ಸೋಮವಾರಪೇಟೆ, ಡಿ. ೩೦: ಕೆಲವೊಂದು ಬೇಡಿಕೆಗಳನ್ನು ಮುಂದಿಟ್ಟು ಕ್ರಷರ್ ಮಾಲೀಕರುಗಳು ತಮ್ಮ ಘಟಕಗಳನ್ನು ಸ್ಥಗಿತಗೊಳಿಸಿ ಮುಷ್ಕರ ನಡೆಸುತ್ತಿರುವ ಹಿನ್ನೆಲೆ ಗುತ್ತಿಗೆದಾರರಿಗೆ ಸಂಕಷ್ಟ ಎದುರಾಗಿದ್ದು, ತಕ್ಷಣ ಸಮಸ್ಯೆ ಬಗೆಹರಿಸಲು ಸರ್ಕಾರ ಮುಂದಾಗಬೇಕೆAದು ತಾಲೂಕು ಗುತ್ತಿಗೆದಾರರ ಸಂಘ ಆಗ್ರಹಿಸಿದೆ.
ಪತ್ರಿಕಾಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಸಂಘದ ಅಧ್ಯಕ್ಷ ವಿ.ಎ. ಲಾರೆನ್ಸ್ ಅವರು, ಕಳೆದ ಕೆಲ ದಿನಗಳಿಂದ ಕಲ್ಲುಕೋರೆ ಮಾಲೀಕರು, ಕ್ರಷರ್‌ನವರು ತಮ್ಮ ಘಟಕಗಳನ್ನು ಸ್ಥಗಿತಗೊಳಿಸಿ ಮುಷ್ಕರದಲ್ಲಿ ಭಾಗಿಯಾಗಿರುವುದರಿಂದ ಅವಶ್ಯಕ ಸಾಮಗ್ರಿಗಳು ದೊರಕದೆ ಕಾಮಗಾರಿಗಳು ಸ್ಥಗಿತಗೊಂಡಿವೆ. ಇದರಿಂದಾಗಿ ಗುತ್ತಿಗೆದಾರರು ಸಮಸ್ಯೆಗೆ ಸಿಲುಕುವಂತಾಗಿದೆ ಎಂದರು.
ಘಟಕಗಳು ಸ್ಥಗಿತ ಗೊಂಡಿರುವುದರಿAದ ಕ್ವಾರೆ ಕಾರ್ಮಿಕರುಗಳ ಜೀವನವೂ ಸಂಕಷ್ಟಕ್ಕೆ ಸಿಲುಕಿದೆ. ಚಾಲಕರು ಸಮಸ್ಯೆಯಲ್ಲಿದ್ದಾರೆ. ಇತ್ತ ಎಂ.ಸ್ಯಾAಡ್, ಕಲ್ಲು ಸೇರಿದಂತೆ ಇತರ ಸಾಮಾಗ್ರಿ ಲಭಿಸದೇ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಗುತ್ತಿಗೆದಾರರು ಹಾಗೂ ಕಾರ್ಮಿಕರು ಸಮಸ್ಯೆಯಲ್ಲಿದ್ದಾರೆ ಎಂದು ಪರಿಸ್ಥಿತಿಯನ್ನು ವಿವರಿಸಿದರು.
ಕೊಡಗಿನಲ್ಲಿ ವರ್ಷದಲ್ಲಿ ಕೇವಲ ೩ ರಿಂದ ೪ ತಿಂಗಳು ಮಾತ್ರ ಕಾಮಗಾರಿಗಳನ್ನು ನಿರ್ವಹಿಸಲು ಸಾಧ್ಯ. ಅಕಾಲಿಕ ಮಳೆಯಿಂದಾಗಿ ಈ ವರ್ಷವೂ ನಿರೀಕ್ಷಿತ ಕೆಲಸ ಆಗಿಲ್ಲ. ಕಳೆದ ಒಂದು ತಿಂಗಳಿನಿAದ ಕೆಲಸ ಕಾರ್ಯಗಳು ಆರಂಭಗೊAಡಿದ್ದು, ಕ್ವಾರೆ ಮಾಲೀಕರು ದಿಢೀರ್ ಮುಷ್ಕರ ನಡೆಸುತ್ತಿರುವುದರಿಂದ ಹಲವಷ್ಟು ಕೆಲಸಗಳು ಅರ್ಧಕ್ಕೆ ಸ್ಥಗಿತಗೊಂಡಿದೆ. ಇದರ ದುಷ್ಪರಿಣಾಮ ಗುತ್ತಿಗೆದಾರರ ಮೇಲೆ ಬೀಳುತ್ತಿದೆ ಎಂದು ಅಳಲು ತೋಡಿಕೊಂಡರು.
ಸಾಮಗ್ರಿಗಳು ಲಭಿಸದೇ ಇರುವುದರಿಂದ ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಿಲ್ಲ. ಈ ಹಿನ್ನೆಲೆ ಟೆಂಡರ್ ಸಂದರ್ಭ ನೀಡಿರುವ ಸಮಯಾವಕಾಶವನ್ನು ವಿಸ್ತರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಕ್ವಾರೆ ಮಾಲೀಕರು ಮತ್ತು ಸರ್ಕಾರದ ತಿಕ್ಕಾಟದ ನಡುವೆ ಗುತ್ತಿಗೆದಾರರು ಬಲಿಪಶು ಆಗದಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಸರ್ಕಾರದ ನೂತನ ನಿಯಮವನ್ನು ಅಳವಡಿಸಿಕೊಂಡರೆ ಅದರ ಪರೋಕ್ಷ ಹೊರೆಯನ್ನು ಗುತ್ತಿಗೆದಾರರು ಹಾಗೂ ಖರೀದಿದಾರರು ಹೊರಬೇಕಾಗುತ್ತದೆ. ನೂತನವಾಗಿ ವೇ ಬ್ರಿಡ್ಜ್ ಅಳವಡಿಕೆ, ರಾಜಧನ ಪರಿಷ್ಕರಣೆಯಿಂದ ಜಲ್ಲಿ, ಕಲ್ಲು, ಎಂ.ಸ್ಯಾAಡ್ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ. ಇದರ ಹೊರೆಯನ್ನು ನಾವುಗಳು ಭರಿಸಬೇಕಾಗುತ್ತದೆ. ಅಂತಹ ಕ್ರಮಕ್ಕೆ ಸರ್ಕಾರ ಮತ್ತು ಕ್ರಷರ್ ಘಟಕ ಮುಂದಾದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಸಮಸ್ಯೆಯ ಬಗ್ಗೆ ಶಾಸಕರು ಅಧಿವೇಶನದಲ್ಲಿ ಪ್ರಸ್ತಾಪಿಸಿ ಶೀಘ್ರವಾಗಿ ಬಗೆಹರಿಸಬೇಕು. ತಪ್ಪಿದಲ್ಲಿ ಈ ವರ್ಷದ ಕಾಮಗಾರಿಗಳು ಸ್ಥಗಿತಗೊಳ್ಳಲಿವೆ ಎಂದು ಲಾರೆನ್ಸ್ ಅಭಿಪ್ರಾಯಿಸಿದರು. ಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಎನ್.ಡಿ. ವಿನೋದ್, ಸದಸ್ಯರಾದ ಯೋಗೇಶ್, ಎಸ್‌ಸಿಎಸ್‌ಟಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್.ಸಿ. ವಿಜಯಕುಮಾರ್, ಸುಬ್ರಮಣಿ ಅವರುಗಳು ಉಪಸ್ಥಿತರಿದ್ದರು.