ವರ್ಷಕ್ಕೊಮ್ಮೆ ಕ್ಯಾಲೆಂಡರ್ ಬದಲಾಗುತ್ತದೆ. ಆದರೆ ಕಳೆದು ಹೋದ ಸಮಯ ಮತ್ತೆ ಬರುವುದಿಲ್ಲ. ಹಾಗಾಗಿ ಹೊಸ ವರ್ಷದ ಹೊಸ ಕ್ಷಣಗಳನ್ನು ಸ್ವಾಗತಿಸಲು ಸಿದ್ಧರಾಗಬೇಕಾಗಿದೆ. ಹೊಸ ವರ್ಷದ ಆಚರಣೆ ಎಂದರೆ ಬರೀ ಮೋಜು ಮಸ್ತಿಯಿಂದ ಕೂಡಿರುವುದಲ್ಲ. ಒಂದಷ್ಟು ವಿಭಿನ್ನ ಗುರಿ ಮತ್ತು ಕನಸುಗಳೊಂದಿಗೆ ಹೆಜ್ಜೆ ಇಡುವುದು ಎಂದರ್ಥ. ಇನ್ನು ವಿದ್ಯಾರ್ಥಿಗಳಿಗೆ ಮತ್ತು ಉದ್ಯೋಗಿಗಳಿಗೆ ಈ ವರ್ಷ ಲಾಭ ತರಲಿ ಎನ್ನುವುದೇ ನಮ್ಮ ಆಶಯ.
೪೦೦೦ ವರ್ಷಗಳ ಹಿಂದೆ ಬ್ಯಾಬಿಲೋನನಲ್ಲಿ ಪಾಶ್ಚಿಮಾತ್ಯ ನಾಗರಿಕತೆಯ ಹೊಸ ವರ್ಷವನ್ನು ಆಚರಿಸಲಾಯಿತು. ಆದರೆ ಆ ಸಮಯದಲ್ಲಿ ಹೊಸ ವರ್ಷವನ್ನು ಮಾರ್ಚ್ ೨೧ ರಂದು ಆಚರಿಸಲಾಗಿತ್ತು. ಆದರೆ ಜೂಲಿಯನ್ ಕ್ಯಾಲೆಂಡರ್ ಆಗಮನದ ನಂತರ ಪ್ರತಿ ವರ್ಷ ಜನವರಿ ೧ ರಂದು ಹೊಸ ವರ್ಷವನ್ನು ಆಚರಿಸಲಾಗುತ್ತಿದೆ. ವರ್ಷದಲ್ಲಿ ೩೬೫ ದಿನಗಳಿವೆ, ಅದು ಪೂರ್ಣಗೊಂಡ ನಂತರ ಹೊಸ ವರ್ಷವನ್ನು ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ. ಪ್ರಸ್ತುತ ಪ್ರಪಂಚದಾದ್ಯAತ ಪಾಶ್ಚಿಮಾತ್ಯ ನಾಗರಿಕತೆಯ ಪ್ರಭಾವದಿಂದಾಗಿ ಎಲ್ಲರೂ ಜನವರಿ ೧ ಅನ್ನು ಹೊಸ ವರ್ಷವೆಂದು ಆಚರಿಸುತ್ತಾರೆ.
ಭಾರತದಲ್ಲಿ ಪ್ರತಿಯೊಬ್ಬರೂ ತಮ್ಮ ಧರ್ಮದ ಪ್ರಕಾರ ವಿವಿಧ ದಿನಗಳಲ್ಲಿ ಹೊಸ ವರ್ಷವನ್ನು ಆಚರಿಸುತ್ತಾರೆ. ಇನ್ನೂ ಪಾಶ್ಚಿಮಾತ್ಯ ನಾಗರಿಕತೆಯ ಪ್ರಭಾವದಿಂದಾಗಿ ಹೆಚ್ಚಿನ ಜನರು ಜನವರಿ ೧ ರಂದು ಹೊಸ ವರ್ಷವನ್ನು ಆಚರಿಸುತ್ತಾರೆ. ತೆಲುಗು ಹೊಸ ವರ್ಷವು ಮಾರ್ಚ್ ಮತ್ತು ಏಪ್ರಿಲ್ ನಡುವೆ ಬರುತ್ತದೆ. ಆಂಧ್ರಪ್ರದೇಶದಲ್ಲಿ ಚೈತ್ರ ಮಾಸದ ಮೊದಲ ದಿನವಾದ ಯುಗಾದಿಯಂದು ಈ ದಿನವನ್ನು ಆಚರಿಸಲಾಗುತ್ತದೆ. ಭಾರತದಲ್ಲಿ ಹೊಸ ವರ್ಷದ ಶುಭ ಸಂದರ್ಭದಲ್ಲಿ ಅನೇಕ ವರ್ಣರಂಜಿತ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.ಈ ದಿನದಂದು ಪ್ರತಿಯೊಬ್ಬರೂ ತಮ್ಮ ಸ್ನೇಹಿತರು ಮತ್ತು ಸಂಬAಧಿಕರಿಗೆ ಅಭಿನಂದನಾ ಸಂದೇಶಗಳನ್ನು ನೀಡುತ್ತಾರೆ ಮತ್ತು ಶುಭಾಶಯಗಳನ್ನು ಕೋರುತ್ತಾರೆ. ಹೊಸ ವರ್ಷದ ಸಂದರ್ಭದಲ್ಲಿ ಕೆಲವೆಡೆ ಕವಿ ಸಮ್ಮೇಳನ, ಭಜನಾ ಸಂಧ್ಯಾ, ಕಲಶ ಯಾತ್ರೆ ಇತ್ಯಾದಿ ಕಾರ್ಯಕ್ರಮಗಳನ್ನೂ ಆಯೋಜಿಸಲಾಗುತ್ತದೆ. ಕೆಲವರು ತಮ್ಮ ವರ್ಷದ ಮೊದಲ ದಿನವನ್ನು ಗೋಶಾಲೆಯಲ್ಲಿ ಹಸುಗಳನ್ನು ಮೇಯಿಸುವುದು ಮತ್ತು ಅಗತ್ಯವಿರುವವರಿಗೆ ಸಹಾಯ ಮಾಡುವಂತಹ ಉದಾತ್ತ ಕೆಲಸದಿಂದ ಪ್ರಾರಂಭಿಸಲು ಮತ್ತು ರಕ್ತದಾನ ಮಾಡಲು ಮುಂದಾಗುತ್ತಾರೆ.
ಪ್ರತಿ ದೇಶಕ್ಕೂ ಮತ್ತು ಪ್ರತಿಯೊಬ್ಬ ವ್ಯಕ್ತಿಗಳಲ್ಲೂ ಹೊಸ ವರ್ಷಕ್ಕೆ ಹೆಚ್ಚಿನ ಮಹತ್ವವಿದೆ. ಹೊಸ ವರ್ಷವು ಹೊಸ ಕೆಲಸವನ್ನು ಮಾಡಲು ನಮಗೆ ಸ್ಫೂರ್ತಿ ನೀಡುತ್ತದೆ. ಇದು ನವೀಕೃತ ಉತ್ಸಾಹ ಮತ್ತು ಸಂತೋಷದಿAದ ಜೀವನವನ್ನು ನಡೆಸಲು ನಮಗೆ ಶಕ್ತಿಯನ್ನು ನೀಡುತ್ತದೆ. ಹೊಸ ವರ್ಷದಲ್ಲಿ ನಾವು ಹಿಂದಿನ ವರ್ಷದಲ್ಲಿ ಮಾಡಿದ ತಪ್ಪುಗಳಿಂದ ಕಲಿಯುತ್ತೇವೆ.ನಂತರ ಹೊಸ ನಿರ್ಣಯ ಅಥವಾ ಪ್ರತಿಜ್ಞೆ ಮಾಡಿ ಪೂರ್ಣ ಶಕ್ತಿಯಿಂದ ಕೆಲಸವನ್ನು ಪೂರ್ಣಗೊಳಿಸಲು ಪ್ರಾರಂಭಿಸುತ್ತೇವೆ, ಅದು ನಮ್ಮ ಯಶಸ್ಸಿಗೆ ಕಾರಣವಾಗುತ್ತದೆ. ಇದು ನಮ್ಮಲ್ಲಿ ಹೊಸ ಚೈತನ್ಯವನ್ನು ತರುವ ಹಬ್ಬದಂತಿದೆ. ಇದರಿಂದಾಗಿ ನಮ್ಮ ಜೀವನದಲ್ಲಿ ಹೊಸ ವರ್ಷದ ಮಹತ್ವವು ಹೆಚ್ಚಾಗುತ್ತದೆ.
- ಎಸ್.ಸಿ. ಮೋಹನ್, ಎರಡನೇ ಎಂ ಕಾಮ್, ಸೇಂಟ್ ಆನ್ಸ್ ಪಿಜಿ ಅಧ್ಯಯನ ಕೇಂದ್ರ, ವೀರಾಜಪೇಟೆ. ಮೊ. ೭೬೧೯೪೯೪೯೧೫