ಭಾಗಮಂಡಲ, ಡಿ. ೨೯: ಚೇರಂಬಾಣೆ ಗೌಡ ಸಮಾಜ ಮತ್ತು ಕೊಡಗು ಗೌಡ ಯುವ ವೇದಿಕೆ ಸಂಯುಕ್ತ ಆಶ್ರಯದಲ್ಲಿ ಚೇರಂಬಾಣೆಯಲ್ಲಿ ಕೊಡಗು ಗೌಡ ಜನಾಂಗದ ಗ್ರಾಮ ಗ್ರಾಮಗಳ ನಡುವಿನ ಕ್ರಿಕೆಟ್ ಪಂದ್ಯಾಟದ ಗುರುವಾರದ ಪಂದ್ಯಗಳಲ್ಲಿ ಯುನೈಟೆಡ್ ಕರಿಕೆ ತಂಡ ಸೆಮಿಫೈನಲ್ ಪ್ರವೇಶಿಸಿತು.

ದಿನದ ಮೊದಲ ಪಂದ್ಯದಲ್ಲಿ ತಣ್ಣಿಮಾನಿ ಭಗವತಿ ತಂಡವು ಐದು ವಿಕೆಟ್ ನಷ್ಟಕ್ಕೆ ೭೪ ರನ್‌ಗಳಿಸಿತು. ಕರಿಕೆ ಯುನೈಟೆಡ್ ತಂಡವು ಏಳು ಓವರ್‌ನಲ್ಲಿ ೭೬ ರನ್‌ಗಳಿಸಿ ೨ ರನ್‌ಗಳ ಜಯ ಸಾಧಿಸಿತು. ನಂತರದ ಪಂದ್ಯದಲ್ಲಿ ಟೀಮ್ ಫೋನಿಕ್ಸ್ ತಂಡ ಬಾಡಗ ಮೂರು ವಿಕೆಟ್ ನಷ್ಟಕ್ಕೆ ೬೮ ರನ್ ಗಳಿಸಿತು . ಭಗವತಿ ಬಾಯ್ಸ್ ಕುಯ್ಯಂಗೇರಿ ತಂಡ ಏಳು ಓವರ್‌ನಲ್ಲಿ ೭೩ ರನ್‌ಗಳಿಸಿ ಜಯಸಾಧಿಸಿತು. ಮೂರನೇ ಪಂದ್ಯದಲ್ಲಿ ಸಂಪಾಜೆಯ ಆದರ್ಶ ತಂಡವು ಆರು ವಿಕೆಟ್ ನಷ್ಟಕ್ಕೆ ೯೯ರನ್ ಗಳಿಸಿತು. ಟೀಂ ಸಿಂಗತ್ತೂರು ೪ ವಿಕೆಟ್‌ಗೆ ೭೨ ರನ್‌ಗಳಿಸಿ ಸೋಲನುಭವಿಸಿತು. ಯುನೈಟೆಡ್ ಕರಿಕೆ ತಂಡ ಮೂರು ವಿಕೆಟ್ ನಷ್ಟಕ್ಕೆ ೧೦೨ ರನ್‌ಗಳಿಸಿತು. ಮೂರನೇ ಪಂದ್ಯದಲ್ಲಿ ಟೀಂ ಫೋನಿಕ್ಸ್ ಒಂಭತ್ತು ವಿಕೆಟ್ ನಷ್ಟಕ್ಕೆ ೫೨ ರನ್‌ಗಳಿಸಿ ಸೋಲನುಭವಿಸಿತು. ವೀರಾಜಪೇಟೆಯ ಗೌಡ ವಾರಿಯರ್ಸ್ ಹಾಗೂ ಸಂಪಾಜೆಯ ಆದರ್ಶ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಆದರ್ಶ ಸಂಪಾಜೆ ತಂಡವು ಎಂಟು ವಿಕೆಟ್ ನಷ್ಟಕ್ಕೆ ೬೨ ರನ್‌ಗಳಿಸಿದರೆ ವೀರಾಜಪೇಟೆಯ ಗೌಡ ವಾರಿಯರ್ಸ್ ತಂಡ ೫೮ ರನ್ ಗಳಿಸಿ ೪ ರನ್‌ಗಳ ಸೋಲನ್ನು ಅನುಭವಿಸಿತು. ಪಂದ್ಯಾವಳಿಯ ನಿಯಮಗಳನ್ನು ಉಲ್ಲಂಘಿಸಿದ್ದರಿAದ ಸಂಪಾಜೆಯ ಆದರ್ಶ ತಂಡಕ್ಕೆ ಪಂದ್ಯಾಟದ ಆಯೋಜಕರು ನಿಷೇಧ ಹೇರಿದ ಪರಿಣಾಮ ಯುನೈಟೆಡ್ ಕರಿಕೆ ತಂಡವು ಸೆಮಿಫೈನಲ್ ಪ್ರವೇಶಿಸಿತು.

-ಸುನಿಲ್