ಮಡಿಕೇರಿ, ಡಿ. ೨೮: ಬ್ಯಾಂಕ್‌ಗೆ ಮರುಪಾವತಿಸಬೇಕಾಗಿದ್ದ ಹಳೆಯ ಸಾಲದ ವಸೂಲಾತಿಗೆಂದು ತೆರಳಿದ್ದ ಬ್ಯಾಂಕ್ ಅಧಿಕಾರಿ ಮೇಲೆ ಸಾಲಪಡೆದಿರುವ ವ್ಯಕ್ತಿ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ. ಈ ಬಗ್ಗೆ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಡಿಕೇರಿಯ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನಿAದ ತ್ಯಾಗರಾಜನಗರದ ನಿವಾಸಿ ಫೈರೋಜ್ ಎಂಬವರು ೨೦೧೮ರಲ್ಲಿ ರೂ. ೧ ಲಕ್ಷದಷ್ಟು ಮೊತ್ತದ ಮುದ್ರಾ ಸಾಲ ಪಡೆದಿದ್ದು, ಇದನ್ನು ಈತನಕ ಮರು ಪಾವತಿಸಿರಲಿಲ್ಲ. ಈ ಬಗ್ಗೆ ನೋಟೀಸ್ ಜಾರಿಗೊಳಿಸಿದರೂ ಸ್ಪಂದಿಸದಿದ್ದಾಗ ಸಾಲ ವಸೂಲಾತಿಗೆಂದು ಬ್ಯಾಂಕ್‌ನ ಮುಖ್ಯ ಕಚೇರಿಯ ಶಾಖಾ ವ್ಯವಸ್ಥಾಪಕರಾದ ಭಾಸ್ಕರ್ ಕೆ.ವಿ. ಅವರು ನಿನ್ನೆ ಫೈರೋಜ್‌ನ ಜಾಮೀನುದಾರರಾದ ಹೆಚ್.ಎಸ್. ಯೋಗೇಶ್ ಕುಮಾರ್, ಹೆಚ್.ಆರ್. ಗಿರೀಶ್ ಹಾಗೂ ಬ್ಯಾಂಕ್ ಸಿಬ್ಬಂದಿ ದೂಮಪ್ಪ ಅವರೊಂದಿಗೆ ಮನೆಗೆ ತೆರಳಿದ್ದಾರೆ. ಈ ಸಂದರ್ಭ ಫೈರೋಜ್ ಏಕಾಏಕಿ ವ್ಯವಸ್ಥಾಪಕ ಭಾಸ್ಕರ್ ಅವರ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿದ್ದಾರೆ. ಗಾಯಗೊಂಡ ಅವರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ನಗರ ಠಾಣೆಗೆ ದೂರು ನೀಡಿದ್ದಾರೆ. ಈ ಪುಕಾರಿನಂತೆ ಎಫ್‌ಐಆರ್ ದಾಖಲಾಗಿದ್ದು, ಆರೋಪಿ ತಲೆಮರೆಸಿಕೊಂಡಿದ್ದಾನೆ.