ನಾಪೋಕ್ಲು, ಡಿ. ೩೧: ರಸ್ತೆ ಕಾಮಗಾರಿಯಲ್ಲಿ ಲೋಪ ಆರೋಪದ ದೂರಿನ ಹಿನ್ನೆಲೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಹಲವು ವರ್ಷಗಳಿಂದ ಗ್ರಾಮಸ್ಥರ ಬೇಡಿಕೆಗೆ ಸ್ಪಂದನ ಸಿಕ್ಕದೆ ನೆನೆಗುದಿಗೆ ಬಿದ್ದಿದ್ದ ಎಮ್ಮೆಮಾಡು ರಸ್ತೆಯ ಕಾಮಗಾರಿ ಇದೀಗ ಪ್ರಾರಂಭಗೊAಡಿದೆ. ಆದರೆ, ಕಾಮಗಾರಿಯಲ್ಲಿ ಕೆಲವು ಲೋಪದೋಷಗಳಿಂದ ಗ್ರಾಮಸ್ಥರು ಅಸಮಾಧಾನಗೊಂಡಿದ್ದರು.

ಪಿ.ಎA.ಜಿಎಸ್.ವೈ. ಯೋಜನೆಯಲ್ಲಿ ನಾಪೋಕ್ಲು ಮುಖ್ಯ ರಸ್ತೆಯ ಶಾಲಿಮಾರ್ ಮಿಲ್ ಬಳಿಯಿಂದ ಕೂರುಳಿವರೆಗಿನ ರೂ. ೨.೮೫ ಕೋಟಿ ವೆಚ್ಚದಲ್ಲಿ ೩ ಕಿಲೋಮೀಟರ್ ರಸ್ತೆಯನ್ನು ಇಂಜಿನಿಯರ್ ಪರಿಶೀಲಿಸಿದರು. ಈ ಸಂದರ್ಭ ಪ್ರಮುಖರಾದ ಶಿವಾಚಾಳಿಯಂಡ ಅಂಬಿ ಕಾರ್ಯಪ್ಪ ಮಾತನಾಡಿ, ರೂ. ೨.೮೫ ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣವಾಗುತ್ತಿದೆ. ನಿರ್ಮಾಣ ಹಂತದಲ್ಲಿ ಕೆಲವು ತಾಂತ್ರಿಕ ದೋಷಗಳಿದ್ದು ಅದನ್ನು ಸರಿಪಡಿಸುವ ಭರವಸೆಯನ್ನು ಇಂಜಿನಿಯರ್ ನೀಡಿದ್ದಾರೆ. ಸದ್ಯದಲ್ಲಿಯೇ ಉತ್ತಮ ರಸ್ತೆ ನಿರ್ಮಾಣಗೊಳ್ಳಲಿದೆ ಎಂದರು. ಈ ಸಂದರ್ಭ ಇಂಜಿನಿಯರ್ ಪ್ರಭು ತಿಮ್ಮಯ್ಯ, ಕಿರಿಯ ಅಭಿಯಂತರರು ಪೂವಯ್ಯ, ಗುತ್ತಿಗೆದಾರ ಬಾಬು, ಗ್ರಾಮಸ್ಥರಾದ ಅಮ್ಮಂಡ ಮನು ಮಹೇಶ್, ಬಿ.ಎಂ. ಪ್ರತಿಪ, ಕಂಗAಡ ಜಾಲಿ ಪೂವಪ್ಪ, ಶಿವಾಚಾಳಿಯಂಡ ಪ್ರಸಾದ ತಿಮ್ಮಯ್ಯ, ಬೋಪಂಡ ಕವನ ಕಾಳಪ್ಪ, ಬಿ. ದಿನೇಶ್ ಮತ್ತಿತರರು ಇದ್ದರು.