ಮಡಿಕೇರಿ, ಜ. ೧: ವೀರಾಜಪೇಟೆ ತಾಲೂಕು ಬಾಳೆಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟ ೨೦೨೨-೨೩ನೇ ಸಾಲಿನ ಬಾಳೆಲೆ ಗ್ರಾಮದ ವಾರ್ಡ್ ಸಭೆ ತಾ. ೩ ರಂದು ಅಪರಾಹ್ನ ೨.೩೦ ಗಂಟೆಗೆ ಪಿ.ಜಿ. ಜಾನಕಿ ಅವರ ಅಧ್ಯಕ್ಷತೆಯಲ್ಲಿ ಬಾಳೆಲೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆಯಲಿದೆ.
ಸುಳುಗೋಡು ಗ್ರಾಮದ ವಾರ್ಡ್ ಸಭೆ ತಾ. ೫ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಕಳ್ಳಿಚಂಡ ಬಿ. ಕುಶಾಲಪ್ಪ ಅವರ ಅಧ್ಯಕ್ಷತೆಯಲ್ಲಿ ಸುಳುಗೋಡು ಸ.ಹಿ.ಪ್ರಾ. ಶಾಲೆಯ ಸಭಾಂಗಣದಲ್ಲಿ, ದೇವನೂರು ಎ. ಗ್ರಾಮದ ವಾರ್ಡ್ ಸಭೆ ತಾ. ೬ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಬಿ.ಕೆ. ಪುಷ್ಪಾವತಿ ಅವರ ಅಧ್ಯಕ್ಷತೆಯಲ್ಲಿ ಬಾಳೆಲೆ ಗ್ರಾ.ಪಂ. ಸಭಾಂಗಣದಲ್ಲಿ ನಡೆಯಲಿದೆ. ದೇವನೂರು ಬಿ. ಗ್ರಾಮದ ವಾರ್ಡ್ ಸಭೆ ತಾ. ೩ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಎ.ಎಸ್. ನವೀನ್ ಅವರ ಅಧ್ಯಕ್ಷತೆಯಲ್ಲಿ ದೇವನೂರು ಬಿ. ಸ.ಹಿ.ಪ್ರಾ. ಶಾಲೆಯ ಸಭಾಂಗಣದಲ್ಲಿ ನಡೆಯಲಿದೆ.