ಮಡಿಕೇರಿ, ಡಿ. ೩೧: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವತಿಯಿಂದ ಗ್ರಾಹಕರಿಗೆ ಒದಗಿಸುವ ವಿದ್ಯುತ್ ಸಂಬAಧಿಸಿದAತೆ ಬಿಲ್ ಪಾವತಿಗೆ ಇನ್ನು ಮುಂದೆ ಮನೆಗೆ ತಲುಪಿಸುವ ಭೌತಿಕ ಬಿಲ್ನಲ್ಲಿಯೇ ಬಿಲ್ ಮೊತ್ತ ಹಾಗೂ ಸೆಸ್ಕ್ ಬ್ಯಾಂಕ್ ಖಾತೆ ಹೊಂದಿರುವ ಕ್ಯೂ.ಆರ್ ಕೋಡ್ ಅನ್ನು ನಮೂದಿಸಲಾಗಲಿದ್ದು, ಗ್ರಾಹಕರು ತಮ್ಮ ಯಾವುದಾದರೂ ಯು.ಪಿ.ಐ. (ಗೂಗಲ್ ಪೇ, ಫೋನ್ ಪೇ, ಭೀಮ್ ಆಪ್ ಇತ್ಯಾದಿ) ಆಧಾರಿತ ಆ್ಯಪ್ಗಳ ಸಹಕಾರದಿಂದ ಹಣ ಪಾವತಿ ಮಾಡಬಹುದಾಗಿದೆ. ಈ ಹೊಸ ತಂತ್ರವು ಡಿ. ೩೦ ರಂದು ಬೆಂಗಳೂರಿನಲ್ಲಿ ಉದ್ಘಾಟನೆ ಗೊಂಡಿದ್ದು, ಹೊಸ ವರ್ಷ ಜನವರಿ ೧ ರಿಂದ ಚಾಲ್ತಿಗೆ ಬರಲಿದೆ. ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಸೆಸ್ಕ್)ದಿಂದ ವಿದ್ಯುತ್ ಪಡೆಯುವ ಜಿಲ್ಲೆಗಳಾದ ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಸೇರಿದಂತೆ ಕೊಡಗು
(ಮೊದಲ ಪುಟದಿಂದ) ಜಿಲ್ಲೆಯಲ್ಲಿಯೂ ಈ ಕ್ಯೂ.ಆರ್ ಕೋಡ್ ನಮೂದಿತ ಬಿಲ್ ಗ್ರಾಹಕರಿಗೆ ದೊರಕಲಿದೆ.
ಜ. ೧ ರಿಂದ ಅನ್ವಯವಾಗುವಂತೆ ಸೆಸ್ಕ್, ಇಂಡಿಯನ್ ಬ್ಯಾಂಕ್ ಸಹಯೋಗದೊಂದಿಗೆ ಕ್ಯೂ.ಆರ್ ಕೋಡ್ ಆಧಾರಿತ ಹೊಸ ರೀತಿಯ ಬಿಲ್ ತಯಾರಿಕೆ ಮತ್ತು ಪಾವತಿ ವ್ಯವಸ್ಥೆಯನ್ನು ಗ್ರಾಹಕರಿಗೆ ಪರಿಚಯಿಸುತ್ತಿದ್ದು, ಈ ವ್ಯವಸ್ಥೆಯಲ್ಲಿ ಗ್ರಾಹಕರು ಬಿಲ್ ಪಾವತಿಯನ್ನು ಯಾವುದೇ ಯು.ಪಿ.ಐ. ಪಾವತಿ ಆ್ಯಪ್ ಮುಖೇನ ವಿದ್ಯುತ್ ಬಿಲ್ನಲ್ಲಿ ಮುದ್ರಿಸಲಾದ ಕ್ಯೂ.ಆರ್ ಕೋಡ್ ಅನ್ನು ಸ್ಕಾö್ಯನ್ ಮಾಡಿ ಹಣ ಪಾವತಿಸಬಹುದು ಹಾಗೂ ತಕ್ಷಣ ತಮ್ಮ ಮೊಬೈಲ್ ಫೋನಿನಲ್ಲಿ ಎಲೆಕ್ಟಾçನಿಕ್ ರಸೀದಿಗಳನ್ನು ಪಡೆಯಬಹುದು. ಅಧಿಕ ಮೊತ್ತ ಪಾವತಿ ಮಾಡುವ ಗ್ರಾಹಕರಿಗೆ ಅಥವಾ ಹೆಚ್ಚು ಸ್ಥಾವರಗಳನ್ನು ಬಳಸುತ್ತಿರುವ ಗ್ರಾಹಕರಿಗೆ ಅನುಕೂಲವಾಗುವಂತೆ ವರ್ಚುವಲ್ ಖಾತೆ ಸಂಖ್ಯೆ (ಗಿಂಓ) ಬಳಸಿಕೊಂಡು ಖಖಿಉS/ಓಇಈಖಿ ಪಾವತಿ ಮಾಡುವ ಸೌಲಭ್ಯವನ್ನೂ ಪರಿಚಯಿಸಲಾಗುತ್ತಿದೆ ಎಂದು ಸೆಸ್ಕ್ ಪ್ರಕಟಣೆ ತಿಳಿಸಿದೆ.