ನಾಪೋಕ್ಲು, ಜ. ೧: ಸಮೀಪದ ಬಲ್ಲಮಾವಟಿ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಶನಿವಾರ ನಡೆಯಿತು. ನೂತನ ಅಧ್ಯಕ್ಷರಾಗಿ ಮುಕ್ಕಾಟಿರ ಕೆ. ಸುತನ್ ಸುಬ್ಬಯ್ಯ ಆಯ್ಕೆಯಾದರು. ಮಾಜಿ ಅಧ್ಯಕ್ಷ ಮಣವಟ್ಟಿರ ಹರೀಶ್ ಕುಶಾಲಪ್ಪ ಅವರ ರಾಜೀನಾಮೆ ಯಿಂದ ತೆರವಾದ ಹುದ್ದೆಗೆ ಮುಕ್ಕಾಟಿರ ಕೆ. ಸುತನ್ ಸುಬ್ಬಯ್ಯ ಅವಿರೋಧವಾಗಿ ಆಯ್ಕೆಯಾದರು.
ಆಯ್ಕೆ ಪ್ರಕ್ರಿಯೆ ಸಂದರ್ಭ ಬಿಜೆಪಿ ಮುಖಂಡರಾದ ಅಪ್ಪಚೆಟ್ಟೋಳಂಡ ಕೆ. ಮನು ಮುತ್ತಪ್ಪ, ಕರವಂಡ ಲವ ನಾಣಯ್ಯ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ದೀನ ಮಾಯಮ್ಮ, ಪಂಚಾಯಿತಿ ಸದಸ್ಯರು, ಪಿಡಿಓ ಶರತ್ ಪೂಣಚ್ಚ, ಸಿಬ್ಬಂದಿ ಮತ್ತಿತರರು ಉಪಸ್ಥಿತರಿದ್ದರು.