ಮುಳ್ಳೂರು, ಜ. ೧: ಸಮೀಪದ ನಿಡ್ತ ಗ್ರಾ.ಪಂ.ಯ ೨೦೨೨-೨೩ನೇ ಸಾಲಿನ ಗ್ರಾಮಸಭೆ ನಿಡ್ತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಗ್ರಾ.ಪಂ. ಅಧ್ಯಕ್ಷೆ ಯಶೋಧ ಪುಟ್ಟಸ್ವಾಮಿ ಅಧ್ಯಕ್ಷತೆಯಲ್ಲಿ ನಡೆಯಿತು. ವಿರಳ ಸಂಖ್ಯೆಯಲ್ಲಿ ಗ್ರಾಮಸ್ಥರು ಪಾಲ್ಗೊಂಡಿದ್ದಾರೆ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು ಗ್ರಾಮಸ್ಥರ ಹಾಜರಾತಿ ಕಡಿಮೆ ಇರುವಾಗ ಹೇಗೆ ಗ್ರಾಮಸಭೆ ನಡೆಸುತ್ತೀರಿ, ಗ್ರಾಮ ಸಭೆಯನ್ನು ಮುಂದೂಡಿ ಎಂದು ಗ್ರಾಮಸ್ಥರಾದ ಸುರೇಶ್, ಹರೀಶ್ ಆಕ್ಷೇಪ ವ್ಯಕ್ತಪಡಿಸಿದರು.
ಕಾನೂನಿನಂತೆ ನಾವು ಗ್ರಾಮಸಭೆಯನ್ನು ನಡೆಸಬೇಕಾಗುತ್ತದೆ. ಸಭೆ ಈಗಷ್ಟೆ ಪ್ರಾರಂಭಗೊAಡಿದೆ ಗ್ರಾಮಸ್ಥರು ಇನ್ನು ಬರುವವರಿದ್ದಾರೆ ಸಭೆ ನಡೆಸಲು ಅವಕಾಶ ಕೊಡಿ ಎಂದ ಪಿಡಿಓ ಪ್ರತಿಮಾ ಅವರ ಮನವಿಗೆ ಒಪ್ಪದ ಅವರುಗಳು ವಾಗ್ವಾದ ನಡೆಸಿದರು ಇದರಿಂದ ಸ್ವಲ್ಪ ಹೊತ್ತು ಸಭೆಯಲ್ಲಿ ಗೊಂದಲವಾಯಿತು. ಮತ್ತೆ ಸ್ವಲ್ಪ ಹೊತ್ತಿನಲ್ಲಿ ಸಭೆಗೆ ಗ್ರಾಮಸ್ಥರು ಆಗಮಿಸುತ್ತಿದ್ದಂತೆ ಸಭೆಯನ್ನು ಪ್ರಾರಂಭಿಸಲಾಯಿತು.
ಸಭೆಯಲ್ಲಿ ಶನಿವಾರಸಂತೆ ಸೆಸ್ಕಾಂ ಶಾಖಾಧಿಕಾರಿ ಸುದೀಪ್ ವಿದ್ಯುತ್ ವ್ಯವಸ್ಥೆಗೆ ಸಂಬAಧಪಟ್ಟ ಮಾಹಿತಿ ನೀಡುತ್ತಿದ್ದ ವೇಳೆ ಗ್ರಾಮಸ್ಥರು ರೈತರ ಕೃಷಿ ಉಪಯೋಗಕ್ಕಾಗಿ ೧೦ ಹೆಚ್ಪಿ ಮೋಟಾರಿಗೆ ಉಚಿತ ವಿದ್ಯುತ್ ವ್ಯವಸ್ಥೆ ಮತ್ತು ಈ ಹಿಂದಿನ ಕೃಷಿ ವಿದ್ಯುತ್ ಬಿಲ್ ಮನ್ನಾ ಮಾಡುತ್ತೇವೆ ಎಂದು ಸರಕಾರ ಆಶ್ವಾಸನೆ ನೀಡಿದೆ ಈ ಬಗ್ಗೆ ನಮಗೆ ಮಾಹಿತಿ ಕೊಡಿ ಎಂದರು. ಇದಕ್ಕೆ ಉತ್ತರಿಸಿದ ಶಾಖಾಧಿಕಾರಿ ಸರಕಾರ ಈಗ ರೈತರ ೧೦ ಎಚ್ಪಿ ಮೋಟರಿಗೆ ಉಚಿತ ವಿದ್ಯುತ್ ನೀಡುವುದು ಮತ್ತು ರೈತರಿಂದ ಬಾಕಿ ಆಗಿರುವ ವಿದ್ಯುತ್ ಬಿಲ್ ಅನ್ನು ಮನ್ನಾ ಮಾಡುವ ನಿರ್ಧಾರ ತೆಗೆದುಕೊಂಡಿದೆ ಆದರೆ ಸರಕಾರದಿಂದ ವಿದ್ಯುತ್ ಇಲಾಖೆಗೆ ಅಧಿಕೃತ ಆದೇಶ ಬಂದ ನಂತರ ಈ ಕುರಿತು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಕೆರೆ ಒತ್ತುವರಿ ವಿಚಾರಕ್ಕೆ ಸಂಬAಧಪಟ್ಟ ಚರ್ಚೆಯಲ್ಲಿ ಸರಕಾರಕ್ಕೆ ಸೇರಿದ ಕೆರೆಗಳನ್ನು ಒತ್ತುವರಿ ಮಾಡಿಕೊಂಡಿದನ್ನು ಕಾನೂನಿನಂತೆ ತೆರವುಗೊಳಿಸ ಲಾಗುತ್ತದೆ ಆದರೆ ಕೆಲವರು ಒತ್ತುವರಿ ಮಾಡಿಕೊಂಡ ಕೆರೆಯಲ್ಲಿ ಮನೆಗಳನ್ನು ಕಟ್ಟಿಕೊಂಡಿದ್ದಾರೆ.
ಆದರೆ ಸ್ಥಳೀಯ ಅಧಿಕಾರಿಗಳಿಗೆ ಕಟ್ಟಿಕೊಂಡಿರುವ ಮನೆಯನ್ನು ತೆರವುಗೊಳಿಸಲು ಕಾನೂನು ತೊಡಕಾಗುತ್ತದೆ ಹಿರಿಯ ಅಧಿಕಾರಿಗಳ ಮಟ್ಟದಲ್ಲಿ ಇಂತಹ ಪ್ರಕರಣಗಳ ಬಗ್ಗೆ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಕಂದಾಯ ಇಲಾಖೆ ಅಧಿಕಾರಿ ಸಂತೋಷ್ ಹೇಳಿದರು.
ಆರೋಗ್ಯ ಸೇವೆ ಕುರಿತು ಆಲೂರು-ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಣಾಧಿಕಾರಿ ಪ್ರವೀಣ್ಕುಮಾರ್ ಮಾಹಿತಿ ನೀಡಿದರು. ವಿವಿಧ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.
ಗ್ರಾಮ ಸಭೆಯಲ್ಲಿ ಶನಿವಾರಸಂತೆ ಪಶು ವೈದ್ಯಾಧಿಕಾರಿ ಡಾ. ಸತೀಶ್, ನೋಡಲ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.
ಸಭೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷ ತೀರ್ಥಾನಂದ್, ಪಿಡಿಓ ಪ್ರತಿಮಾ, ಕಾರ್ಯದರ್ಶಿ ಕುಶಾಲಪ್ಪ, ಗ್ರಾ.ಪಂ. ಆಡಳಿತ ಮಂಡಳಿ ಸದಸ್ಯರು ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.