ಕೂಡಿಗೆ, ಡಿ. ೩೧: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗ್ಗಡಹಳ್ಳಿಯಿಂದ ಸೀಗೆಹೊಸೂರು, ಮದಲಾಪುರ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ತೀರಾ ಹದಗೆಟ್ಟಿದೆ. ಕಳೆದ ಮೂರು ವರ್ಷಗಳಿಂದ ಈ ರಸ್ತೆ ಹದಗೆಟ್ಟು ನಿಂತಿದ್ದು, ಸಂಪೂರ್ಣ ಡಾಂಬರು ಕಿತ್ತುಹೋಗಿರುವ ರಸ್ತೆಯಲ್ಲಿ ದ್ವಿಚಕ್ರ ವಾಹನಗಳು ಸಹ ಚಾಲಿಸಲು ಸಾಧ್ಯವಾಗತ್ತಿಲ್ಲ. ಅಲ್ಲದೆ ಯಾವುದೇ ವಾಹನವನ್ನು ಸಂಚರಿಸುವುದು ಬಲು ಪ್ರಯಾಸವಾಗಿದ್ದು, ಅತಿ ಶೀಘ್ರದಲ್ಲೇ ರಸ್ತೆ ದುರಸ್ತಿಗೆ ಸಂಬAಧಿಸಿದವರು ಕ್ರಮ ಕೈಗೊಳ್ಳಬೇಕೆಂದು ಈ ಭಾಗದ ಗ್ರಾಮಸ್ಥರು, ಶಾಲಾ ವಿದ್ಯಾರ್ಥಿಗಳ ಪೋಷಕರು ಆಗ್ರಹಿಸಿದ್ದಾರೆ.