ಸುಂಟಿಕೊಪ್ಪ, ಡಿ. ೩೦: ಕೊಡಗು ಜಿಲ್ಲಾ ಗೌಡ ನೌಕರರ ಟ್ರಸ್ಟ್ ಅಸ್ತಿತ್ವಕ್ಕೆ ಬಂದಿದೆ. ನೂತನ ಅಧ್ಯಕ್ಷರಾಗಿ ಸಿ.ಟಿ. ಸೋಮಶೇಖರ್ ಆಯ್ಕೆಯಾಗಿದ್ದಾರೆ.

ಕುಶಾನಗರದ ಅತಿಥಿ ಕಂಫರ್ಟ್ ಹೊಟೇಲ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ನೂತನ ಆಡಳಿತ ಮಂಡಳಿಯನ್ನು ರಚಿಸಲಾಗಿದ್ದು, ಪ್ರಧಾನ ಕಾರ್ಯದರ್ಶಿಯಾಗಿ ಎಂ. ರಂಗಸ್ವಾಮಿ, ಖಜಾಂಚಿಯಾಗಿ ಹೆಚ್.ಜೆ. ನಾಗರಾಜ್, ಉಪಾಧ್ಯಕ್ಷರುಗಳಾಗಿ ಪಿ.ಎಸ್. ಜನಾರ್ಧನ, ಎಸ್.ಎ. ಯೋಗೇಶ, ಡಿ. ಚಂದನ, ಸಂಘಟನಾ ಕಾರ್ಯ ದರ್ಶಿಯಾಗಿ ಹೆಚ್.ಎಸ್. ಚೇತನ, ಸಿ.ಎಸ್. ವಿಶಾಲಾಕ್ಷಿ, ಎಂ.ಟಿ. ದಯಾನಂದ, ಪ್ರಕಾಶ್, ಸಹ ಕಾರ್ಯದರ್ಶಿಗಳಾಗಿ ಡಿ.ಪಿ. ಧರ್ಮಪ್ಪ, ಕೆ.ಎಸ್. ನಳಿನಾಕ್ಷಿ, ಎ.ಎಂ. ಆನಂದ ಹಾಗೂ ಎಂ.ಸಿ. ಸೀಮಾ, ಗೌರವಾಧ್ಯಕ್ಷರಾಗಿ ಸಿ.ಕೆ. ಮಲ್ಲಪ್ಪ ಹಾಗೂ ಎಲ್ಲಾ ಇಲಾಖೆಯಿಂದ ತಲಾ ಒಬ್ಬರಂತೆ ೧೫ ಮಂದಿ ನಿರ್ದೇಶಕರುಗಳನ್ನು ಆಯ್ಕೆ ಮಾಡಲಾಯಿತು.

ಆದಿಚುಂಚನಗಿರಿ ಮಠಾಧೀಶರಾದ ಡಾ. ನಿರ್ಮಲಾನಂ ಸ್ವಾಮೀಜಿಯವರನ್ನು ಕರೆಯಿಸಿ ಅದ್ಧೂರಿಯಾಗಿ ಪದಗ್ರಹಣ ಸಮಾರಂಭ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಅಲ್ಲದೆ ಗೌಡ ನೌಕರ ಟ್ರಸ್ಟ್ನ ಸದಸ್ಯರು ಮಕ್ಕಳು ಪಿಯುಸಿ, ಪದವಿ ಇಂಜಿನಿಯರಿAಗ್, ವೈದ್ಯಕೀಯ ಪದವಿಯಲ್ಲಿ ಅತೀ ಹೆಚ್ಚು ಅಂಕಪಡೆದ ಮಕ್ಕಳಿಗೆ ಕ್ರೀಡೆಯಲ್ಲಿ ರಾಜ್ಯ, ರಾಷ್ಟçಮಟ್ಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲು ತೀರ್ಮಾನಿಸಲಾಯಿತು.