ಮಡಿಕೇರಿ, ಡಿ. ೩೧: ಮೂರ್ನಾಡಿ ನಿಂದ ಐಕೊಳ, ಕೊಂಡAಗೇರಿ ಮಾರ್ಗವಾಗಿ ಅಮ್ಮತ್ತಿಗೆ ಸಾಗುವ ರಸ್ತೆ ತೀರ ಹದಗೆಟ್ಟಿದೆ. ಇದರಿಂದ ಸಂಚಾರಕ್ಕೆ ಸಮಸ್ಯೆಯಾಗಿದ್ದು, ಅಧಿಕಾರಿಗಳು ಎಚ್ಚೆತ್ತು ರಸ್ತೆ ಡಾಂಬರೀಕರಣಕ್ಕೆ ಕ್ರಮ ವಹಿಸಬೇಕು. ಇಲ್ಲದಿದ್ದಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಐಕೊಳ ಸುತ್ತಮುತ್ತಲಿನ ನಿವಾಸಿಗಳು ಎಚ್ಚರಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗ್ರಾಮದ ಪಳಂಗAಡ ಮುದ್ದಪ್ಪ, ರಸ್ತೆ ತುಂಬ ಬೃಹತ್ ಗುಂಡಿಗಳಿAದ ಕೂಡಿದೆ. ಹಲವು ಬಾರಿ ರಸ್ತೆ ಸಮಸ್ಯೆ ಬಗ್ಗೆ ಸಂಬAಧಪಟ್ಟವರ ಗಮನಕ್ಕೆ ತಂದರು ಯಾವುದೇ ಸ್ಪಂದನ ದೊರೆತಿಲ್ಲ. ಐಕೊಳ-ಕೊಂಡAಗೇರಿ ರಸ್ತೆಯಲ್ಲಿ ಸಾಗುವುದು ದುಸ್ತರವಾಗಿದೆ. ಜೊತೆಗೆ ಮಳೆಗಾಲದಲ್ಲಿ ಸರಾಗವಾಗಿ ನೀರು ಹರಿಯಲು ಚರಂಡಿ ಇಲ್ಲದ ಕಾರಣ ರಸ್ತೆ ಗುಣಮಟ್ಟ ಕಳೆದುಕೊಳ್ಳುತ್ತದೆ. ರಸ್ತೆ ಹದಗೆಟ್ಟ ಹಿನ್ನೆಲೆ ಆಟೋ, ಟ್ಯಾಕ್ಸಿ ಬಾಡಿಗೆ ದುಪ್ಪಟ್ಟಾಗಿದೆ. ಇದರಿಂದ ಜನಸಾಮಾನ್ಯರಿಗೆ ಸಮಸ್ಯೆಯಾಗಿದೆ. ತ್ಯಾಪೆ ಹಾಕಿ ೨-೩ ದಿನಗಳಲ್ಲಿ ರಸ್ತೆ ಹಾಳಾಗುತ್ತಿದೆ ಎಂದು ಆರೋಪಿಸಿದರು.

ನಿವಾಸಿ ಪಳಂಗAಡ ಲವಕುಮಾರ್ ಮಾತನಾಡಿ, ಪ್ರತಿ ವರ್ಷ ಗುಂಡಿ ಮುಚ್ಚುವ ಕೆಲಸ ಕಾಟಾಚಾರಕ್ಕೆ ನಡೆಯುತ್ತದೆ. ಶಾಶ್ವತ ಪರಿಹಾರ ನೀಡುವಲ್ಲಿ ಅಧಿಕಾರಿಗಳು ವೈಫಲ್ಯ ಸಾಧಿಸಿದ್ದಾರೆ. ಇದೀಗ ರಸ್ತೆ ಕಾಮಗಾರಿಗೆ ರೂ. ೩ ಲಕ್ಷ ಬಿಡುಗಡೆಗೊಳಿಸಲಾಗಿದೆ ಎನ್ನುವ ಮಾಹಿತಿ ಇದೆ. ಈ ಹಣದಿಂದ ಗುಣಮಟ್ಟ ರಸ್ತೆ ನಿರ್ಮಾಣ ಅಸಾಧ್ಯ. ಹೆಚ್ಚುವರಿ ಅನುದಾನ ನೀಡಿ ಉತ್ತಮ ರಸ್ತೆ ನಿರ್ಮಿಸುವಂತೆ ಆಗ್ರಹಿಸಿದರು.

ಗೋಷ್ಠಿಯಲ್ಲಿ ನಿವಾಸಿಗಳಾದ ಪಳಂಗAಡ ಕಾರ್ಯಪ್ಪ, ತಮ್ಮಯ್ಯ, ಮುಕ್ಕಾಟೀರ ಶಿವಕುಮಾರ್ ಕಾರ್ಯಪ್ಪ, ಮಾಳೇಟೀರ ಮೇದಪ್ಪ ಹಾಜರಿದ್ದರು.