ಮಡಿಕೇರಿ, ಡಿ. ೩೦: ಮೇಕೇರಿಯ ಶ್ರೀ ಗೌರಿಶಂಕರ ದೇವಾಲಯದ ಪುನರ್ ಪ್ರತಿಷ್ಠೆ ಮತ್ತು ಅಷ್ಟಬಂಧ ಬ್ರಹ್ಮಕಲಶೋತ್ಸವದ ಪ್ರಯುಕ್ತ ನಿನ್ನೆ ದಿನ ಪುಣ್ಯಾಹವಾಚನ, ದೇವನಾಂದಿ, ಶ್ರೀ ಗಣಪತಿ ಹೋಮ, ಬ್ರಹ್ಮಕೂರ್ಚ ಹೋಮ, ಅಂಕುರ ಪೂಜೆ, ನವಗ್ರಹ ಹೋಮ, ನವಗ್ರಹರಿಗೆ ಅನುಜ್ಞಾಕಲಶ, ಸಂಜೀವಿನಿ ಮಹಾ ಮೃತ್ಯುಂಜಯ ಹೋಮ, ಬಿಂಬ ಶುದ್ಧಿ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.
ಸಂಜೆ ದುರ್ಗಾ ದೀಪ ನಮಸ್ಕಾರ ಪೂಜೆ, ಅಘೋರ ಹೋಮ, ಪ್ರಾಯಶ್ಚಿತ ಹೋಮ, ದೇವರಿಗೆ ಅದಿವಾಸ ಹೋಮ, ಮಹಾ ಪೂಜೆ, ದೇವರಿಗೆ ಶಯನ, ಅಂಕುರ ಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆಯೊAದಿಗೆ ಮಡಿಕೇರಿಯ ಶ್ರೀ ರಾಮಾಂಜನೇಯ ಭಜನಾ ಮಂಡಳಿ ವತಿಯಿಂದ ಭಕ್ತಿ ಸಂಗೀತ ಸುಧೆ ಕಾರ್ಯಕ್ರಮ ನಡೆಯಿತು.