ಮಡಿಕೇರಿ, ಡಿ. ೨೯: ಇತ್ತೀಚೆಗೆ ಗೋಣಿಕೊಪ್ಪದ ಸೀನಿಯರ್ ಚೇಂಬರ್ಸ್ ಇಂಟರ್‌ನ್ಯಾಷನಲ್ ವತಿಯಿಂದ ಬಲ್ಯಮಂಡೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ೧೦ ಚೇರ್‌ಗಳನ್ನು ಅಧ್ಯಕ್ಷ ಮಂಡೆಪAಡ ಸಚಿನ್ ನೀಡಿದರು. ಈ ಸಂದರ್ಭ ಕಾರ್ಯದರ್ಶಿ ಮುರುವಂಡ ರತ್ತು ಉತ್ತಪ್ಪ, ಮಾಜಿ ಅಧ್ಯಕ್ಷ ಮನ್ನಕ್ಕಮನೆ ಬಾಲು, ಮುಖ್ಯ ಶಿಕ್ಷಕಿ ಮಾನಸ ಭಟ್, ಗ್ರಾಮ ಪಂಚಾಯಿತಿ ಸದಸ್ಯೆ ಜಯಂತಿ, ಸಮೂಹ ಸಂಪನ್ಮೂಲ ವ್ಯಕ್ತಿ ತಿರುನ್ನೆಲ್ಲಿಮಾಡ ಜೀವನ್, ಸಿಬ್ಬಂದಿಗಳಾದ ಸುನೋಜ, ಅಂಗನವಾಡಿ ಶಿಕ್ಷಕರಾದ ಪದ್ಮ, ಸೌಮ್ಯ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.