ಮಡಿಕೇರಿ, ಡಿ. ೩೦: ಕೊಯ್ಲಿಗೆ ಬಂದAತಹ ಭತ್ತದ ಫಸಲಿನ ಗದ್ದೆಗೆ ಕಾಡಾನೆ ನಿರಂತರ ದಾಳಿ ನಡೆಸಿ, ಅಪಾರ ಪ್ರಮಾಣದ ಫಸಲನ್ನು ತಿಂದು, ತುಳಿದು ನಾಶಪಡಿಸಿದೆ.
ಅಮ್ಮತ್ತಿ - ಕಾರ್ಮಾಡು ಗ್ರಾಮದ ಪೊನ್ನಜ್ಜೀರ ಕಿಶು ಭರತ್ ಅವರ ೨.೫೦ ಎಕ್ರೆ ಗದ್ದೆಯಲ್ಲಿ ಬೆಳೆದಿರುವ ಭತ್ತದ ಬೆಳೆಯನ್ನು ಕಳೆದ ಕೆಲವು ದಿವಸಗಳಿಂದ ನಿರಂತರವಾಗಿ ಕಾಡಾನೆ ರಾತ್ರಿಯ ವೇಳೆಯಲ್ಲಿ ದಾಳಿ ನಡೆಸಿ ತಿಂದು ನಾಶಪಡಿಸಿವೆ. ಕಾಡಾನೆ ದಾಳಿಯ ಬಗ್ಗೆ ವೀರಾಜಪೇಟೆ ಅರಣ್ಯ ವಲಯ ಇಲಾಖೆಗೆ ದೂರು ನೀಡಲಾಗಿದ್ದು, ಹೀಗಾಗಲೇ ಸಂಬAಧಪಟ್ಟ ಇಲಾಖಾ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಪರಿಹಾರ ನೀಡುವ ಭರವಸೆ ನೀಡಿದರಲ್ಲದೆ, ಸದ್ಯದಲ್ಲಿಯೇ ಕಾಡಾನೆಯನ್ನು ಹಿಡಿಯಲಾಗುವುದೆಂದು ಮಾಹಿತಿ ನೀಡಿದ್ದಾರೆ.