ಮಡಿಕೇರಿ. ಡಿ. ೩೧: ಮೇಕೇರಿಯ ಗೌರಿಶಂಕರ ದೇವಾಲಯದ ಪುನರ್ ಪ್ರತಿಷ್ಠ ಅಷ್ಟಬಂಧ ಬ್ರಹ್ಮ ಕಲಶೋತ್ಸವದ ಪ್ರಯಕ್ತ ನಿನ್ನೆ ದಿನ ಸ್ವಸ್ತಿ ಪುಣ್ಯಾಹವಾಚನ, ಅಂಕುರಪೂಜೆ, ಶ್ರೀ ಗಣಹೋಮ, ಪ್ರತಿಷ್ಠಾ ಹೋಮ ಶ್ರೀ ಗೌರಿಶಂಕರನ ಪುನರ್ಪ್ರತಿಷ್ಠೆ ಪರಿವಾರ ದೇವತೆಗಳಾದ ಶ್ರೀ ಗಣಪತಿ, ಶ್ರೀ ಸುಬ್ರಹ್ಮಣ್ಯ, ನವಗ್ರಹ ಪ್ರತಿಷ್ಠೆ, ಪ್ರತಿಷ್ಠಾ ಕಲಶಾಭಿಷೇಕ, ಅಷ್ಠಬಂಧ ಲೇಪನ, ಮಹಾಪೂಜೆ, ಆಶ್ಲೇಷ ಬಲಿ, ನಾಗಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.ಸಂಜೆ ಸುದರ್ಶನ ಹೋಮ, ಅಂಕುರ ಪೂಜೆ, ಶಾಂತಿ ಪ್ರಾಯಶ್ಚಿತ ಹೋಮ, ಸಾಮಾನ್ಯ ಪ್ರಾಯಶ್ಚಿತ ಹೋಮ, ಪ್ರಸಾದ ವಿತರಣೆ, ಅನ್ನಸಂತರ್ಪಣೆಯೊAದಿಗೆ ಹಾಕತ್ತೂರು ತೊಂಭತ್ತುಮನೆಯ ಶ್ರೀ ವಿನಾಯಕ ಸೇವಾ ಸಮಿತಿ, ಭಜನಾ ತಂಡದಿAದ ಭಕ್ತಿ ಸಂಗೀತ ಶಿವಾರ್ಚನೆ ಕಾರ್ಯಕ್ರಮ ನಡೆಯಿತು