ಮಡಿಕೇರಿ, ಡಿ. ೨೮: ಭಾರತ ಕಮ್ಯುನಿಸ್ಟ್ ಪಕ್ಷ ಕೊಡಗು ಜಿಲ್ಲಾ ಸಮಿತಿ ವತಿಯಿಂದ ಭಾರತ ಕಮ್ಯುನಿಸ್ಟ್ ಪಕ್ಷದ ೯೮ನೇ ಸಂಸ್ಥಾಪನಾ ದಿನಾಚರಣೆಯನ್ನು ಮಾದಾಪುರ ಆದಿದ್ರಾವಿಡ ಸಭಾಂಗಣದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಐಟಿಯುಸಿ ಜಿಲ್ಲಾಧ್ಯಕ್ಷ ಹೆಚ್.ಎಂ. ಸೋಮಪ್ಪ, ಬೆಲೆ ಏರಿಕೆ, ಟ್ಯಾಕ್ಸ್ನಿಂದಾಗಿ ದುಡಿಯುವ ವರ್ಗ, ಲೈನ್ ಮನೆಯಲ್ಲಿ ವಾಸಿಸುತ್ತಿರುವ ಕೂಲಿ ಕರ್ಮಿಕರು ಪ್ರತಿದಿನ ತೊಂದರೆ ಅನುಭವಿಸುವಂತಾಗಿದೆ ಎಂದರು.
ಸಿಪಿಐ ಕೊಡಗು ಜಿಲ್ಲಾ ಕಾರ್ಯದರ್ಶಿ ಕೆ. ಸುನಿಲ್ ಮಾತನಾಡಿ, ಭಾರತ ಕಮ್ಯುನಿಸ್ಟ್ ಪಕ್ಷ ದುಡಿಯುವ ವರ್ಗ, ಕೂಲಿ ಕಾರ್ಮಿಕರು ಹಾಗೂ ಈ ದೇಶದ ಅತ್ಯಂತ ಕೆಳವರ್ಗದ ಪರವಾಗಿ, ಕಾರ್ಮಿಕರ ಪರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು. ರೈತ ಮುಖಂಡ ಲಕ್ಷö್ಮಣ್ ಮಾತನಾಡಿ, ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಬೆಲೆ ಏರಿಕೆ ಯಿಂದ ದುರ್ಬಲರು ಸಂಕಷ್ಟಪಡುವAತಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಿಪಿಐ ಉಪ ಕಾರ್ಯದರ್ಶಿ ರಫಿಕ್, ಸಲಹೆಗಾರ ಶೇಷಪ್ಪ, ಕಟ್ಟಡ ಕಾರ್ಮಿಕ ಕಾರ್ಯದರ್ಶಿ ಕೃಷ್ಣ, ಸಿಪಿಐ ಸದಸ್ಯರಾದ ಗಣೇಶ್, ಮಂಜುನಾಥ್, ಕುಸುಮಾವತಿ, ರಮೇಶ್, ಸೋಮು ಹಾಗೂ ಇತರರು ಹಾಜರಿದ್ದರು. ವೀರಾಜಪೇಟೆ ತಾಲೂಕು ಕಾರ್ಯದರ್ಶಿ ಕೃಷ್ಣ ನಿರೂಪಿಸಿ, ವಂದಿಸಿದರು.