ನಾಪೋಕ್ಲು, ಜ. ೧: ಸಮೀಪದ ಬಲ್ಲಮಾವಟಿ ಗ್ರಾಮ ಪಂಚಾಯಿತಿ ವತಿಯಿಂದ ಸ್ವಾಮಿ ವಿವೇಕಾನಂದ ಯುವಕ ಸಂಘ ಹಾಗೂ ಸಂಜೀವಿನಿ ಒಕ್ಕೂಟಗಳ ಸಂಯುಕ್ತ ಆಶ್ರಯದಲ್ಲಿ ಶನಿವಾರ ನೇತಾಜಿ ಪ್ರೌಢಶಾಲೆಯ ಆಟದ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಗ್ರಾಮೀಣ ಕ್ರೀಡಾಕೂಟ ಹಾಗೂ ಅಂತರಗ್ರಾಮ ಹಾಕಿ ಪಂದ್ಯಾವಳಿಯಲ್ಲಿ ನೆಲಜಿ ಫಾರ್ಮರ್ಸ್ ಕ್ಲಬ್ ತಂಡವು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು .ಅಂತಿಮ ಪಂದ್ಯದಲ್ಲಿ ಬಲ್ಲಮಾವಟಿಯ ಅಪೊಲೋ ತಂಡದ ವಿರುದ್ಧ ಆಟವಾಡಿದ ನೆಲಜಿ ಫಾರ್ಮರ್ಸ್ ಕ್ಲಬ್ ತಂಡವು ೨-೧ ಅಂತರದಿAದ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

ಹಾಕಿ ಟೂರ್ನಿಯಲ್ಲಿ ವಿಜೇತ ತಂಡಕ್ಕೆ ಕಾಫಿ ಬೆಳೆಗಾರ ಮೂವೇರ ನಾಣಪ್ಪ ನೀಡಿದ ಟ್ರೋಫಿ ಹಾಗೂ ಮುಕ್ಕಾಟಿರ ವಿಠಲ ಕರಂಬಯ್ಯ ನೀಡಿದ ನಗದು ಬಹುಮಾನವನ್ನು ನೀಡಿ ಪುರಸ್ಕರಿಸಲಾಯಿತು.ದ್ವಿತೀಯ ಸ್ಥಾನ ಪಡೆದ ಅಪೊಲೋ ಬಲ್ಲಮಾವಟಿ ತಂಡಕ್ಕೆ ಎಸ್ ಎಲ್ ಎನ್ ಸಂಸ್ಥೆಯ ಸಂತೋಷ್ ಬಾಬು ಹಾಗೂ ಸಂದೀಪ್ ಬಾಬು ನೀಡಿದ ಟ್ರೋಫಿ ಹಾಗೂ ದೊಡ್ಡ ಪುಲಿಕೋಟುವಿನ ಪೆಬ್ಬೆಟ್ಟಿರ ಯತೀಶ್ ನೀಡಿದ ನಗದು ಬಹುಮಾನವನ್ನು ನೀಡಲಾಯಿತು. ವಿವಿಧ ಗ್ರಾಮಗಳ ಮಹಿಳೆಯರಿಗಾಗಿ ಏರ್ಪಡಿಸಲಾಗಿದ್ದ ಹಗ್ಗ ಜಗ್ಗಾಟದ ಸ್ಪರ್ಧೆಯಲ್ಲಿ ಅಂತಿಮ ಸ್ಪರ್ಧೆಯಲ್ಲಿ ನೆಲಜಿ ಎ ತಂಡವು ಪ್ರಶಸ್ತಿಗಳಿಸಿತು. ಇವರಿಗೆ ಮಂಡಿರ ಜಯ ದೇವಯ್ಯ ನೀಡಿದ ಟ್ರೋಫಿಯನ್ನು ಹಾಗೂ ಅಪ್ಪಚೆಟ್ಟೋಳಂಡ ಶ್ಯಾಂ ಕರುಂಬಯ್ಯ ನೀಡಿದ ನಗದು ಬಹುಮಾನ ನೀಡಿದರು. ಪೇರೂರು ತಂಡವು ದ್ವಿತೀಯ ಬಹುಮಾನವನ್ನು ಪಡೆದುಕೊಂಡಿತು. ಈ ತಂಡಕ್ಕೆ ಆಶಾರಾವ್ ನೀಡಿದ ಟ್ರೋಫಿ ಹಾಗೂ ದೊಡ್ಡ ಪುಲಿಕೋಟುವಿನ ಮುಕ್ಕಾಟಿರ ಎ. ಉಮೇಶ್ ನೀಡಿದ ನಗದು ಬಹುಮಾನವನ್ನು ನೀಡಲಾಯಿತು.ಈ ಸಂದರ್ಭ ಬಲ್ಲಮಾವಟಿ ಒಕ್ಕೂಟದ ಸ್ವಸಹಾಯ ಸಂಘ, ಸ್ತಿçÃಶಕ್ತಿ ಸಂಘ ಹಾಗೂ ಸಂಜೀವಿನಿ ಒಕ್ಕೂಟಗಳ ಸಂಯುಕ್ತ ಆಶ್ರಯದಲ್ಲಿ ಸಂತೆ ಮೇಳವನ್ನು ಆಯೋಜಿಸಲಾಗಿತ್ತು. ಸಂತೆಮೇಳವನ್ನು ಬಲ್ಲಮಾವಟಿ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷ ಮುಕ್ಕಾಟಿರ ಸುತನ್ ಸುಬ್ಬಯ್ಯ ಉದ್ಗಾಟಿಸಿದರು. ಬಲ್ಲಮಾವಟಿ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷ ಮುಕ್ಕಾಟಿರ ಸುತನ್ ಸುಬ್ಬಯ್ಯ, ಮಾಜಿ ಅಧ್ಯಕ್ಷ ಮಣವಟ್ಟಿರ ಹರೀಶ್ ಕುಶಾಲಪ್ಪ, ಉಪಾಧ್ಯಕ್ಷೆ ದೀನಾ ಮಾಯಮ್ಮ, ತಾಲೂಕು ಪಂಚಾಯಿತಿ ಇಒ ಶೇಖರ್, ಗ್ರಾಮ ಪಂಚಾಯಿತಿ ಸದಸ್ಯರಾದ ಮಚ್ಚುರ ರವೀಂದ್ರ, ರಾಜೀವಿ, ಗ್ರಾಮೀಣ ಕ್ರೀಡಾಕೂಟದ ಅಧ್ಯಕ್ಷ ಬಾಬಿ ಭೀಮಯ್ಯ ಪಿಡಿಓ ಶರತ್ ಪೂಣಚ್ಚ, ಟ್ರೋಫಿ ದಾನಿಗಳಾದ ಮೂವೇರ ಸಿ.ನಾಣಪ್ಪ, ಮಂಡಿರ ಜಯ ದೇವಯ್ಯ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಹಾಕಿ ಪಂದ್ಯಾವಳಿಯ ತೀರ್ಪುಗಾರರಾಗಿ ಹಾಕಿ ಕೂರ್ಗ್ ತೀರ್ಪುಗಾರರಾದ ಕರವಂಡ ಅಪ್ಪಣ್ಣ , ಕೋಡಿಮಣಿಯಂಡ ಗಣಪತಿ, ಕುಪ್ಪಂಡ ದಿಲನ್ ಬೋಪಣ್ಣ ಹಾಗೂ ಚೆಯ್ಯಂಡ ಅಪ್ಪಚ್ಚು ಕಾರ್ಯ ನಿರ್ವಹಿಸಿದರು. ಬೆಸ್ಟ್ ಗೋಲ್ ಕೀಪರ್ ಪ್ರಶಸ್ತಿ ಕ್ರೀಡಾಪಟು ಕೋಟೆರ ಬೋಪಣ್ಣ ಟೂರ್ನಿಯಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರ ಬಾಳೆಯಡ ವಿನಿಲ್ ಮಂದಣ್ಣ, ಟೂರ್ನಿಯ ಉತ್ತಮ ಆಟಗಾರರಾಗಿ ನೆರವಂಡ ನಾಚಪ್ಪ ಪ್ರಶಸ್ತಿ ಗಳಿಸಿದರು.