ಪೊನ್ನಂಪೇಟೆ, ಡಿ. ೨೯: ಕೊಡವ ಎಜುಕೇಶನ್ ಸೊಸೈಟಿಯ ಆಶ್ರಯದಲ್ಲಿ ಕಾರ್ಯನಿರ್ವಹಿಸುತ್ತಿ ರುವ ಕೂರ್ಗ್ ಇಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜು ರಾಷ್ಟಿçÃಯ ಮೌಲ್ಯ ಮಾಪನ ಮತ್ತು ಮಾನ್ಯತಾ ಮಂಡಳಿಯಿAದ ನ್ಯಾಕ್ ‘ಂ’ ಗ್ರೇಡ್ ಮಾನ್ಯತೆಯನ್ನು ಪಡೆದುಕೊಂಡಿದೆ.

ಇದಕ್ಕೆ ಸಂಬAಧಿಸಿದ ದಾಖಲೆಯನ್ನು ಬುಧವಾರ ಸಿಐಟಿಯ ಕಾರ್ಯದರ್ಶಿ ಸಿ.ಪಿ. ರಾಕೇಶ್ ಪೂವಯ್ಯ ಅವರು, ಸಿಐಟಿಯ ಪ್ರಾಂಶುಪಾಲ ಡಾ. ಎಂ. ಬಸವರಾಜ್, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಸಮ್ಮುಖದಲ್ಲಿ ಬಿಡುಗಡೆ ಮಾಡಿದರು.

ನ್ಯಾಕ್ ಮಾರ್ಗಸೂಚಿಗಳಿಗೆ ಅನುಗುಣವಾಗಿ ಸಂಸ್ಥೆಯನ್ನು ಮೌಲ್ಯಮಾಪನ ಮಾಡಲು ಮೌಲ್ಯಮಾಪಕರ ತಂಡವು ತಾ. ೨೨ ಮತ್ತು ೨೩ ರಂದು ಸಿಐಟಿಯ ಹಲವಾರು ವಿಭಾಗಗಳಿಗೆ ಭೇಟಿ ನೀಡಿತ್ತು.

ಯಶಸ್ಸಿಗೆ ಕಾರಣರಾದ ಪ್ರಾಚಾರ್ಯರು ಹಾಗೂ ಸಿಬ್ಬಂದಿ ಯನ್ನು ಶ್ಲಾಘಿಸಿದ ಕೆಇಎಸ್ ಅಧ್ಯಕ್ಷ ಡಾ. ಎಂ.ಸಿ. ಕಾರ್ಯಪ್ಪ ಮಾತನಾಡಿ, ‘ಂ’ ಗ್ರೇಡ್ ಮಾನ್ಯತೆಯಿಂದ ಸಿಬ್ಬಂದಿಯ ಜವಾಬ್ದಾರಿ ಹೆಚ್ಚಿದೆ ಎಂದರು.

ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾದ ಡಾ. ಪುಷ್ಪಾ ಕುಟ್ಟಣ್ಣ, ಡಾ. ಪೊನ್ನಮ್ಮ ಮಾಚಯ್ಯ ಮತ್ತು ಕೆ.ಎಸ್. ತಿಮ್ಮಯ್ಯ, ಸಿಐಟಿಯ ತಂಡಗಳಿಗೆ ನ್ಯಾಕ್ ತಯಾರಿ ನಡೆಸಲು ಮಾರ್ಗದರ್ಶನ ನೀಡಿದರು.

ಸಿಐಟಿಯ ನ್ಯಾಕ್ ಸಂಯೋಜಕ ಡಾ. ರಾಮಕೃಷ್ಣ, ಆಂತರಿಕ ಗುಣಮಟ್ಟ ಭರವಸೆ ಕೋಶ ಸಂಯೋಜಕ, ಪ್ರೊ. ಬಿ.ಜೆ. ಕಿಶನ್‌ಕರುಂಬಯ್ಯ, ಹಾಗೂ ಎಲ್ಲ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.