ಗೋಣಿಕೊಪ್ಪ ವರದಿ, ಜ. ೧: ಕೊಡಗು ದೈವಗಳ ಮೂಲ ಸ್ಥಾನ ಕೇರಳ ರಾಜ್ಯದ ಬೈತೂರಿನಲ್ಲಿ ತಾ. ೨೨ ರಿಂದ ತಾ. ೨೫ರವರೆಗೆ ನಡೆಯುವ ಹಬ್ಬ ಆಚರಣೆ ಪ್ರಯುಕ್ತ ಕೋಮರತಜ್ಜ ಆಗಮನ ಭಾನುವಾರ ಆರಂಭವಾಯಿತು.
೯ ದಿನ ಜಿಲ್ಲೆಯ ವಿವಿಧ ಭಾಗಗಳಿಗೆ ತೆರಳಿ ಮಾಹಿತಿ ನೀಡುವ ಆಚರಣೆಯಂತೆ ಶನಿವಾರ ಪೆಗ್ಗಳ ದೇವಸ್ಥಾನಕ್ಕೆ ಆಗಮಿಸಿ ಅಲ್ಲಿ ಪೂಜೆ ಸಲ್ಲಿಸಲಾಯಿತು. ಶನಿವಾರ ಭಾನುವಾರ ಪುಗ್ಗೇರ ನಂದಾ ಗಣಪತಿ, ಕೊಳುವಂಡ ಐನ್ಮನೆ, ಮಾಳೇಟಿರ ಮನೆ, ಚೆಂಬೆಬೆಳ್ಳೂರು ಈಶ್ವರ ದೇವಸ್ಥಾನಕ್ಕೆ ಭೇಟಿ ನೀಡಲಾಯಿತು.
ದೇವಣಗೇರಿ ಮುಕ್ಕಾಟಿರ ಐನ್ಮನೆ, ಈಶ್ವರ ದೇವಸ್ಥಾನ, ಪುಗ್ಗೇರ ಐನ್ಮನೆ, ಭಗವತಿ ದೇವಸ್ಥಾನ, ಹಾಲುಗುಂದ ಭಗವತಿ ದೇವಸ್ಥಾನ, ಮೈತಾಡಿ ಚಪ್ಪಂಡ ಐನ್ಮನೆ, ಅಯ್ಯಪ್ಪ ದೇವಸ್ಥಾನ, ಐಚೆಟ್ಟಿರ ಐನ್ಮನೆ, ಬೇರೆರ ಕೈಮಡ, ಕುಂಜಿಲಗೇರಿ ಮುಕ್ಕಾಟಿರ ಐನ್ಮನೆ, ಬೊಳ್ಳುಮಾಡ್ ಮಾತಂಡ ಐನ್ಮನೆ, ಬಲ್ಲಚಂಡ ಐನ್ಮನೆ, ಅರಮೇರಿ ಭಗವತಿ ದೇವಸ್ಥಾನ, ಕದನೂರು ಪಾಲೆಕಂಡ ಐನ್ಮನೆ, ಕೆದಮುಳ್ಳೂರು ಈಶ್ವರ ದೇವಸ್ಥಾನ, ಕದನೂರು ಭಗವತಿ, ಮಗ್ಗುಲ ದೇವಸ್ಥಾನ, ಚೋಕಂಡ ಐನ್ಮನೆ, ಅಯ್ಯಪ್ಪ ದೇವಸ್ಥಾನ, ಪುಲಿಯಂಡ ಐನ್ಮನೆ, ಮಡಿಕೇರಿ ಓಂಕಾರೇಶ್ವರ ದೇವಸ್ಥಾನ, ವೀರಾಜಪೇಟೆ ಗಣಪತಿ ದೇವಸ್ಥಾನ, ಮಾಚೆಟಿರ ಮನೆ, ಕಾಮೆಯಂಡ ಮನೆ, ಕೊಡಂದೇರ ಮನೆ, ಮೂರೀರ ಮನೆ, ಅಮ್ಮಣಕುಟ್ಟಂಡ ಮನೆಗೆ ತೆರಳಿ ತಾ. ೯ ರ ಸಂಜೆ ಬೈತೂರಿಗೆ ತೆರಳುತ್ತದೆ.
ಈ ಸಂದರ್ಭ ದೇವಸ್ಥಾನ ತಕ್ಕ ಪುಗ್ಗೇರ ಪೊನ್ನಪ್ಪ, ಟ್ರಸ್ಟಿ ಮಾಳೇಟಿರ ರತ್ನ ಸುಬ್ಬಯ್ಯ, ಭಕ್ತರಾದ ನಂದಾ ಸುಬ್ಬಯ್ಯ, ಪುಗ್ಗೇರ ದೇವಯ್ಯ, ಚೇಂದAಡ ಶಿವಕುಮಾರ್, ಗ್ರಾಮಸ್ಥರು ಇದ್ದರು.