ಶನಿವಾರಸಂತೆ, ಡಿ. ೩೦: ಪಟ್ಟಣಕ್ಕೆ ನಡುರಾತ್ರಿ ೩ ಕಾಡಾನೆಗಳು ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಿಂದ ಚಂಗಡಹಳ್ಳಿ ರಸ್ತೆಯಲ್ಲಿ ಸಂಚರಿಸುತ್ತಿರುವ ದೃಶ್ಯ ಸಿ.ಸಿ. ಕ್ಯಾಮರಾದಲ್ಲಿ ಸೆರೆಯಾಗಿದೆ. ತಾ. ೨೮ ರ ತಡರಾತ್ರಿ ೧.೩೦ಕ್ಕೆ ಬೀದಿ ನಾಯಿಗಳು ಬೊಗಳುವಿಕೆ ಕೇಳಿ ಕಾಫಿ ವರ್ತಕ ಚಂದ್ರಶೇಖರ್ ಮನೆಯಿಂದ ಹೊರಬಂದು ನೋಡಿದಾಗ ತ್ಯಾಗರಾಜ ಕಾಲೋನಿಗೆ ತೆರಳುವ ಜಂಕ್ಷನ್‌ನಲ್ಲಿ ಆನೆಗಳು ನಿಂತಿರುವುದು ಗೋಚರಿಸಿದೆ. ನಾಗರಿಕರು ಆನೆಗಳ ಪಟ್ಟಣ ಸಂಚಾರದ ಬಗ್ಗೆ ಭಯಭೀತರಾಗಿದ್ದಾರೆ.

ಅರಣ್ಯ ಇಲಾಖೆ ನಾಡಿಗೆ ಲಗ್ಗೆ ಇಡುತ್ತಿರುವ ಆನೆಗಳ ಹತೋಟಿಗೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.