ಮಡಿಕೇರಿ, ಜ. ೧: ರಸ್ತೆ ಬದಿ ನಿಲ್ಲಿಸಿದ್ದ ಆಟೋ ರಿಕ್ಷಾವೊಂದಕ್ಕೆ ಬೆಂಕಿ ಹಚ್ಚಿದ್ದ ಪ್ರಕರಣಕ್ಕೆ ಸಂಬAಧಿಸಿದAತೆ ಬೆಂಕಿ ಹಚ್ಚಿದ ಆರೋಪಿಗೆ ಆಟೋರಿಕ್ಷಾ ಮಾಲೀಕ ಚಾಕುವಿನಿಂದ ಇರಿದ ಘಟನೆ ಇಂದು ನಡೆದಿದೆ. ಹಲವು ವರ್ಷಗಳಿಂದ ಇದ್ದ ವೈಮನಸ್ಸಿನ ಹಿನ್ನೆಲೆಯಲ್ಲಿ ತ್ಯಾಗರಾಜ ಕಾಲೋನಿಯ ಅಬ್ದುಲ್ ರೆಹಮಾನ್ ಎಂಬವರ ಆಟೋರಿಕ್ಷಾಕ್ಕೆ ಹ್ಯಾರಿಸ್ ಎಂಬಾತ ಬೆಂಕಿ ಹಚ್ಚಿದ್ದ.
ಈ ಪ್ರಕರಣಕ್ಕೆ ಸಂಬAಧಿಸಿದAತೆ ಪೊಲೀಸರು ಹ್ಯಾರಿಸ್ನನ್ನು ಬಂದಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದರು. ಬಳಿಕ ಹ್ಯಾರಿಸ್ ಜಾಮೀನಿನಡಿ ಬಿಡುಗಡೆಗೊಂಡಿದ್ದ. ಈ ಹಿನ್ನೆಲೆಯಲ್ಲಿ ಅಷ್ಟು ಶೀಘ್ರವಾಗಿ ಆತ ಬಿಡುಗಡೆ ಆದ ಬಗ್ಗೆ ಅಸಮಾಧಾನಗೊಂಡ ಅಬ್ದುಲ್ ರೆಹಮಾನ್ ಇಂದು ಮಾರುಕಟ್ಟೆ ಬಳಿ ಹ್ಯಾರಿಸ್ನ ಕುತ್ತಿಗೆ ಹಾಗೂ ಇತರ ಭಾಗಗಳಿಗೆ ಚಾಕುವಿನಿಂದ ಇರಿದಿದ್ದು, ಹ್ಯಾರಿಸ್ ಆಸ್ಪತ್ರೆಗೆ ದಾಖಲಾಗಿದ್ದಾನೆ. ಅಬ್ದುಲ್ ರೆಹಮಾನ್ನನ್ನು ವಶಕ್ಕೆ ಪಡೆದಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.