ಮಡಿಕೇರಿ, ಜ. ೧: ಅರಣ್ಯ ಇಲಾಖೆಯಿಂದ ಹಸ್ತಾಂತರ ಮಾಡಿಕೊಂಡ ೨ ಲಕ್ಷ ಹೆಕ್ಟೇರ್ ಜಾಗವನ್ನು ವಿವಿಧ ಅಭಿವೃದ್ಧಿ ಕಾರ್ಯದ ಜೊತೆ ಆದ್ಯತೆ ಮೇರೆಗೆ ಜಿಲ್ಲೆಯ ನಿವೇಶನ ರಹಿತರಿಗೆ ಮೀಸಲಿಡಲಾಗುವುದು ಎಂದು ಕೆ.ಜಿ. ಬೋಪಯ್ಯ ಸ್ಪಷ್ಟಪಡಿಸಿದರು.

‘ಶಕ್ತಿ’ಯೊಂದಿಗೆ ಮಾತನಾಡಿದ ಅವರು, ನಿವೇಶನರಹಿತರಿಗೆ ಬೇಡಿಕೆ ಇರುವಷ್ಟು ಜಾಗವನ್ನು ನೀಡಿ ಉಳಿದ ಜಾಗವನ್ನು ವಿವಿಧ ಸರಕಾರದ ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳಲಾಗುವುದು. ಜಿಲ್ಲೆಯ ವಿವಿಧ ಗ್ರಾಮ ಮಟ್ಟದಲ್ಲಿ ಭೂಮಿ ದೊರೆಯಲಿದೆ. ಎಲ್ಲರಿಗೂ ವಸತಿ ಕಲ್ಪಿಸುವುದು ನಮ್ಮ ಆದ್ಯತೆಯಾಗಿದೆ. ನಿವೇಶನ ಬೇಡಿಕೆಗಿಂತ ಹೆಚ್ಚಿನ ಜಾಗ ಸಿಗುವುದರಿಂದ ಯಾವುದೇ ತೊಡಕು ಉಂಟಾಗುವುದಿಲ್ಲ. ಇದರೊಂದಿಗೆ ೧೦ ಹೆಚ್.ಪಿ. ಉಚಿತ ವಿದ್ಯುತ್ ಬಿಲ್ ಪಾವತಿ ವಿಚಾರದಲ್ಲಿ ಬೆಳೆಗಾರರು ಬಾಕಿ ಉಳಿಸಿಕೊಂಡಿರುವ ರೂ. ೪೮ ಕೋಟಿ ಹಣವನ್ನು ಮನ್ನಾ ಮಾಡಲು ಸರಕಾರಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ಇದಕ್ಕೆ ಸರಕಾರ ಸಕರಾತ್ಮಕವಾಗಿ ಸ್ಪಂದಿಸಿದ್ದು, ಆರ್ಥಿಕ ಇಲಾಖೆಯೊಂದಿಗೆ ವ್ಯವಹರಿಸಿ ಸೂಕ್ತ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.

ತಾ. ೧ರ ‘ಶಕ್ತಿ’ಯಲ್ಲಿ ಪ್ರಕಟಗೊಂಡಿರುವAತೆ ಈ ಮೊತ್ತ ಸಹಕಾರ ಸಂಘಗಳ ಮೂಲಕ ಪಡೆದ ಸಾಲ ಮನ್ನಾಕ್ಕೆ ಸಂಬAಧಿಸಿರುವುದಿಲ್ಲ, ಬದಲು ವಿದ್ಯುತ್ ಬಾಕಿ ಮನ್ನಾಕ್ಕೆ ಸಂಬAಧಿಸಿದ್ದಾಗಿದೆ ಎಂದು ಬೋಪಯ್ಯ ಅವರು ಸ್ಪಷ್ಟಪಡಿಸಿದ್ದಾರೆ.