ ಉಪಯೋಜನೆಯಡಿ ಜವಳಿ ಕ್ಷೇತ್ರಕ್ಕೆ ಸಂಬAಧಿಸಿದ ಸಣ್ಣ ಮತ್ತು ಅತಿ ಸಣ್ಣ (ಎಸ್‌ಎಂಇ) ಘಟಕಗಳ ಸ್ಥಾಪನೆಗೆ ಸಹಾಯಧನ ನೀಡುವ ಬಗ್ಗೆ, ಸಣ್ಣ ಮತ್ತು ಅತಿ ಸಣ್ಣ (ಎಸ್‌ಎಂಇ) ಘಟಕಗಳ ಸ್ಥಾಪನೆಗೆ ಹೆಚ್ಚಿನ ಉತ್ತೇಜನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಯೋಜನಾ ಮೊತ್ತವನ್ನು ಕಟ್ಟಡ, ಯಂತ್ರೋಪಕರಣಗಳ (Pಟಚಿಟಿಣ & ಒಚಿಛಿhiಟಿeಡಿies), ಯಂತ್ರೋಪಕರಣಗಳ ಸ್ಥಾಪನೆ (ಇಡಿeಛಿಣioಟಿ), ಅನುಸ್ಥಾಪನ (Iಟಿsಣಚಿಟಟಚಿಣioಟಿ), ಜನರೇಟರ್ ಹಾಗೂ ಪೂರ್ವ ಆಪರೇಟಿವ್ ವೆಚ್ಚ (Pಡಿeಟimiಟಿಚಿಡಿಥಿ & Pಡಿe-ಔಠಿeಡಿಚಿಣive ಇxಠಿeಟಿsess) ಗಳಿಗೆ ತಗಲುವ ಯೋಜನಾ (ಸ್ಥಿರಾಸ್ತಿಗಳ) ಮೊತ್ತದಲ್ಲಿ ಯೋಜನಾ ವೆಚ್ಚದ ಶೇ. ೭೫ ರಷ್ಟು ಅಥವಾ ಗರಿಷ್ಠ ರೂ. ೨ ಕೋಟಿಗಳಿಗೆ ಸೀಮಿತಗೊಳಿಸಲಾಗಿದೆ.

ಹಣಕಾಸು ಸಂಸ್ಥೆಗಳಿAದ (ಕೆಎಸ್‌ಎಫ್‌ಸಿ) ಶೇ.೪ ರ ಬಡ್ಡಿ ಸಹಾಯಧನ ಯೋಜನೆಯಡಿ ಸಾಲ ಪಡೆದಿದ್ದಲ್ಲಿ ಇಲಾಖೆಯ ಬಡ್ಡಿ ಸಹಾಯಧನ ಇರುವುದಿಲ್ಲ. ಹಣಕಾಸು ಸಂಸ್ಥೆಗಳಿAದ ಶೇ.೪ ರ ಬಡ್ಡಿ ಸಹಾಯಧನ ಯೋಜನೆಯಡಿ ಸಾಲ ಪಡೆಯದೇ ಇದ್ದಲ್ಲಿ ಗರಿಷ್ಠ ರೂ.೭೫ ಲಕ್ಷಗಳ ಅವಧಿ ಸಾಲದ ಮೇಲೆ ಮೊದಲ ೫ ವರ್ಷಗಳ ಅವಧಿಗೆ ಜವಳಿ ನೀತಿ ಅನ್ವಯ ಬಡ್ಡಿ ಸಹಾಯಧನವನ್ನು ಇಲಾಖೆಯಿಂದ ಮರುಸಂದಾಯ ಮಾಡಲಾಗುವುದು. ಷರತ್ತು ಮತ್ತು ನಿಬಂಧನೆಗಳು ಹಾಗೂ ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ, ಕೊಡಗು ಜಿಲ್ಲಾ ಪಂಚಾಯಿತಿ, ಮಡಿಕೇರಿ, ಜಿಲ್ಲಾ ಕೈಗಾರಿಕಾ ಕೇಂದ್ರ ಕಟ್ಟಡ, ಕೊಹಿನೂರು ರಸ್ತೆ, ಮಡಿಕೇರಿ, ದೂ. ೦೮೨೭೨-೨೨೦೩೬೫ನ್ನು ಸಂಪರ್ಕಿಸಬಹುದು ಎಂದು ಕೈಮಗ್ಗ ಮತ್ತು ಜವಳಿ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.