ಮಡಿಕೇರಿ, ಡಿ. ೨೯: ಅರಣ್ಯ ಉತ್ಪನ್ನವಾದ ಬೀಟೆ ಮರದ ಸೊತ್ತುಗಳ ಕಳ್ಳ ಸಾಗಾಣಿಕೆಯಲ್ಲಿ ತೊಡಗಿದ್ದ ಟೆಂಪೋ ಟ್ರಾವೆಲರ್ ವಾಹನ ನೋಂದಣಿ ಸಂಖ್ಯೆ ಕೆಎ-೦೧-ಬಿ-೫೦೬೬ ನ್ನು ಕುಶಾಲನಗರ ವಲಯದ ಅರಣ್ಯ ಇಲಾಖೆ ಅಮಾನತ್ತುಪಡಿಸಿದ್ದು, ಅಧಿಕೃತ ಅಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ, ಮಡಿಕೇರಿ ವಿಭಾಗ, ಮಡಿಕೇರಿ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆಯನ್ನು ನಡೆಸಿ ಕರ್ನಾಟಕ ಅರಣ್ಯ ಕಾಯಿದೆ ೧೯೬೩ ಸೆಕ್ಷನ್೭೧(ಎ) ಯಿಂದ (ಜಿ) ಯವರೆಗೆ ಹಾಗೂ ಈವರೆಗಿನ ತಿದ್ದುಪಡಿಗನುಸಾರ ದತ್ತವಾದ ಅಧಿಕಾರವನ್ನು ಚಲಾಯಿಸಿ ವಾಹನ ಮತ್ತು ಸೊತ್ತನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಈ ಆದೇಶ ಹೊರಡಿಸಿದ ದಿನಾಂಕದಿAದ ೩೦ ದಿನಗಳ ಒಳಗೆ ಸಂಬAಧಿಸಿದವರು ಯಾವುದೇ ಮೇಲ್ಮನವಿಯನ್ನು ಸಲ್ಲಿಸದೇ ಇದ್ದಲ್ಲಿ ಇದೇ ಅಂತಿಮ ಆದೇಶವಾಗಿರುತ್ತದೆ. ನಂತರ ವಾಹನ ಮತ್ತು ಸೊತ್ತನ್ನು ಕಾನೂನು ರೀತ್ಯಾ ವಿಲೇವಾರಿಗೊಳಿಸಲು ಕೂಡ ಆದೇಶಿಸಿದೆ.

ಹೆಚ್ಚಿನ ವಿವರಗಳಿಗೆ ಉಪ ಅರಣ್ಯ ಸಂರಕ್ಷಣಾಧಿಕಾರಿಯವರ ಕಚೇರಿ, ಮಡಿಕೇರಿ ಇಲ್ಲಿ ಕೆಲಸದ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಮಡಿಕೇರಿ ವಿಭಾಗದ ಅಧಿಕೃತ ಅಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಅವರು ತಿಳಿಸಿದ್ದಾರೆ.