ಸೋಮವಾರಪೇಟೆ, ಜ. ೧: ಕೊಡ್ಲಿಪೇಟೆಯ ಕಡೆಪೇಟೆ ನಿವಾಸಿ ಕಾಫಿ ವ್ಯಾಪಾರಿ ಇಕ್ಬಾಲ್ ಅಹಮದ್ ಅವರ ಪುತ್ರ ಜೈನುಲ್ ಅಭಿದೀನ್ (೨೩) ಮೈಸೂರಿನಲ್ಲಿ ಸಂಭವಿಸಿದ ಬೈಕ್ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ.

ಮೈಸೂರಿನ ವಿದ್ಯಾವರ್ದಕ ಕಾಲೇಜಿನಲ್ಲಿ ಎಂಬಿಎ ಅಂತಿಮ ಪದವಿ ವ್ಯಾಸಂಗ ಮಾಡುತ್ತಿದ್ದು ಶನಿವಾರ ರಾತ್ರಿ ೯.೩೦ರ ಸಮಯದಲ್ಲಿ ರೈಲ್ವೇಸ್ಟೇಷನ್‌ಗೆ ಹೊಂಡಾ ಆ್ಯಕ್ಟಿವಾ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ರಸ್ತೆಯಲ್ಲಿ ಸ್ಕಿಡ್ ಆಗಿ ಸಂಭವಿಸಿದ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ. ಈತನನ್ನು ಸಮೀಪದಲ್ಲಿರುವ ಬೃಂದಾವನ ಅಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಮಣಿಪಾಲ್ ಅಸ್ಪತ್ರೆಗೆ ದಾಖಲಿಸಲಾಗಿತ್ತು. ತಲೆಗೆ ಪೆಟ್ಟು ಬಿದ್ದ ಕಾರಣ ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಯುವಕ ಚಿಕಿತ್ಸೆ ಫÀಲಿಸದೆ ಭಾನುವಾರ ಮಧ್ಯಾಹ್ನ ಕೊನೆಯುಸಿರೆಳೆದಿದ್ದಾನೆ. ವಿ.ವಿ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದ ವರ್ಷ ಕೊರೊನಾ ಸಂದರ್ಭದಲ್ಲಿ ಈತನ ತಾಯಿ ಮೃತರಾಗಿದ್ದರು.