ಮಡಿಕೇರಿ, ಡಿ. ೩೦: ಕೊಡಗು ಜಿಲ್ಲಾ ಅಂಭಾಭವಾನಿ ಯುವಕ, ಯುವತಿ ಕ್ರೀಡಾ ಮತ್ತು ಮನೋರಂಜನಾ ಸಂಘ ತಾಳತ್ತಮನೆ ವತಿಯಿಂದ ಜ. ೧ ರಂದು ೮ನೇ ವಾರ್ಷಿಕ ಗ್ರಾಮೀಣ ಕ್ರೀಡಾಕೂಟ ನಡೆಯಲಿದೆ
ಜಿಲ್ಲಾಡÀಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೊಡಗು ಜಿಲ್ಲಾ ಯುವ ಒಕ್ಕೂಟ, ಕೊಡಗು ಜಿಲ್ಲಾ ಮರಾಠ, ಮರಾಟಿ ಸಮಾಜ ಸೇವಾ ಸಂಘದ ಸಂಯುಕ್ತಾಶ್ರಯದಲ್ಲಿ ಬೆಳಿಗ್ಗೆ ೯ ಗಂಟೆಗೆ ಮಡಿಕೇರಿಯ ಫೀ.ಮಾ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ.
ಪುರುಷರಿಗೆ ಕಬಡ್ಡಿ, ವಾಲಿಬಾಲ್, ಮಹಿಳೆಯರಿಗೆ ಥ್ರೋಬಾಲ್, ಪುರುಷರು ಹಾಗೂ ಮಹಿಳೆಯರಿಗೆ ಹಗ್ಗಜಗ್ಗಾಟ, ಬಾರದಗುಂಡು ಎಸೆತ, ೧೦೦ ಮೀ. ಓಟ, ಬಾಂಬ್ ಇನ್ ದ ಸಿಟಿ, ಗೋಣಿಚೀಲದ ಓಟ, ಬಾಟಲಿಗೆ ನೀರು ತುಂಬಿಸುವ ಸ್ಪರ್ಧೆ, ಮಹಿಳೆಯರಿಗೆ ಹಾಗೂ ಹೆಣ್ಣುಮಕ್ಕಳಿಗೆ ನಿಂಬೆ ಚಮಚ, ಸೂಜಿ ನೂಲು ಓಟ, ೫ ರಿಂದ ೭ ವರ್ಷದ ಬಾಲಕ, ಬಾಲಕಿಯರಿಗೆ ೫೦ ಮೀಟರ್ ಓಟ, ೮ ರಿಂದ ೧೦ ವರ್ಷದ ಬಾಲಕ, ಬಾಲಕಿಯರಿಗೆ ೫೦ ಮೀ. ಓಟ, ೧೧ ರಿಂದ ೧೫ ವರ್ಷದ ಬಾಲಕ, ಬಾಲಕಿಯರಿಗೆ ೧೦೦ ಮೀ. ಓಟದ ಸ್ಪರ್ಧೆ ನಡೆಯಲಿದೆ.
೫೦ ವರ್ಷ ಮೇಲ್ಪಟ್ಟ ಪುರುಷ ಹಾಗೂ ಮಹಿಳೆಯರಿಗೆ ೧೦೦ ಮೀ. ಓಟ, ೧೬ ರಿಂದ ೨೦ ವರ್ಷದ ಬಾಲಕ, ಬಾಲಕಿಯರಿಗೆ ೨೦೦ ಮೀ. ಓಟ, ೨೧ ವರ್ಷ ಮೇಲ್ಪಟ್ಟ ಯುವತಿಯರಿಗೆ ೨೦೦ ಮೀ ಓಟ, ಯುವಕರಿಗೆ ೪೦೦ ಮೀ ಓಟದ ಸ್ಪರ್ಧೆ ನಡೆಯಲಿದ್ದು, ೮ ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಕಪ್ಪೆಜಿಗಿತ, ೫೦ ಮೀ. ಓಟ, ೫ ವರ್ಷ ಕೆಳಗಿನ ಮಕ್ಕಳಿಗೆ ಕಾಳು ಹೆಕ್ಕುವುದು, ಪುರುಷರಿಗೆ, ಮಹಿಳೆಯರಿಗೆ, ಮಕ್ಕಳಿಗೆ ಹಾಗೂ ಹಿರಿಯ ನಾಗರೀಕರಿಗೆ ಬಕೆಟ್‌ಗೆ ಬಾಲ್ ಹಾಕುವ ಸ್ಪರ್ಧೆ ನಡೆಯಲಿದೆ.
ಸಂಘದ ಸದಸ್ಯತ್ವ ಪಡೆದವರಿಗೆ ಮಾತ್ರ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದ್ದು, ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವವರು ಸ್ವಜಾತಿ ಎಂಬುದನ್ನು ದೃಢಪಡಿಸಬೇಕು. ಕ್ರೀಡಾಕೂಟಕ್ಕೆ ಕೊಡಗು ಜಿಲ್ಲಾ ಮರಾಠ, ಮರಾಟಿ ಸಮಾಜ ಸೇವಾ ಸಂಘದ ಕೋಶಾಧಿಕಾರಿ ಎಂ.ಎಸ್. ಕಾಂತಿ ಚಾಲನೆ ನೀಡಲಿದ್ದಾರೆ.
ಸಂಜೆ ೪ ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಕ್ರೀಡಾಕೂಟದ ವಿಜೇತರಿಗೆ ಬಹುಮಾನ ವಿತರಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ. ಎಂದು ಸಂಘದ ಅಧ್ಯಕ್ಷರು ಹಾಗೂ ಕಾರ್ಯಕಾರಿ ಸಮಿತಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ ಎಂ.ಆರ್. ಮೋಹನ್-೭೦೯೦೩೨೭೬೮೪, ಎಂ.ಎಸ್.ಯೋಗೇAದ್ರ-೯೪೪೯೮ ೫೫೩೪೫, ಎಂ.ಡಿ.ಗುರುಪ್ರಸಾದ್ ೯೯೪೫೨ ೪೦೧೨೧, ಸಂತೋಷ್-೯೬೮೬೩೧೭೦೬೨ ಸಂಪರ್ಕಿಸಬಹುದಾಗಿದೆ.