ಮಡಿಕೇರಿ, ಡಿ. ೩೦: ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಮಡಿಕೇರಿ ಇಲ್ಲಿ ಬಿಎಸ್ಸಿ ಅಲೈಡ್ ಹೆಲ್ತ್ ಸೈನ್ಸಸ್ ಕೋರ್ಸ್ ಪ್ರಾರಂಭವಾಗಿದ್ದು, ಸಂಸ್ಥೆಯಲ್ಲಿ ೫ ವಿಭಾಗಗಳಾದ ಬಿಎಸ್ಸಿ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿ, ಬಿಎಸ್ಸಿ ಅನೆಸ್ತೇಷಿಯ ಮತ್ತು ಓಟಿ ಟೆಕ್ನಾಲಜಿ, ಬಿ.ಎಸ್ಸಿ ಆಪ್ಟೊಮೆಟ್ರಿ, ಬಿ.ಎಸ್ಸಿ ರೆಸ್ಪಿರೇಟರಿ ಕೇರ್ ಟೆಕ್ನಾಲಜಿ, ಬಿ.ಎಸ್ಸಿ ಮೆಡಿಕಲ್ ಇಮ್ಯಾಜಿಂಗ್ ಟೆಕ್ನಾಲಜಿ ವಿಭಾಗಗಳಿಗೆ ಅರ್ಜಿ ಸಲ್ಲಿಸಿದ ಅರ್ಹ ವಿದ್ಯಾರ್ಥಿಗಳು ದ್ವಿತೀಯ/ ತೃತೀಯ ಸುತ್ತಿನಲ್ಲಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಮಡಿಕೇರಿ(ನಂ. ೧೨೩೭)ಯನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ ಎಂದು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕರು ಹಾಗೂ ಡೀನ್ ತಿಳಿಸಿದ್ದಾರೆ.