ಮಡಿಕೇರಿ, ಜ. ೧: ಮಡಿಕೇರಿ ರೋಟರಿ ವುಡ್ಸ್ಗೆ ರೋಟರಿ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್ ತಾ. ೫ ರಂದು ಅಧಿಕೃತ ಭೇಟಿ ನೀಡಲಿದ್ದಾರೆ.
ಮಡಿಕೇರಿ ರೋಟರಿ ಸಭಾಂಗಣದಲ್ಲಿ ಸಂಜೆ ೭ ಗಂಟೆಗೆ ಆಯೋಜಿತ ಕಾರ್ಯಕ್ರಮದಲ್ಲಿ ಗವರ್ನರ್ ಪ್ರಕಾಶ್ ಕಾರಂತ್, ಸಹಾಯಕ ರಾಜ್ಯಪಾಲ ರತನ್ ತಮ್ಮಯ್ಯ, ವಲಯ ಸೇನಾನಿ ಎನ್.ಡಿ. ಅಚ್ಚಯ್ಯ, ವುಡ್ಸ್ ಕಾರ್ಯದರ್ಶಿ ವಸಂತ್ ಕುಮಾರ್ ಪಾಲ್ಗೊಳ್ಳಲಿದ್ದಾರೆ ಎಂದು ರೋಟರಿ ವುಡ್ಸ್ ಅಧ್ಯಕ್ಷ ಎಸ್.ಎಸ್. ಸಂಪತ್ ಕುಮಾರ್ ಮಾಹಿತಿ ನೀಡಿದ್ದಾರೆ. ೭ ತಿಂಗಳ ಹಿಂದೆ ಮಡಿಕೇರಿಯಲ್ಲಿ ೩ನೇ ರೋಟರಿ ಸಂಸ್ಥೆಯಾಗಿ ಪ್ರಾರಂಭವಾಗಿದ್ದ ರೋಟರಿ ವುಡ್ಸ್ ೩೫ ಸದಸ್ಯರನ್ನು ಹೊಂದಿದ್ದು ಸಾಮಾಜಿಕವಾಗಿ ಅನೇಕ ಕಾರ್ಯಯೋಜನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ ಎಂದು ಸಂಪತ್ ಕುಮಾರ್ ತಿಳಿಸಿದ್ದಾರೆ.