ಮಡಿಕೇರಿ, ಡಿ. ೨೯: ೨೦೨೩-೨೪ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ “ಜಲ ಸಂಜೀವಿನಿ” ಕಾರ್ಯಕ್ರಮವನ್ನು ರಾಜ್ಯವ್ಯಾಪಿ ಕಾರ್ಯಗತಗೊಳಿಸಲು, ಮೇಲ್ವಿಚಾರಣೆ ಮಾಡಲು ಮತ್ತು ಯಶಸ್ವಿಯಾಗಿ ಅನುಷ್ಠಾನ ಮಾಡಲು ಪ್ರತಿ ಜಿಲ್ಲೆಗೆ ಒಬ್ಬರು ನುರಿತ ಅನುಭವವುಳ್ಳ, ಉತ್ಸಾಹ ಮತ್ತು ಸಮರ್ಪಿತ ಮನೋಭಾವವುಳ್ಳ ವ್ಯಕ್ತಿಯನ್ನು ಸಮಾಲೋಚಕರಾಗಿ ನೇಮಿಸಿಕೊಳ್ಳಲು ಅರ್ಜಿ ಆಹ್ವಾನಿಸ ಲಾಗಿದೆ. ಪ್ರಸ್ತುತ ವೈಜ್ಞಾನಿಕ ಯೋಜನೆ ಯಡಿ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜಲಾನಯನ ಆಧಾರಿತ ತಂತ್ರಜ್ಞಾನಗಳನ್ನು ಬಳಸಿಕೊಂಡು ಯೋಜನೆಯನ್ನು ಅನುಷ್ಠಾನ ಗೊಳಿಸುವ ಸಲುವಾಗಿ ಸರ್ಕಾರದ ನಿರ್ದೇಶನದಂತೆ ಕೊಡಗು ಜಿಲ್ಲೆಗೆ ಒಬ್ಬ ಜಲ ಸಂಜೀವಿನಿ ಜಿಲ್ಲಾ ಸಂಯೋಜಕರನ್ನು ಅರ್ಹತೆ ಅನುಸಾರವಾಗಿ ಆಯ್ಕೆ ಮಾಡಿ ಕೊಳ್ಳಲು ನಿರ್ದರಿಸಿದ್ದು, ಆಸಕ್ತಿಯುಳ್ಳ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಜನವರಿ ೩ ರ ಸಂಜೆ ೫.೩೦ ಗಂಟೆ ಕೊನೆಯ ದಿನವಾಗಿದೆ. ಅರ್ಜಿಯನ್ನು ಜಿಲ್ಲಾ ಪಂಚಾಯಿತಿ/ ತಾಲೂಕು ಪಂಚಾಯಿತಿ / ಗ್ರಾಮ ಪಂಚಾಯಿತಿ ಕಾರ್ಯಾಲಯ/ ಕೃಷಿ/ ತೋಟಗಾರಿಕೆ/ ಅರಣ್ಯ/ ರೇಷ್ಮೇ ಇಲಾಖೆಗಳ ಜಿಲ್ಲಾ ಕಾರ್ಯಾಲಯಗಳು, ಭರ್ತಿ ಮಾಡಿದ ಅರ್ಜಿಯನ್ನು ಕೊಡಗು ಜಿಲ್ಲಾ ಪಂಚಾಯಿತಿ ಕಾರ್ಯಾಲಯ, ವೇತನ ಮತ್ತು ಭತ್ಯೆ ರೂ. ೫೦ ಸಾವಿರ, ಪ್ರತಿ ಮಾಹೆ ಮತ್ತು ರೂ. ೫,೦೦೦ ಪ್ರಯಾಣ ಭತ್ಯೆ + ಇತರ ಭತ್ಯೆ, ವಯೋಮಿತಿ- ಗರಿಷ್ಠ ೬೫ ವರ್ಷ, ಕಾರ್ಯ ನಿರ್ವಹಿಸುವ ಅವಧಿ ಒಂದು ವರ್ಷಕ್ಕೆ (ಅವಶ್ಯಕತೆಗನುಗುಣವಾಗಿ ಸೇವಾ ಅವಧಿಯನ್ನು ವಿಸ್ತರಿಸಲಾಗುವುದು)
ನಿವೃತ್ತಿ ಹೊಂದಿರುವ ಅಧಿಕಾರಿಗಳು, ಬಿಎಸ್ಸಿ (ಂgಡಿiಛಿuಟಣuಡಿe) ಅಥವಾ ಬಿ.ಟೆಕ್ (ಂgಡಿiಛಿuಟಣuಡಿe ಇಟಿgiಟಿeeಡಿiಟಿg), ಕೃಷಿ/ ಜಲಾನಯನ ಅಭಿವೃದ್ಧಿ ಇಲಾಖೆ ಯಲ್ಲಿ ಕಾರ್ಯನಿರ್ವಹಿಸಿದ ನಿವೃತ್ತ ಅಧಿಕಾರಿಗಳು. ಜಲಾನಯನ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನದ ಕನಿಷ್ಟ ೧೦ ವರ್ಷ ಅನುಭವ ಹೊಂದಿರಬೇಕು. ಕನಿಷ್ಟ ಸಹಾಯಕ ಕೃಷಿ ನಿರ್ದೇಶಕರ ಹುದ್ದೆಯಲ್ಲಿ ನಿವೃತ್ತಿ ಹೊಂದಿರುವ ಅಧಿಕಾರಿಗಳು. ಜಿಲ್ಲಾ ಪಂಚಾಯಿತಿ ಹಾಗೂ ಇತರ ಅನುಷ್ಠಾನ ಇಲಾಖೆಯೊಡನೆ ಸಮನ್ವಯ ಸಾಧಿಸುವ ಸಾಮರ್ಥ್ಯ ಹೊಂದಿರ ಬೇಕು. ಸತತವಾಗಿ ಕ್ಷೇತ್ರ ಭೇಟಿ ಮಾಡುವ ಹಾಗೂ ಎಲ್ಲಾ ಅಧಿಕಾರಿ/ ಸಿಬ್ಬಂದಿಗಳಿಗೆ ಮಾರ್ಗದರ್ಶನ ನೀಡುವ ಸಾಮರ್ಥ್ಯ ಹೊಂದಿರಬೇಕು. ಸರ್ಕಾರೇತರ/ ಇತರ ಸಂಸ್ಥೆಗಳಲ್ಲಿ ಬಿ.ಎಸ್ಸಿ (ಂgಡಿiಛಿuಟಣuಡಿe) ಅಥವಾ ಬಿ.ಟೆಕ್ (ಂgಡಿiಛಿuಟಣuಡಿe ಇಟಿgiಟಿeeಡಿiಟಿg) ಪದವಿಧರರು ಅಥವಾ ಜಿಐಎಸ್ ತಂತ್ರಾAಶದ ಪರಿಣತಿ ಹೊಂದಿರಬೇಕು. ಸರ್ಕಾರೇತರ ಸಂಸ್ಥೆಗಳು/ ಇತರ ಸಂಸ್ಥೆಗಳಲ್ಲಿ ಜಲಾನಯನ ಅಭಿವೃದ್ಧಿ ಕಾರ್ಯಕ್ರಮ ವನ್ನು ಅನುಷ್ಠಾನ ಗೊಳಿಸಿದ್ದು, ಕನಿಷ್ಟ ೧೦ ವರ್ಷ ಅನುಭವ ಹೊಂದಿರಬೇಕು. ಸರ್ಕಾರೇತರ ಸಂಸ್ಥೆಗಳು/ ಇತರ ಸಂಸ್ಥೆಗಳಲ್ಲಿ ಕನಿಷ್ಟ ತಂಡದ ಮುಖ್ಯಸ್ಥ ರಾಗಿ ಕಾರ್ಯನಿರ್ವಹಿಸಿರಬೇಕು. ಜಲಾನಯನ ಪ್ರದೇಶದ ಅಭಿವೃದ್ಧಿ ದೂರ ಸಂವೇದಿ ಮತ್ತು ಜಿಯೋ ಸ್ಪೇಶಿಯಲ ಆಧಾರಿತ ತಂತ್ರಜ್ಞಾನ (ಖemoಣe seಟಿsiಟಿg & ಉeo-sಠಿeಣiಚಿಟ iಟಿಜಿoಡಿmಚಿಣioಟಿ Sಥಿsಣem ಖS-ಉIS) ಬಳಕೆಯ ಅನುಭವ ಹೊಂದಿರಬೇಕು.
ಜಿಲ್ಲಾ ಪಂಚಾಯಿತಿ ಹಾಗೂ ಇತರೆ ಅನುಷ್ಠಾನ ಇಲಾಖೆಯೊಡನೆ ಸಮನ್ವಯ ಸಾಧಿಸುವ ಸಾಮರ್ಥ್ಯ ಹೊಂದಿರಬೇಕು. ಸತತವಾಗಿ ಕ್ಷೇತ್ರ ಭೇಟಿ ಮಾಡುವ ಹಾಗೂ ಎಲ್ಲಾ ಅಧಿಕಾರಿ/ ಸಿಬ್ಬಂದಿಗಳಿಗೆ ಮಾರ್ಗದರ್ಶನ ನೀಡುವ ಸಾಮರ್ಥ್ಯ ಹೊಂದಿರಬೇಕು ಎಂದು ಜಿ.ಪಂ. ಸಿಇಓ ಡಾ. ಎಸ್. ಆಕಾಶ್ ಅವರು ತಿಳಿಸಿದ್ದಾರೆ.