ಬೆಂಗಳೂರು, ಜ. ೧: ಪಹಣಿ (ಖಖಿಅ) ಬೆಲೆಯನ್ನು ರಾಜ್ಯ ಸರಕಾರ ಒಮ್ಮೆಲೆ ಹತ್ತು ರೂಪಾಯಿ ಹೆಚ್ಚಳ ಮಾಡಿದೆ. ಈ ಮೊದಲು ಪಹಣಿ ಪ್ರತಿ ಪಡೆಯಲು ರೈತರು ೧೫ ರೂಪಾಯಿ ಪಾವತಿಸಬೇಕಿತ್ತು ಕಳೆದ ೧೦ ದಿನಗಳಿಂದ ಪಹಣಿ ಪ್ರತಿ ಪಡೆಯಲು ೨೫ ರೂಪಾಯಿಗಳನ್ನು ನೀಡಬೇಕಿದೆ. ಪ್ರಸ್ತುತ ಭೂ ಹಿಡುವಳಿ ರೈತ ಸಮುದಾಯ ಸರ್ಕಾರದ ಯಾವುದೇ ಸೌಲಭ್ಯ ಪಡೆಯಬೇಕಾದರೂ ಪಹಣಿ ಪ್ರತಿ ಸಲ್ಲಿಕೆಯನ್ನು ಕಡ್ಡಾಯಗೊಳಿಸಲಾಗಿದೆ. ಆಸ್ತಿ ಮಾರುವಾಗ, ಸಬ್ಸಿಡಿಗೆ ಅರ್ಜಿ ಸಲ್ಲಿಸಲು, ನರೇಗಾ, ಬ್ಯಾಂಕ್‌ಗಳಲ್ಲಿ ಸಾಲ ಪಡೆಯುವುದೂ ಸೇರಿ ಒಂದಲ್ಲ ಒಂದು ಕಾರಣಕ್ಕೆ ಪಹಣಿ ಸಲ್ಲಿಸಲೇಬೇಕಾಗಿದೆ. ತಹಶೀಲ್ದಾರ್ ಕಚೇರಿ, ಇಲ್ಲವೇ ನಾಡಕಚೇರಿಗೆ ಹೋದರೆ ಪಹಣಿ ಪಡೆಯಲು ಸಾಲುಗಟ್ಟಿದ ರೈತರ ದೊಡ್ಡ ಸರತಿ ಸಾಮಾನ್ಯವಾಗಿ ಕಾಣಸಿಗುತ್ತದೆ. ಮೊದಲು ಗ್ರಾಮ ಲೆಕ್ಕಿಗರು ಕೈಯಲ್ಲಿ ಪಹಣಿ ಬರೆದುಕೊಡುವಾಗ ಸ್ಟಾಂಪ್ ಅಂಟಿಸಿ ಕೊಡುವಲ್ಲಿಂದ ಇಷ್ಟರವರೆಗೆ ೧೫ ರೂಪಾಯಿ ನಿಗದಿಮಾಡಲಾ ಯಿತು. ಇದೀಗ ಒಮ್ಮೆಲೆ ಮತ್ತೆ ೧೦ ರೂಪಾಯಿ ಜಾಸ್ತಿ ಮಾಡಿ ಪಹಣಿ ದರ ೨೫ ರೂಪಾಯಿಕ್ಕೇರಿಸಲಾಗಿದೆ.

ಮೊದಲು ಎಷ್ಟೇ ಪುಟಗಳಿದ್ದರೂ ಪಹಣಿ ದರ ಪ್ರತೀ ಸರ್ವೆ ನಂಬರ್ ಗೆ ೧೫ ರೂಪಾಯಿ ಇತ್ತು ಇನ್ನು ಮುಂದೆ ನಾಲ್ಕು ಪುಟಗಳಿಗೆ ೨೫ರೂಪಾಯಿ ಇದ್ದರೆ ಮುಂದುವರಿದ ಪುಟ ಒಂದಕ್ಕೆ ೫ ರೂ ಹೆಚ್ಚಳ ಮಾಡಲಾಗಿದೆ.

ಮ್ಯೂಟೇಷನ್ ನಕಲು ಪ್ರತಿಗೆ ಮೊದಲು ಎಷ್ಟೇ ಪುಟ ಇದ್ದರೂ ೨೫ ರೂಪಾಯಿಗೆ ಸಿಗುತಿತ್ತು. ಈಗ ನಾಲ್ಕರ ನಂತರದ ಪ್ರತಿ ಪುಟಕ್ಕೆ ೫ ರೂ. ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ದರ ಹೆಚ್ಚಳದ ಪ್ರಮಾಣವನ್ನು ಭೂಮಿ ಸಾಫ್ಟ್ವೇರ್‌ಗೆ ದಾಖಲಿಸಲಾಗಿದೆ. ಪಹಣಿ ತೆಗೆದು ರೈತರಿಗೆ ಕೊಡುವಾಗಲೇ ರೂ.೨೫ ಮೊತ್ತ ಕಂಪ್ಯೂಟರ್‌ನಲ್ಲಿ ಜನರೇಟ್ ಆಗುತ್ತಿದೆ. ಕಾಮನ್ ಸರ್ವಿಸ್ ಸೆಂಟರ್ (ಖಾಸಗಿಯಲ್ಲಿ) ಪಹಣಿ ಪಡೆಯುವಾಗ ಈ ಮೊದಲು ಅವರು ೫ ರೂ. ಸೇವಾ ಶುಲ್ಕ ವಸೂಲು ಮಾಡುತ್ತಿದ್ದರು. ಈಗ ಮೂವತ್ತು ರೂಪಾಯಿ ಪಾವತಿಸಿ ಪಹಣಿ ಪಡೆಯಬೇಕಾಗಿದೆ.

ಆದರೆ ಈ ದರ ಹಚ್ಚಳಕ್ಕೆ ರೈತ ಸಂಘದಿAದ

(ಮೊದಲ ಪುಟದಿಂದ) ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾ ಶಾಖೆಯ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ರಾಜ್ಯ ಸರ್ಕಾರ ದರ ಏರಿಕೆಯ ಮೂಲಕ ರೈತರಿಗೆ ಬರೆ ಎಳೆದಿದೆ. ೫ ಎಕರೆಗಿಂತ ಒಳಪಟ್ಟ ರೈತರಿಗೆ ಹಿಂದಿನ ದರವನ್ನೇ ಮುಂದುವರಿಸುವAತೆ ಆಗ್ರಹಿಸಿದರು. ರಾಜ್ಯ ಸರ್ಕಾರ ಕೂಡಲೇ ಪಹಣಿ ದರ ಏರಿಕೆಯನ್ನು ಹಿಂತೆಗೆದುಕೊಳ್ಳದಿದ್ದರೆ ರೈತ ಸಂಘದ ವತಿಯಿಂದ ಪ್ರತಿಭಟನೆ ಮಾಡಲಾಗುವುದು ಎಂದು ಹೇಳಿದರು. - ಕೋವರ್‌ಕೊಲ್ಲಿ ಇಂದ್ರೇಶ್