ಚೆಯ್ಯAಡಾಣೆ, ಡಿ ೨೮: ಸ್ಥಳೀಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಕಲಿಕಾ ಚೇತರಿಕೆಯ ಅಂಗವಾಗಿ ವಿದ್ಯಾರ್ಥಿಗಳಿಂದ ಮಕ್ಕಳ ಸಂತೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ನರಿಯಂದಡ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿದ್ದಂಡ ರಾಜೇಶ್ ಅಚ್ಚಯ್ಯ ಹಾಗೂ ಅಭಿವೃದ್ಧಿ ಅಧಿಕಾರಿ ಆಶಾ ಕುಮಾರಿ ಉದ್ಘಾಟಿಸಿದರು.

ವಿದ್ಯಾರ್ಥಿಗಳು ಸ್ವಂತ ತೋಟಗಳಲ್ಲಿ ಬೆಳೆದ ತರಕಾರಿ, ಸೊಪ್ಪು ಹಾಗೂ ಬೆಂಕಿ ಇಲ್ಲದ ಅಡುಗೆ ತಯಾರಿಸಿ ಮಾರಾಟ, ದಿನಸಿ ವಸ್ತುಗಳ ಮಾರಾಟ ಹಾಗೂ ಮತ್ತಿತರರು ವಸ್ತುಗಳನ್ನು ಮಾರಾಟ ಮಾಡಿ ಜನಮೆಚ್ಚುಗೆ ಗಳಿಸಿದರು.

ಶಾಲೆಯಲ್ಲಿ ಓದಿನ ಜೊತೆ ವ್ಯಾಪಾರವನ್ನು ಹೇಗೆ ಮಾಡಬಹುದು, ಎಂಬುದು ಅರಿವಾಗುತ್ತದೆ ಎಂದು ವಿದ್ಯಾರ್ಥಿ ರೋಷನ್ ಅಭಿಪ್ರಾಯ ವ್ಯಕ್ತಪಡಿಸಿದರು.

ಶಾಲಾ ಮುಖ್ಯ ಶಿಕ್ಷಕಿ ಮೀನಾ ಮಾತನಾಡಿ ವಿದ್ಯಾರ್ಥಿಗಳ ಪ್ರತಿಭೆಗಳನ್ನು ಹೊರತರಲು ಇದೊಂದು ಉತ್ತಮ ಕಾರ್ಯಕ್ರಮ. ಈ ಕಾರ್ಯಕ್ರಮ ಮಕ್ಕಳಿಗೆ ಬಹಳ ಸಂತೋಷ ತಂದಿದೆ. ವಿದ್ಯಾರ್ಥಿಗಳು ಮನೆಯಲ್ಲೇ ಬೆಳೆದಂತಹ ವಸ್ತುಗಳನ್ನು ಹಾಗೂ ಇನ್ನು ಹಲವಾರು ವಿಭಿನ್ನ ವಸ್ತುಗಳನ್ನು ತಂದು ಮಾರಾಟ ಮಾಡುತ್ತಿದ್ದಾರೆ.

ಇದರಿಂದ ಮಕ್ಕಳಿಗೆ ಕಲಿಕಾ ಚೇತರಿಕೆಯ ಅಂಗವಾಗಿ ಮಕ್ಕಳು ಅನೇಕ ವಿಷಯಗಳನ್ನು ಗ್ರಹಿಸಲು ಸಹಕಾರಿಯಾಗಲಿದೆ ಎಂದರು.

ಈ ಸಂದರ್ಭ ಎಸ್‌ಡಿಎಂಸಿ ಅಧ್ಯಕ್ಷರಾದ ರತ್ನಾ, ಶಾಲಾ ಶಿಕ್ಷಕಿಯರಾದ ದಮಯಂತಿ, ಜಯಪ್ರದ ಹಾಗೂ ಪೋಷಕ ವೃಂದದವರು ಹಾಜರಿದ್ದರು.