ವೀರಾಜಪೇಟೆ, ಡಿ. ೩೦ : ಜಾತಿ ಮತಗಳಲ್ಲಿ ಒಡಕುಗಳು ಬಂದರೂ ಸರ್ವರು ಸಮಾನರು ಎಂದು ಸಾರಿದ ಶ್ರೀ ನಾರಾಯಣ ಗುರುಗಳ ತತ್ವ ಆದರ್ಶಗಳನ್ನು ಶಾಖೆಗಳು ಪಾಲನೆ ಮಾಡಲು ಮುಂದಾಗುವAತೆ ಶ್ರೀ ನಾರಾಯಣ ಗುರು ಪರಿಪಾಲನ ಯೋಗಂ ಕೊಡಗು ಜಿಲ್ಲಾ ಅಧ್ಯಕ್ಷ ವಿ.ಕೆ. ಲೋಕೇಶ್ ಕರೆ ನೀಡಿದರು.

ಶ್ರೀ ನಾರಾಯಣ ಗುರು ಪರಿಪಾಲನ ಯೋಗಂ ವೀರಾಜಪೇಟೆ ಶಾಖೆಯ ವಾರ್ಷಿಕ ಮಾಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದ ವಿ.ಕೆ.ಲೋಕೇಶ್ ಸಮಾಜದಲ್ಲಿ ಸರ್ವರು ಸಮಾನರು. ಸಮಾಜದ ಕಟ್ಟ ಕಡೆಯ ವ್ಯಕ್ತಿ, ಶೋಷಿತ ವರ್ಗದ ವ್ಯಕ್ತಿಗಳಿಗೆ ನ್ಯಾಯ ಒದಗಿಸಿಕೊಡಲು ಶಾಖೆಗಳು ಬದ್ಧರಾಗಿರಬೇಕು. ಶ್ರೀ ನಾರಾಯಣ ಗುರುಗಳ ತತ್ವ ಚಿಂತನೆಗಳನ್ನು ಸಮಾಜ ಪ್ರತಿಯೊಬ್ಬರೂ ಪಾಲನೆ ಮಾಡುವಲ್ಲಿ ಶ್ರಮ ವಹಿಸಬೇಕು. ಶಾಖೆಗಳು ಸಾಮಾಜಿಕ ಕಳಕಳಿಯೊಂದಿಗೆ ಸಮಾಜಮುಖಿ ಕಾರ್ಯಕ್ರಮಗಳನ್ನು ರೂಪಿಸುವಂತಾಗಬೇಕು ಎಂದು ಹೇಳಿದರು.

ವೀರಾಜಪೇಟೆ ಶಾಖೆಯ ಅಧ್ಯಕ್ಷ ಟಿ.ಎ. ನಾರಾಯಣ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೀರಾಜಪೇಟೆ ಶಾಖೆಯ ಉಪಾಧ್ಯಕ್ಷ ಟಿ.ಆರ್. ಗಣೇಶ್ ಅವರು ಶಾಖೆಯ ವತಿಯಿಂದ ಆಚರಿಸಲಾದ ಕಾರ್ಯಕ್ರಮಗಳು, ವಾರ್ಷಿಕ ಖರ್ಚು ವೆಚ್ಚಗಳು ವಾರ್ಷಿಕ ವರದಿಯಲ್ಲಿ ಉಲ್ಲೇಖಿಸಿದರು. ಕಾರ್ಯಕ್ರಮ ಉದ್ದೇಶಿಸಿ ಜಿಲ್ಲಾ ಕಾರ್ಯದÀರ್ಶಿ ಪ್ರೇಮ ಆನಂದ್ ಮಾತನಾಡಿದರು.

ವೇದಿಕೆಯಲ್ಲಿ ಎಸ್.ಎನ್.ಡಿ.ಪಿ. ಜಿಲ್ಲಾ ಕಾರ್ಯದರ್ಶಿ ಪ್ರೇಮ ಆನಂದ್, ಉಪಾಧ್ಯಕ್ಷ ರಾಜನ್, ಜಿಲ್ಲಾ ಸಮಿತಿ ಸದಸ್ಯ ದಾಮೋದರ್, ವೀರಾಜಪೇಟೆ ಶಾಖೆಯ ಕಾರ್ಯದರ್ಶಿ ಪದ್ಮನಾಭ ಅಂಬಟ್ಟಿ, ಬಿಲ್ಲವ ಸಮಾಜದ ಅಧ್ಯಕ್ಷ ಬಿ.ಎಂ. ಗಣೇಶ್ , ಮುತ್ತಪ್ಪ ದೇವಾಲಯದ ಅಧ್ಯಕ್ಷ ಟಿ.ಕೆ. ರಾಜನ್ ಉಪಸ್ಥಿತರಿದ್ದರು.

ಎಸ್.ಎನ್.ಡಿ.ಪಿ. ವೀರಾಜಪೇಟೆ ಶಾಖೆಯ ಆಡಳಿತ ಮಂಡಳಿಯು ಪುನರ್ ಆಯ್ಕೆಗೊಂಡು ಅಧ್ಯಕ್ಷರಾಗಿ ಟಿ.ಎ.ನಾರಾಯಣ, ಉಪಾಧ್ಯಕ್ಷರಾಗಿ ಟಿ.ಆರ್. ಗಣೇಶ್, ಕಾರ್ಯದÀರ್ಶಿ ಪದ್ಮನಾಭ ಖಜಾಂಚಿಗಳಾಗಿ ಮತ್ತು ನಿರ್ದೇಶಕರುಗಳಾಗಿ ಕೆ.ವಿ. ಸಂತೋಷ್, ಕೆ.ಬಿ.ಹರೀಶ್, ಟಿ.ಬಿ ಹರೀಶ್, ಜನಾರ್ಧನ, ಕೆ.ಕೆ. ಅನಿಲ್, ಚಂದ್ರ, ಕೆ.ಎನ್. ಉಪೇಂದ್ರ, ನಾರಾಯಣ, ಪ್ರಭ, ಸುರೇಶ್, ಸುಬ್ರಮಣಿ ಹಾಗೂ ಸುರೇಶ್ ಹೊಸಕೋಟೆ ಅವರುಗಳು ಮೂರು ವರ್ಷಗಳ ಅವಧಿಗೆ ಆಡಳಿತ ಮಂಡಳಿಯ ಸದಸ್ಯರಾಗಿ ಆಯ್ಕೆಗೊಂಡರು.

-ಕಿಶೋರ್ ಕುಮಾರ್ ಶೆಟ್ಟಿ