ಮಡಿಕೇರಿ, ಡಿ. ೩೦: ಕರ್ನಾಟಕ ಸ್ಪೋರ್ಟ್ಸ್ ಡ್ಯಾನ್ಸ್ ಅಸೋಸಿಯೇಷನ್ ವತಿಯಿಂದ ಮೈಸೂರಿನ ಎಂ.ಎA.ಸಿ. ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ರಾಜ್ಯ ಸ್ಪೋರ್ಟ್ಸ್ ಡ್ಯಾನ್ಸ್ ಚಾಂಪಿಯನ್ ಶಿಪ್‌ನಲ್ಲಿ ಸಿಗ್ನೇಚರ್ ಡ್ಯಾನ್ಸ್ ಕಂಪನಿ ಸಮಗ್ರ ಚಾಂಪಿಯನ್ ಶಿಪ್ ಪಟ್ಟವನ್ನು ತನ್ನದಾಗಿಸಿಕೊಂಡಿದೆ.

೧೪ ಚಿನ್ನದ ಪದಕ, ೩ ಬೆಳ್ಳಿ ಪದಕ, ಒಂದು ಕಂಚಿನ ಪದಕ ಸೇರಿದಂತೆ ಒಟ್ಟಾರೆ ೧೮ ಪದಕಗಳನ್ನು ಪಡೆಯಿತು. ಹರ್ಷಿತ್ ಕುಮಾರ್ ಮೂರು ಚಿನ್ನದ ಪದಕ ಗಳಿಸಿದರೆ, ಸನಿಹ, ಸಿಂಚನ, ನಿಶ್ಚಲ್, ಮಾನ್ಯ, ಚರಿತ್, ಧೀರಜ್ ತಲಾ ಎರಡು ಚಿನ್ನದ ಪದಕ ಪಡೆದರು.

ಒಟ್ಟು ೫೧ ಮಂದಿಯ ಸಿಗ್ನೇಚರ್ ಡ್ಯಾನ್ಸ್ ಕಂಪನಿ ತಂಡ ಪ್ರಥಮ ಸ್ಥಾನ ಪಡೆಯಿತು. ಪದಕ ವಿಜೇತರು ಫೆಬ್ರವರಿ ತಿಂಗಳಲ್ಲಿ ತಮಿಳುನಾಡಿನ ಚೆನ್ನೆöÊನಲ್ಲಿ ನಡೆಯಲಿರುವ ರಾಷ್ಟಿçÃಯ ಸ್ಪೋರ್ಟ್ಸ್ ಡ್ಯಾನ್ಸ್ ಚಾಂಪಿಯನ್ ಶಿಪ್‌ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾರೆ.

ತಂಡಕ್ಕೆ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವಿಜೇತ ರಾಹುಲ್ ರಾವ್ ಹಾಗೂ ಸಹ ತರಬೇತುದಾರ ಪೃಥ್ವಿ ನಾಯಕ್ ತರಬೇತಿ ನೀಡಿದ್ದಾರೆ.