ಮಡಿಕೇರಿ, ಜ. ೧: ಪ್ರಸಕ್ತ ಸಾಲಿಗೆ ಪ್ರತಿಷ್ಟಿತ ರಾಷ್ಟಿçÃಯ ಉನ್ನತ ಶಿಕ್ಷಣ ಸಂಸ್ಥೆಗಳಾದ ಐಐಎಂ, ಐಐಟಿ, ಐಐಎಸ್‌ಸಿ, ಐಐಐಟಿ, ಎನ್‌ಐಟಿಎಸ್, ಐಐಎಸ್‌ಇಆರ್, ಎಐಐಎಂಎಸ್, ಎನ್‌ಎಲ್‌ಯು, ಐಎಸ್‌ಎಂ, ಐಐಪಿ, ಐಎಸ್‌ಐ, ಜೆಐಪಿಎಂಇಆರ್ ಅಥವಾ ಎಸ್‌ಪಿಎಗಳಲ್ಲಿ ಪ್ರಥಮ ವರ್ಷಕ್ಕೆ ಪ್ರವೇಶ ಪಡೆದಿರುವ ರಾಜ್ಯದ ಹಿಂದುಳಿದ ವರ್ಗಗಳ ಪ್ರವರ್ಗ-೧, ೨(ಎ), ೩(ಎ) ಹಾಗೂ ೩(ಬಿ)ಗೆ ಸೇರಿದ ಅರ್ಹ ವಿದ್ಯಾರ್ಥಿಗಳಿಂದ ಪ್ರೋತ್ಸಾಹಧನಕ್ಕೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ತಾ. ೩೦ ರ ಸಂಜೆ ೫ ಗಂಟೆ ಕೊನೆಯ ದಿನವಾಗಿದೆ. ೨೦೨೨-೨೩ನೇ ಸಾಲಿನಲ್ಲಿ ಐಐಎಂ, ಐಐಟಿ, ಐಐಎಸ್‌ಸಿ, ಐಐಐಟಿ, ಎನ್‌ಐಟಿಎಸ್, ಐಐಎಸ್‌ಇಆರ್, ಎಐಐಎಂಎಸ್, ಎನ್‌ಎಲ್‌ಯು, ಐಎಸ್‌ಎಂ, ಐಐಪಿ, ಐಎಸ್‌ಐ, ಜೆಐಪಿಎಂಇಆರ್ ಅಥವಾ ಎಸ್‌ಪಿಎ ಒಟ್ಟು ಈ ೧೩ ಪ್ರತಿಷ್ಟಿತ ರಾಷ್ಷಿçÃಯ ಉನ್ನತ ಶಿಕ್ಷಣ ಸಂಸ್ಥೆಗಳ ಪೈಕಿ ಯಾವುದಾದರೂ ಒಂದರಲ್ಲಿ ಪ್ರಥಮ ವರ್ಷಕ್ಕೆ ಪ್ರವೇಶ ಪಡೆದಿರಬೇಕು.

ಈ ಪ್ರತಿಷ್ಟಿತ ರಾಷ್ಟಿçÃಯ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪದವಿ, ಸ್ನಾತಕೋತ್ತರ ಪದವಿ ಅಥವಾ ಪೂರ್ಣಾವಧಿ ಪಿಎಚ್‌ಡಿಗಾಗಿ ಪ್ರಥಮ ವರ್ಷಕ್ಕೆ ಪ್ರವೇಶ ಪಡೆದು ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಮಾತ್ರ ಈ ಕಾರ್ಯಕ್ರಮದಡಿ ಸೌಲಭ್ಯ ಒದಗಿಸಲಾಗುವುದು. ಈ ಸಂಸ್ಥೆಗಳಲ್ಲಿ ಡಿಪ್ಲೊಮೊ, ಪಿಜಿ ಡಿಪ್ಲೊಮೊ ಹಾಗೂ ಇತರೆ ಸರ್ಟಿಫಿಕೇಟ್ ಕೋರ್ಸುಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳು ಈ ಕಾರ್ಯಕ್ರಮದಡಿ ಪ್ರೋತ್ಸಾಹಧನ ಪಡೆಯಲು ಅವಕಾಶವಿರುವುದಿಲ್ಲ. ವಿದ್ಯಾರ್ಥಿಗಳ ಹಿಂದಿನ ಶೈಕ್ಷಣಿಕ ವಿದ್ಯಾರ್ಹತೆಯ ಅಂಕಗಳು/ಗ್ರೇಡ್ ಅನ್ನು ಪರಿಗಣಿಸಲಾಗುವುದು.

ಪದವಿಗೆ ದ್ವಿತೀಯ ಪಿ.ಯು.ಸಿ./೧೨ನೇ ತರಗತಿ ಅಂಕಗಳು/ಗ್ರೇಡ್, ಸ್ನಾತಕೋತ್ತರ ಪದವಿಗೆ ಪದವಿಯ ಎಲ್ಲಾ ವರ್ಷ/ಸೆಮಿಸ್ಟರ್‌ಗಳ ಸರಾಸರಿ ಅಂಕಗಳು/ ಗ್ರೇಡ್, ಪೂರ್ಣಾವಧಿ ಪಿಎಚ್‌ಡಿಗೆ ಸ್ನಾತಕೋತ್ತರ ಪದವಿಯ ಎಲ್ಲಾ ವರ್ಷ/ಸೆಮಿಸ್ಟರ್‌ಗಳ ಸರಾಸರಿ ಅಂಕಗಳು/ಗ್ರೇಡ್.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾ ವತಿಯಿಂದ ನೀಡುವ ೨ ಲಕ್ಷಗಳ ಪ್ರೋತ್ಸಾಹ ಧನವನ್ನು ವಿದ್ಯಾರ್ಥಿಯು ಜೀವನದಲ್ಲಿ ಒಂದು ಬಾರಿ ಮಾತ್ರ ಪಡೆಯಲು ಅರ್ಹರಿರುತ್ತಾರೆ. ಜಾತಿ ಮತ್ತು ಆದಾಯ ಮಿತಿ- ವಿದ್ಯಾರ್ಥಿಯು ಹಿಂದುಳಿದ ವರ್ಗಗಳ ಪ್ರವರ್ಗ-೧, ೨ಎ, ೩ಎ, ೩ಬಿ ಗೆ ಸೇರಿದವರಾಗಿರಬೇಕು. ಕುಟುಂಬದ ಒಟ್ಟು ವಾರ್ಷಿಕ ಆದಾಯ ರೂ. ೬ ಲಕ್ಷಗಳಿಗೆ ಮೀರಿರಬಾರದು. ಹೆಚ್ಚಿನ ವಿವರಗಳಿಗೆ ಇಲಾಖಾ ವೆಬ್‌ಸೈಟ್ hಣಣಠಿs://bಛಿತಿಜ.ಞಚಿಡಿಟಿಚಿಣಚಿಞಚಿ.gov.iಟಿ ಅನ್ನು ನೋಡಬಹುದು. ಸಹಾಯವಾಣಿ ಸಂಖ್ಯೆ: ೮೦೫೦೭೭೦೦೦೪ ಸಂಪರ್ಕಿಸಬಹುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಎನ್.ಮಂಜುನಾಥ್ ತಿಳಿಸಿದ್ದಾರೆ.