ವೀರಾಜಪೇಟೆ, ಡಿ. ೨೭: ಲಿಟಲ್ ಸ್ಕಾಲರ್ಸ್ ಅಕಾಡೆಮಿ ವತಿಯಿಂದ ಕಾರ್ನಿವಲ್ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಹಾಸ್ಯ ಕಲಾವಿದ ಮಿಮಿಕ್ರಿ ದಯಾನಂದ ಆಗಮಿಸಿ ಮಿಮಿಕ್ರಿ ಮೂಲಕ ರಂಜಿಸಿದರು.

ಶಾಲೆಯ ಅಧ್ಯಕ್ಷರಾದ ಪೂಜಾ ಸಜೇಶ್ ಮತ್ತು ಸಜೇಶ್, ಶಾಲೆಯ ಕಾರ್ಯದರ್ಶಿ ಪ್ರತಿಮರಂಜನ್ ಮತ್ತು ಮುಖ್ಯ ಶಿಕ್ಷಕರಾದ ಮೀರಾ ಪೂಣಚ್ಚ ಹಾಜರಿದ್ದರು. ಕಾರ್ನಿವಲ್ ಮತ್ತು ಕ್ರಿಸ್ಮಸ್ ಪ್ರಯುಕ್ತ ಶಾಲೆಯ ಮಕ್ಕಳಿಂದ ವಿವಿಧ ಕಾರ್ಯಕ್ರಮಗಳು ನಡೆದವು.