ಮಡಿಕೇರಿ, ಡಿ. ೨೯: ಮಡಿಕೇರಿ ಬಳಿಯ ಮೇಕೇರಿ ಗ್ರಾಮದ ರಸ್ತೆಯಲ್ಲಿ ದ್ವಿಚಕ್ರ ವಾಹನವೊಂದು ಡಿಕ್ಕಿಯಾಗಿ ೫ ವರ್ಷದ ಮಗುವೊಂದು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

ಎರಡು ದಿನಗಳ ಹಿಂದೆ ಸಂಜೆ ವೇಳೆಗೆ ರಸ್ತೆ ಬದಿಯಲ್ಲಿ ತಾಯಿಯೊಂದಿಗೆ ನಿಂತಿದ್ದ ಅಸ್ಸಾಂ ಮೂಲದ ಅಸ್ಮಾ ಕುತುಮ್ ಹಾಗು ಇದ್ರಿಸ್ ಅಲಿ ದಂಪತಿಯ ಪುತ್ರಿ ೫ ವರ್ಷದ ಇಳಿಜಾ ಕುಟುಮ್ ಮೇಲೆ ಮೂರ್ನಾಡು ಕಡೆಯಿಂದ ವೇಗವಾಗಿ ಬಂದ ಸಚಿನ್ ಎಂಬಾತ ಚಾಲಿಸುತ್ತಿದ್ದ ಸ್ಕೂಟಿ ಡಿಕ್ಕಿ ಹೊಡೆದಿದ್ದು, ಮಗು ಸ್ಥಳದಲ್ಲೇ ಸಾವನ್ನಪ್ಪಿದೆ. ಸಚಿನ್‌ಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತ ಮಗುವಿನ ಪೋಷಕರು ಮೇಕೇರಿ ಗ್ರಾಮದ ಧನೇಶ್ ಎಂಬವರ ತೋಟದ ಲೈನ್ ಮನೆಯಲ್ಲಿ ಕಳೆದ ಮೂರು ತಿಂಗಳಿನಿAದ ವಾಸವಿದ್ದರು.