ಮಡಿಕೇರಿ, ಡಿ. ೩೧ : ರಸ್ತೆ ಬದಿ ನಿಲ್ಲಿಸಿದ್ದ ಆಟೋ ರಿಕ್ಷಾವೊಂದಕ್ಕೆ ಬೆಂಕಿ ಹಚ್ಚಿದ ಘಟನೆ ಸಂಬAಧ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ತ್ಯಾಗರಾಜ ಕಾಲೋನಿಯ ಹ್ಯಾರೀಸ್ ಬಂಧಿತ ಆರೋಪಿ. ಹಳೇ ವೈಷಮ್ಯವೇ ಕೃತ್ಯಕ್ಕೆ ಕಾರಣ ಎಂದು ತಿಳಿದು ಬಂದಿದೆ.

ನಗರದ ತ್ಯಾಗರಾಜ ಕಾಲೋನಿಯ ಅಬುತಾಹೀರ್ ಎಂಬವರ ಆಟೋಕ್ಕೆ ೨ ದಿನದ ಹಿಂದೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರು. ಇದರಿಂದ ಆಟೋ ಸಂಪೂರ್ಣ ಸುಟ್ಟು ಕರಕಲಾಗಿತ್ತು. ಈ ಸಂಬAಧ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ. ಆಟೋ ಚಾಲಕ ಅಬುತಾಹೀರ್ ಹಾಗೂ ಆರೋಪಿ ಹ್ಯಾರೀಸ್ ನಡುವೆ ಹಲವು ವರ್ಷಗಳಿಂದ ವೈಮನಸ್ಸು ಇತ್ತು. ಇದಕ್ಕಾಗಿ ಈ ಕೃತ್ಯ ನಡೆಸಿರುವುದು ವಿಚಾರಣೆಯಿಂದ ಗೊತ್ತಾಗಿದೆ.